ETV Bharat / bharat

ಲಂಚಕ್ಕೆ ಬೇಡಿಕೆ: ಹಿರಿಯ ಪೋಸ್ಟ್‌ ಮಾಸ್ಟರ್ ಸೇರಿ ಇಬ್ಬರು ಸಿಬಿಐ ಬಲೆಗೆ - POSTAL DEPARTMENT BRIBERY CASE - POSTAL DEPARTMENT BRIBERY CASE

ಉತ್ತರ ಪ್ರದೇಶದ ಆಗ್ರಾದಲ್ಲಿ 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಪ್ರಕರಣದಲ್ಲಿ ಹಿರಿಯ ಪೋಸ್ಟ್‌ ಮಾಸ್ಟರ್ ಮತ್ತು ಸಾರ್ವಜನಿಕ ಸಂಪರ್ಕ ನಿರೀಕ್ಷಕನನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.

ಸಿಬಿಐ
CBI (ETV Bharat)
author img

By ETV Bharat Karnataka Team

Published : Jun 22, 2024, 10:17 PM IST

ನವದೆಹಲಿ: ಲಂಚ ಸ್ವೀಕಾರ ಆರೋಪ ಪ್ರಕರಣದಲ್ಲಿ ಉತ್ತರ ಪ್ರದೇಶದ ಆಗ್ರಾದ ಪ್ರಧಾನ ಅಂಚೆ ಕಚೇರಿಯಲ್ಲಿ ನಿಯೋಜನೆಗೊಂಡಿದ್ದ ಹಿರಿಯ ಪೋಸ್ಟ್‌ ಮಾಸ್ಟರ್ ಮತ್ತು ಸಾರ್ವಜನಿಕ ಸಂಪರ್ಕ ನಿರೀಕ್ಷಕನನ್ನು ಕೇಂದ್ರಿಯ ತನಿಖಾ ದಳ (ಸಿಬಿಐ) ಬಂಧಿಸಿದೆ. ದೇವೇಂದ್ರ ಕುಮಾರ್, ರಾಜೀವ್ ದುಬೆ ಎಂಬುವವರೇ ಬಂಧಿತ ಅಧಿಕಾರಿಗಳು ಎಂದು ಗುರುತಿಸಲಾಗಿದೆ.

ದೇವೇಂದ್ರ ಕುಮಾರ್ ಹಿರಿಯ ಪೋಸ್ಟ್ ಮಾಸ್ಟರ್ ಆಗಿದ್ದು, ರಾಜೀವ್ ದುಬೆ ಸಾರ್ವಜನಿಕ ಸಂಪರ್ಕ ನಿರೀಕ್ಷಕನಾಗಿದ್ದರೆ. 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸಂಬಂಧ ನೌಕರರೊಬ್ಬರು ನೀಡಿದ ದೂರಿನ ಮೇಲೆ ಶುಕ್ರವಾರ ಪ್ರಕರಣ ದಾಖಲಿಸಿಕೊಂಡು, ಇಬ್ಬರನ್ನೂ ಬಂಧಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ದೂರಿನ ಸಂಪೂರ್ಣ ವಿವರ: ದೂರುದಾರರ ವಿರುದ್ಧ ಇಲಾಖಾ ಪ್ರಕ್ರಿಯೆ ಬಾಕಿ ಇದೆ ಎನ್ನಲಾಗಿದೆ. ಇದರ ನಡುವೆ ಏಪ್ರಿಲ್ 25ರಂದು ಆಗ್ರಾ ವಿಭಾಗದ ಹಿರಿಯ ಅಂಚೆ ಕಚೇರಿಯ ಆದೇಶದ ಮೇರೆಗೆ ಆಗ್ರಾದ ಪ್ರಧಾನ ಅಂಚೆ ಕಚೇರಿಯಿಂದ ಆಗ್ರಾದ ಫೋರ್ಟ್ ಪ್ರಧಾನ ಕಚೇರಿಗೆ ಆತನ್ನು ಇತ್ತೀಚೆಗೆ ವರ್ಗಾಯಿಸಲಾಗಿತ್ತು. ಆದರೆ, ದೂರುದಾರರ ವಿರುದ್ಧ ಬಾಕಿ ಉಳಿದಿರುವ ಇಲಾಖಾ ಪ್ರಕ್ರಿಯೆಯಲ್ಲಿ ಅನುಕೂಲಕರವಾದ ವರದಿ ನೀಡಿದ ಕಾರಣಕ್ಕೆ ಸಾರ್ವಜನಿಕ ಸಂಪರ್ಕ ನಿರೀಕ್ಷಕನ ಮೂಲಕ 1 ಲಕ್ಷ ರೂಪಾಯಿಗಳನ್ನು ನೀಡುವಂತೆ ಆರೋಪಿ ಹಿರಿಯ ಪೋಸ್ಟ್‌ ಮಾಸ್ಟರ್ ಬೇಡಿಕೆಯಿಟ್ಟಿದ್ದ ಎಂದು ತನಿಖಾಧಿಕಾರಿಗಳು ನೀಡಿದ್ದಾರೆ.

