ETV Bharat / bharat

ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ದೆಹಲಿಯಿಂದ ವಾಪಸ್: ಆ ಐದು ದಿನ ಅವರು ಮಾಡಿದ್ದೇನು?; ಉತ್ತರ ಪ್ರದೇಶದಲ್ಲಿ ಆಗುತ್ತಾ ಭಾರಿ ಬದಲಾವಣೆ? - DCM Keshav Prasad Maurya - DCM KESHAV PRASAD MAURYA

ಬಿಜೆಪಿ ಸಂಘಟನೆಯಲ್ಲಿ ಕೇಶವ್ ಪ್ರಸಾದ್ ಮೌರ್ಯ ಅವರಿಗೆ ಮಹತ್ವದ ಜವಾಬ್ದಾರಿ ನೀಡಬಹುದು ಎಂಬ ಚರ್ಚೆ ನಡೆಯುತ್ತಿದೆ. ಇದೇ ವೇಳೆ ಕೇಶವ್ ಪ್ರಸಾದ್ ಮೌರ್ಯ ಅವರನ್ನು ಭೇಟಿ ಮಾಡುವ ನಾಯಕರ ಸಂಖ್ಯೆಯು ಹೆಚ್ಚುತ್ತಿದೆ. ಮೌರ್ಯ ಅವರಿಗೆ ಭವಿಷ್ಯದಲ್ಲಿ ಕೆಲವು ಮಹತ್ವದ ಜವಾಬ್ದಾರಿಯನ್ನು ನೀಡಬಹುದು ಎಂದು ಉತ್ತರ ಪ್ರದೇಶ ಬಿಜೆಪಿ ನಾಯಕರು ಭಾವಿಸಿದ್ದಾರೆ.

Keshav Prasad Maurya  Uttar Pradesh  DCM Keshav Prasad Maurya  BJP
ಉತ್ತರ ಪ್ರದೇಶ: ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ದೆಹಲಿಯಿಂದ ವಾಪಸ್, ಮೌರ್ಯಗೆ ಬಿಜೆಪಿಯಿಂದ ಮಹತ್ವದ ಜವಾಬ್ದಾರಿ ನೀಡುವ ಬಗ್ಗೆ ಚರ್ಚೆ (ETV Bharat)
author img

By ETV Bharat Karnataka Team

Published : Jun 14, 2024, 7:12 AM IST

ಲಖನೌ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು 5 ದಿನಗಳ ಕಾಲ ದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿಯಾದ ನಂತರ ಬುಧವಾರ ಮಧ್ಯಾಹ್ನ ಲಖನೌಗೆ ಮರಳಿದ್ದಾರೆ. ಇಲ್ಲಿ ಅವರು ಉತ್ತರ ಪ್ರದೇಶ ನಾಯಕರನ್ನು ಭೇಟಿಯಾಗಲು ಆರಂಭಿಸಿದ್ದಾರೆ. ಹಲವು ಸಚಿವರು ಹಾಗೂ ಮಾಜಿ ಸಚಿವರು ಅವರನ್ನು ಭೇಟಿ ಮಾಡಿದ್ದಾರೆ. ಇದು ಕುತೂಹಲಕ್ಕೆ ಕಾರಣವಾಗಿದೆ.

