ETV Bharat / bharat

ಜನ್ಮಾಷ್ಟಮಿ: ಆಗ್ರಾದ ಪ್ರಾರ್ಥನಾ ಮಂದಿರದ ಮುಂದೆ ಆರತಿ ಮಾಡಲು ಮುಂದಾದ ವ್ಯಕ್ತಿ ಪೊಲೀಸರ ವಶಕ್ಕೆ - HINDU LEADER AARTI STAIRS ARRESTED

author img

By ETV Bharat Karnataka Team

Published : Aug 27, 2024, 11:21 AM IST

ಆರತಿ ತಟ್ಟೆಯೊಂದಿಗೆ ಪ್ರಾರ್ಥನಾ ಮಂದಿರಕ್ಕೆ ಬಂದಿದ್ದ ಗೋಪಾಲ್​ ಚಹಲ್​ ಅವರನ್ನು ಬಂಧಿಸಲಾಗಿದೆ ಎಂದು ಮನ್ತೊಲ್​ ಪೊಲೀಸ್​ ಠಾಣೆಯ ಇನ್ಸ್​​ಪೆಕ್ಟರ್​​ ಸತ್ಯದೇವ್​ ಶರ್ಮಾ ತಿಳಿಸಿದ್ದಾರೆ.

Uttar Pradesh Agra Jama Masjid dispute Hindu leader going perform aarti on stairs arrested
ಜಾಮಾ ಮಸೀದಿ (ಈಟಿವಿ ಭಾರತ್​)

ಆಗ್ರಾ, ಉತ್ತರಪ್ರದೇಶ: ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನಲೆ ಹಿಂದೂ ಸಂಘಟನೆಯ ವ್ಯಕ್ತಿಯೊಬ್ಬರು ಆರತಿ ತಟ್ಟೆ ಹಿಡಿದು ಸೋಮವಾರ ಮಧ್ಯರಾತ್ರಿ ಇಲ್ಲಿನ ಜಾಮಾ ಮಸೀದಿಗೆ ಆಗಮಿಸಿದ ಘಟನೆ ನಡೆಯಿತು. ಇದನ್ನು ಗಮನಿಸಿದ ಪೊಲೀಸರು ಅಚ್ಚರಿಗೆ ಒಳಗಾಗಿ ಅವರನ್ನು ಮಸೀದಿಯ ಹೊರಗೆ ತಡೆದರು. ಈ ವೇಳೆ ಆತ ಜಾಮ ಮಸೀದಿಯ ಕೆಳಗೆ ಮಥುರಾ ಶ್ರೀ ಕೃಷ್ಣಭೂಮಿಯ ಕೇಶವನ ಮೂರ್ತಿ ಸಮಾಧಿ ಮಾಡಲಾಗಿದೆ. ಅದನ್ನು ನಾನು ಆರಾಧನೆ ಮಾಡಬೇಕು ಎಂದು ಹಠ ಹಿಡಿದಿದ್ದರು. ಈ ವೇಳೆ ಪೊಲೀಸರು ಆತನ ವಶಕ್ಕೆ ಪಡೆದುಕೊಂಡರು.

Uttar Pradesh Agra Jama Masjid dispute Hindu leader going perform aarti on stairs arrested
ಜಾಮಾ ಮಸೀದಿ ಮುಂದಿ ಉಂಟಾದ ಬಿಗುವಿನ ವಾತಾವರಣ (ಈಟಿವಿ ಭಾರತ್​​)