ಸಿಬಿಐ ಕಾರ್ಯಾಚರಣೆ ಹೇಗಿತ್ತು?: ಇದರ ನಡುವೆ ಮಾತುಕತೆಯ ನಂತರ ಆರೋಪಿಗಳು ಲಂಚಕ್ಕೆ ಬೇಡಿಕೆಯ ಮೊತ್ತವನ್ನು 50,000 ರೂ.ಗೆ ಇಳಿಸಿದ್ದರು. ಈ ಲಂಚದ ಮೊತ್ತವನ್ನು ಸ್ವೀಕರಿಸುತ್ತಿದ್ದಾಗ ಸಿಬಿಐ ಅಧಿಕಾರಿಗಳು ಬಲೆ ಬೀಸಿ ದೇವೇಂದ್ರ ಕುಮಾರ್, ರಾಜೀವ್ ದುಬೆ ಇಬ್ಬರನ್ನೂ ಸೆರೆ ಹಿಡಿದಿದ್ದಾರೆ.

ಈ ಕಾರ್ಯಾಚರಣೆಯ ಸಮಯದಲ್ಲಿ ಹಿರಿಯ ಪೋಸ್ಟ್ ಮಾಸ್ಟರ್ 20,000 ರೂಪಾಯಿಗಳ ಲಂಚದ ಹಣವನ್ನು ಸಾರ್ವಜನಿಕ ಸಂಪರ್ಕ ನಿರೀಕ್ಷಕನಿಗೆ ಹಸ್ತಾಂತರಿಸುವಂತೆ ಸೂಚಿಸಿದ್ದರು. ಅದರಂತೆ 20,000 ರೂಪಾಯಿ ಹಣವನ್ನು ಸಹ ಆರೋಪಿಯಾದ ಸಾರ್ವಜನಿಕ ಸಂಪರ್ಕ ನಿರೀಕ್ಷಕನಿಗೆ ದೂರುದಾರರು ಹಸ್ತಾಂತರಿಸಿದ್ದರು.

ಬಳಿಕ ಆ ಹಣವನ್ನು ಪ್ರಮುಖ ಆರೋಪಿ ಪೋಸ್ಟ್‌ ಮಾಸ್ಟರ್‌ಗೆ ತಲುಪಿದ್ದರು. ಹೀಗಾಗಿ ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ. ಅಲ್ಲದೇ, ಆಗ್ರಾ ಮತ್ತು ಮಥುರಾದಲ್ಲಿ ಆರೋಪಿಗಳಿಗೆ ಸೇರಿದ ಮನೆಗಳಲ್ಲಿ ಸಿಬಿಐ ಶೋಧ ನಡೆಸಿದ್ದು, ಇದು ಕೆಲವು ದೋಷಾರೋಪಣೆ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದೂ ಅಧಿಕಾರಿಗಳು ವಿವರಿಸಿದ್ದಾರೆ.

ಇದನ್ನೂ ಓದಿ: ಬಿಹಾರ: ವಾರದೊಳಗೆ ಕುಸಿದು ಬಿತ್ತು ಮತ್ತೊಂದು ಸೇತುವೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.