ಉತ್ತರ ಪ್ರದೇಶ ಬಿಜೆಪಿ ಸಂಘಟನೆಯಲ್ಲಿ ಕೇಶವ್ ಪ್ರಸಾದ್ ಮೌರ್ಯ ಅವರಿಗೆ ಮಹತ್ವದ ಜವಾಬ್ದಾರಿ ನೀಡಬಹುದು ಎಂಬ ಚರ್ಚೆ ನಡೆಯುತ್ತಿದೆ. ಇದೇ ವೇಳೆ, ಕೇಶವ್ ಪ್ರಸಾದ್ ಮೌರ್ಯ ಅವರನ್ನು ಭೇಟಿ ಮಾಡುವ ನಾಯಕರ ಸಂಖ್ಯೆಯು ಹೆಚ್ಚುತ್ತಿದೆ. ಮೌರ್ಯ ಅವರಿಗೆ ಭವಿಷ್ಯದಲ್ಲಿ ಕೆಲವು ಮಹತ್ವದ ಜವಾಬ್ದಾರಿಯನ್ನು ನೀಡಬಹುದು ಎಂದು ಉತ್ತರ ಪ್ರದೇಶ ಬಿಜೆಪಿ ನಾಯಕರು ಭಾವಿಸಿದ್ದಾರೆ.

ಕೇಶವ ಪ್ರಸಾದ್ ಅವರು 5 ದಿನಗಳ ಕಾಲ ದೆಹಲಿಯಲ್ಲಿ ಭಾರತೀಯ ಜನತಾ ಪಕ್ಷದ ಹಲವು ನಾಯಕರನ್ನು ಭೇಟಿಯಾಗುತ್ತಲೇ ಇದ್ದರು. 2016 ರಲ್ಲಿ ಅವರು ಉತ್ತರ ಪ್ರದೇಶದ ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾದಾಗ, ಅವರು ನಿರಂತರವಾಗಿ ಇದೇ ರೀತಿಯಲ್ಲಿ ದೆಹಲಿಯಲ್ಲಿ ಬಿಡಾರ ಹೂಡಿದ್ದರು. ಕೇಶವ ಪ್ರಸಾದ್ ಮೌರ್ಯ ಅವರ ಬೆಂಬಲಿಗರು ಕೇಶವ ಪ್ರಸಾದ್ ಮೌರ್ಯ ಅವರಿಗೆ ಖಂಡಿತವಾಗಿಯೂ ಕೆಲವು ಪ್ರಮುಖ ಜವಾಬ್ದಾರಿಯನ್ನು ನೀಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಭೂಪೇಂದ್ರ ಸಿಂಗ್ ಚೌಧರಿ ಅವರಿಗೆ ಉತ್ತರ ಪ್ರದೇಶದ ಸಂಪುಟದಲ್ಲಿ ಸ್ಥಾನ ನೀಡಬಹುದು ಎಂದು ನಂಬಲಾಗಿದೆ. ಆದರೆ, ಅವರ ಸ್ಥಾನದಲ್ಲಿ ಕೇಶವ್ ಪ್ರಸಾದ್ ಮೌರ್ಯ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರಾಗಬಹುದು.

ಬಡತನದಿಂದ ಮೇಲೆ ಬಂದ ಕೇಶವ್ ಪ್ರಸಾದ್ ಮೌರ್ಯ: 2014ರ ಲೋಕಸಭೆ ಚುನಾವಣೆಯಲ್ಲಿ, ಕೇಶವ್ ಪ್ರಸಾದ್ ಮೌರ್ಯ ರಾಜ್ಯದ ಫುಲ್ಪುರ್ ಕ್ಷೇತ್ರದಿಂದ ಸಂಸದರಾಗಿ ಆಯ್ಕೆ ಆಗಿದ್ದರು. ಕೇಶವ ಪ್ರಸಾದ್ ಅವರು ಸಿರತ್ತು ಜಿಲ್ಲೆಯ ಕೌಶಂಬಿಯ ಅತ್ಯಂತ ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದವರು. ವ್ಯವಸಾಯ ಮಾಡುತ್ತಲೇ ಟೀ ಅಂಗಡಿಯನ್ನೂ ನಡೆಸುತ್ತಿದ್ದರು. ಪತ್ರಿಕೆಗಳನ್ನು ಮಾರಾಟ ಮಾಡುತ್ತಿದ್ದರು. ಬಡತನ ಮತ್ತು ಹೋರಾಟದ ನಡುವೆ, ಕೇಶವ ಪ್ರಸಾದ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸೇರಿಕೊಂಡರು. ಶ್ರೀರಾಮನ ಜನ್ಮಸ್ಥಳ ಮತ್ತು ಗೋ ಸಂರಕ್ಷಣೆಗಾಗಿ ಆಂದೋಲನದ ವೇಳೆ ಜೈಲಿಗೆ ಹೋಗಿ ಬಂದಿದ್ದಾರೆ ಕೂಡಾ.