ಆಗ್ರಾದಲ್ಲಿರುವ ಜಮಾ ಮಸೀದಿಯ ಕೆಳಗೆ ಮಥುರಾದ ಕೇಶವ ಮೂರ್ತಿಯನ್ನು ಸಮಾಧಿ ಮಾಡಲಾಗಿದೆ ಎಂದು ಬಹಳ ಹಿಂದಿನಿಂದಲೂ ಹಿಂದೂ ಸಂಘಟನೆಗಳು ಆರೋಪಿಸುತ್ತಿವೆ. ಖ್ಯಾತ ಕಥೆಗಾರ ದೇವಕಿ ನಂದನ ಠಾಕೂರ್​ ಕೂಡ ಮೊಘಲ್​ ದೊರೆ ಔರಂಗಜೇಬ್​​ ಮಥುರಾದ ದೇಗಲವನ್ನು ನಾಶ ಮಾಡಿದ, ಆತನ ಕೇಶವನ ಮೂರ್ತಿಯನ್ನು ಜಾಮಾ ಮಸೀದಿ ಕೆಳೆಗೆ ಸಮಾಧಿ ಮಾಡಿದ ಎಂದು ವಾದಿಸಿದ್ದಾರೆ. ಈ ಸಂಬಂಧ ಶ್ರೀ ಕೃಷ್ಣ ಜನ್ಮಭೂಮಿ ಸಂರಕ್ಷಿತ್​ ಸೇವಾ ಟ್ರಸ್ಟ್​​ ಕೂಡ ಆಗ್ರಾದ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದೆ. ಅಲ್ಲದೇ ಜಾಮಾ ಮಸೀದಿಯನ್ನು ಎಎಸ್​ಐ ಸಮೀಕ್ಷೆ ನಡೆಸಬೇಕು ಎಂಬ ಬೇಡಿಕೆ ಇಟ್ಟಿದೆ. ಜೊತೆಗೆ ಆಗ್ರಾ ಸಿವಿಲ್​ ಕೋರ್ಟ್​ನಲ್ಲಿ ವಕೀಲ ಅಜಯ್​ ಪ್ರತಾಪ್​ ಕೂಡ ಮತ್ತೊಂದು ಪ್ರಕರಣ ದಾಖಲಿಸಿದ್ದಾರೆ.

ಜಾಮಾ ಮಸೀದಿ ಮುಂದಿ ಉಂಟಾದ ಬಿಗುವಿನ ವಾತಾವರಣ (ಈಟಿವಿ ಭಾರತ್​)

ಜಾಮಾ ಮಸೀದಿ ಮುಂದೆ ಘೋಷಣೆ: ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಸಂಚಾಲಕ ಗೋಪಾಲ್ ಚಹಾರ್ ಕೂಟ ಸೋಮವಾರ ಮಧ್ಯರಾತ್ರಿ ಆಗ್ರಾ ಫೋರ್ಟ್​ ರೈಲ್ವೆ ನಿಲ್ದಾಣದಲ್ಲಿ ಆರತಿ ತಟ್ಟೆ ಹಿಡಿದು ಮಸೀದಿ ಒಳಹೋಗುವ ಯತ್ನ ನಡೆಸಿದರು. ಜಾಮಾ ಮಸೀದಿಯ ಮುಂದೆ ಇವರನ್ನು ತಡೆದರೂ ಶ್ರೀ ಕೃಷ್ಣನಿಗೆ ಜೈ ಎಂಬ ಘೋಷಣೆಗಳನ್ನು ಕೂಗಿದರು. ಅಲ್ಲದೇ ಜಾಮಾ ಮಸೀದಿಯ ಮೆಟ್ಟಿಲು ಮೇಲೆ ನಿಂತು ಆರತಿ ಬೆಳಗುವ ಯತ್ನ ನಡೆಸಿದ ಅವರನ್ನು ಪೊಲೀಸರು ವಶಕ್ಕೆ ಪಡೆದರು.

