ETV Bharat / bharat

ರೈಲ್ವೆ ಹಳಿಗೆ ಡಿಟೋನೇಟರ್​ ಅಳವಡಿಸಿದ ಉತ್ತರ ಪ್ರದೇಶದ ವ್ಯಕ್ತಿ ಬಂಧನ - DETONATOR ON THE RAILWAY TRACK

ರೈಲ್ವೆ ಹಳಿಗೆ ಡಿಟೋನೇಟರ್​ ಅಳವಡಿಸಿದ ವ್ಯಕ್ತಿಯನ್ನು ಅಶೋಕ್​ ಎಂದು ಗುರುತಿಸಲಾಗಿದ್ದು, ಈತ ಉತ್ತರ ಪ್ರದೇಶದ ರಾಮ್​ಪುರ ಜಿಲ್ಲೆಯ ನಿವಾಸಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Haridwar GRP arrested a man for allegedly placing a detonator on the railway track
ಸಂಗ್ರಹ ಚಿತ್ರ (IANS)
author img

By ETV Bharat Karnataka Team

Published : Oct 30, 2024, 5:20 PM IST

ಹರಿದ್ವಾರ: ಇಲ್ಲಿನ ಮೋತಿಚುರ್​ ರೈಲ್ವೆ ನಿಲ್ದಾಣ ಸಮೀಪದ ರೈಲ್ವೆ ಹಳಿ ಮೇಲೆ ಡಿಟೋನೇಟರ್​ ಇಟ್ಟ ವ್ಯಕ್ತಿಯನ್ನು ಹರಿದ್ವಾರ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಅಶೋಕ್​ ಎಂದು ಗುರುತಿಸಲಾಗಿದೆ. ಈತ ಉತ್ತರ ಪ್ರದೇಶದ ರಾಮ್​ಪುರ ಜಿಲ್ಲೆಯ ನಿವಾಸಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹಳಿಗಳ ಮೇಲೆ ಡಿಟೋನೇಟರ್​​ ಕಂಡುಬಂದಿದ್ದು, ಕೂಡಲೇ ಮೊರದಾಬಾದ್​ ರೈಲ್ವೆ ವಿಭಾಗ ಕಂಟ್ರೋಲ್​ ರೂಂಗೆ ಮಾಹಿತಿ ರವಾನೆಯಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಹರಿದ್ವಾರದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಈ ವೇಳೆ ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ವ್ಯಕ್ತಿಯೊಬ್ಬ ರೈಲ್ವೆ ಹಳಿಗಳ ಮೇಲೆ ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಗೊತ್ತಾಗಿದೆ.

ವ್ಯಕ್ತಿಯನ್ನು ವಶಕ್ಕೆ ಪಡೆದು ಪೊಲೀಸರು ತನಿಖೆಗೆ ಒಳಪಡಿಸಿದಾಗ, ಸಿಗ್ನಲ್​ ಫಾಗ್​ ಡಿಟೋನೇಟರ್​ ಪತ್ತೆಯಾಗಿದೆ. ರೈಲಿನ ಶಬ್ಧ ಆಲಿಸುವ ಕುತೂಹಲದಿಂದ ಈ ಕೃತ್ಯ ಎಸಗಿದ್ದಾಗಿ ಆರೋಪಿ ತಿಳಿಸಿದ್ದಾನೆ.

ಡಿಟೋನೇಟರ್​ ಅನ್ನು ಸಾಮಾನ್ಯವಾಗಿ ​ರೈಲನ್ನು ಎಚ್ಚರಿಸಲು ಮತ್ತು ವೇಗದ ನಿಯಂತ್ರಣಕ್ಕೆ ಬಳಕೆ ಮಾಡುತ್ತಾರೆ. ಸಿಗ್ನಲ್​ ಫಾಗ್​​ ಡಿಟೊನೇಟರ್​ ಅನ್ನು ರೈಲು ಅತಿ ಹೆಚ್ಚು ಶಬ್ಧ ಮಾಡುವಾಗ ಅದನ್ನು ನಿಲ್ಲಿಸಲು ಬಳಸಲಾಗುತ್ತದೆ. ಇದು ಯಾವುದೇ ಹಾನಿ ಉಂಟುಮಾಡುವುದಿಲ್ಲ.

ಇದನ್ನೂ ಓದಿ: ಟೆಸ್ಲಾ ಕಾರು ಪಲ್ಟಿಯಾಗಿ ಸ್ಫೋಟ; ಕೆನಡಾದಲ್ಲಿ ನಾಸಿಕ್​ ಯುವಕ ಸೇರಿ ಮೂವರು ಭಾರತೀಯರ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.