ಮೌರ್ಯ ವಿಶ್ವ ಹಿಂದೂ ಪರಿಷತ್ತಿನ ಪ್ರಚಾರಕ: 2002 ಮತ್ತು 2007ರಲ್ಲಿ ಸತತ ಎರಡು ವಿಧಾನಸಭಾ ಚುನಾವಣೆಗಳಲ್ಲಿ ಸೋತ ನಂತರ, ಅವರು 2012 ರಲ್ಲಿ ಕೌಶಂಬಿ ಜಿಲ್ಲೆಯ ಸಿರತು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. ನಂತರ 2014ರ ಲೋಕಸಭೆ ಚುನಾವಣೆಯಲ್ಲಿ ಫುಲ್ಪುರದಿಂದ ಗೆದ್ದರು. ಮೌರ್ಯ ಅವರು 18 ವರ್ಷಗಳಿಂದ ಗಂಗಾಪರ್ ಮತ್ತು ಯಮುನಾಪರ್‌ನಲ್ಲಿ ವಿಶ್ವ ಹಿಂದೂ ಪರಿಷತ್ತಿನ ಪ್ರಚಾರಕರಾಗಿ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ದಲಿತರ ಮತಗಳನ್ನು ಪಡೆಯುವುದಕ್ಕಾಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ಪ್ರಮುಖ ಕಾರಣವೆಂದು ಪರಿಗಣಿಸಲಾಗಿದೆ.

ಕೇಶವ ಪ್ರಸಾದ್ ಮೌರ್ಯ ಹಿಂದೂವಾದಿ ಮತ್ತು ಹಿಂದುಳಿದವರ ನಾಯಕ: ಕೇಶವ ಪ್ರಸಾದ್ ಮೌರ್ಯ ಮೂರು ಗುಣಗಳನ್ನು ಹೊಂದಿದ್ದು, ಅದು ಅವರನ್ನು 2016 ರಲ್ಲಿ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿತು. ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಉತ್ತಮ ಹೊಂದಾಣಿಕೆ ಹೊಂದಿದ್ದಾರೆ. ಇದಲ್ಲದೇ ವಿಶ್ವಹಿಂದೂ ಪರಿಷತ್ತಿನಲ್ಲಿ ಇರುವುದರಿಂದ ಅವರಿಗೆ ಹಿಂದೂ ಇಮೇಜು ಕೂಡ ಇದೆ. ಅಲ್ಲದೆ, ಕೇಶವ್ ಪ್ರಸಾದ್ ಮೌರ್ಯ ಅವರು ಉತ್ತರ ಪ್ರದೇಶದ ಭಾರತೀಯ ಜನತಾ ಪಕ್ಷದಿಂದ ಹಿಂದುಳಿದ ವರ್ಗಗಳ ನಾಯಕರಾಗಿ ಗುರುತಿಸಲ್ಪಟ್ಟಿದ್ದಾರೆ.

ಇದನ್ನೂ ಓದಿ: ಮಾಫಿಯಾ, ಕ್ರಿಮಿನಲ್‌ಗಳ ವಿರುದ್ಧ ಕಠಿಣ ಕ್ರಮ ಮುಂದುವರಿಸಲು ಯೋಗಿ ಪ್ರತಿಜ್ಞೆ - continue crackdown on mafia

ETV Bharat Logo

Copyright © 2025 Ushodaya Enterprises Pvt. Ltd., All Rights Reserved.