ಕಾನೂನು ಕ್ರಮಕ್ಕೆ ಸಿದ್ಧತೆ: ಆರತಿ ತಟ್ಟೆಯೊಂದಿಗೆ ಬಂದಿದ್ದ ಗೋಪಾಲ್​ ಚಹಲ್​ ಅವರನ್ನು ಬಂಧಿಸಲಾಗಿದೆ ಎಂದು ಮನ್ತೊಲ್​ ಪೊಲೀಸ್​ ಠಾಣೆಯ ಇನ್ಸ್​​ಪೆಕ್ಟರ್​​ ಸತ್ಯದೇವ್​ ಶರ್ಮಾ ತಿಳಿಸಿದ್ದಾರೆ. ರಾತ್ರಿ ಇಡೀ ಅವರನ್ನು ವಿಚಾರಣೆ ನಡೆಸಲಾಗಿದ್ದು, ಈ ಸಂಬಂಧ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಮಥುರಾದಿಂದ ಕೇಶವನ ಮೂರ್ತಿ ತಂದಿದ್ದ ಔರಂಗಜೇಬ್​: ಹಿರಿಯ ಇತಿಹಾಸತಜ್ಞ ರಾಜ್​ಕಿಶೋರ್​ ರಾಜೇ ಹೇಳುವಂತೆ ಮೊಘಲ್​ ದೊರೆ ಶಹಜಾಹನ್​ ತನ್ನ ಮಗಳ ಮೇಲಿನ ಪ್ರೀತಿ ಹಿನ್ನೆಲೆ 1643-1948ರ ಮಧ್ಯದಲ್ಲಿ 5 ಲಕ್ಷ ಖರ್ಚಿನಲ್ಲಿ ಜಾಮಾ ಮಸೀದಿ ನಿರ್ಮಾಣಕ್ಕೆ ಮುಂದಾದ. ಶಹಜಾಹನ್​ ಬಂಧಿಸುವ ಮೂಲಕ ದೊರೆಯಾದ ಔರಂಗಜೇಬ್​​, 16ನೇ ಶತಮಾನದ 7ನೇ ದಶಕದಲ್ಲಿ ಮಥುರಾದಲ್ಲಿ ಕೇವಶವದೇವನ ದೇಗುಲವನ್ನು ಧ್ವಂಸ ಮಾಡಿದ್ದ. ಈ ವೇಳೆ ಅಲ್ಲಿದ್ದ ಮೂರ್ತಿ ಸೇರಿದಂತೆ ಪ್ರಮುಖ ಐತಿಹಾಸಿಕ ಪ್ರಾಚೀನ ವಸ್ತುಗಳನ್ನು ಆಗ್ರಾಗೆ ತಂದು ಜಾಮಾ ಮಸೀದಿ ಕೆಳಗೆ ಸಮಾದಿ ಮಾಡಲಾಗಿದೆ ಎಂಬ ವಾದ ಇವರದ್ದು

ಫರಾಹ್ ಟೋಲ್ ಬಳಿ ಹಿಂದೂಗಳನ್ನು ತಡೆದ ಪೊಲೀಸರು: ಜನ್ಮಾಷ್ಟಮಿ ಆಚರಣೆಗೆ ಮುಂದಾಗಿದ್ದ ಅಖಿಲ ಭಾರತ ಹಿಂದೂ ಮಹಾಸಭಾದ ಆಗ್ರಾ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಮೀರಾ ರಾಥೋಡ್ ಅವರನ್ನು ಫರಾಹ್ ಬಳಿ ಪೊಲೀಸರು ತಡೆದರು. ಇವರ ಜೊತೆಗೆ ವಿಪಿನ್​ ರಾಥೋಡ್​ ಮತ್ತು ರಾಹುಲ್​ ಸಿಂಗ್​ ಕೂಡರನ್ನು ವಶಕ್ಕೆ ಪಡೆಯಲಾಯಿತು. ಶ್ರಾವಣ ಮಾಸದಲ್ಲಿ ತಾಜ್​ ಮಹಲ್​ನಲ್ಲಿ ಗಂಗಾಜಲ ಅರ್ಪಿಸಿ, ಮುಖ್ಯ ಸಮಾಧಿಗೆ ಕುಂಕುಮ ಇಡುವ ಮೂಲಕ ಸುದ್ಧಿಯಾಗಿದ್ದರು.

ಇದನ್ನೂ ಓದಿ: ಪಾಟ್ನಾದ ಇಸ್ಕಾನ್​ನಲ್ಲಿ ಕಾಲ್ತುಳಿತ ರೀತಿಯ ವಾತಾವರಣ; ಅದೃಷ್ಟವಶಾತ್​ ತಪ್ಪಿದ ಭಾರಿ ಅನಾಹುತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.