ETV Bharat / bharat

ಉತ್ತರಾಖಂಡದಲ್ಲಿ ಯುಸಿಸಿ, ಅಸ್ಸೋಂನಲ್ಲಿ ಬಹುಪತ್ನಿತ್ವ ನಿಷೇಧದ ಬಿಲ್​: ಲೋಕಸಮರಕ್ಕೂ ಮುನ್ನ ಜಾರಿಗೆ ಸಿದ್ಧತೆ - Pushkar Singh Dhami

ಅಸ್ಸೋಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಪ್ರಕಾರ, ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಮುಂದಾಗಿರುವ ಬೆಳವಣಿಗೆಗಳನ್ನು ಅವರ ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ. ನಾಗರಿಕ ಕಾನೂನುಗಳಲ್ಲಿ ಏಕರೂಪತೆ ಜಾರಿಗೆ ತರುವ ಗುರಿಯನ್ನು ಹೊಂದಿದೆ. ಇದೀಗ ಉತ್ತರಾಖಂಡ ವಿಧಾನಸಭೆಯಲ್ಲಿ ಮಂಗಳವಾರ ಏಕರೂಪ ನಾಗರಿಕ ಸಂಹಿತೆ ಮಸೂದೆ ಮಂಡನೆಯಾಗಲಿದೆ. ಅಸ್ಸೋಂ ಸರ್ಕಾರ ಕೂಡ ರಾಜ್ಯದಲ್ಲಿ ಬಹುಪತ್ನಿತ್ವ ನಿಷೇಧಿಸಲು ಸಿದ್ಧತೆ ನಡೆಸಿದೆ.

Polygamy ban bill  UCC in Uttarakhand  Assam  Pushkar Singh Dhami  ಏಕರೂಪ ನಾಗರಿಕ ಸಂಹಿತೆ
ಉತ್ತರಾಖಂಡದಲ್ಲಿ ಯುಸಿಸಿ, ಅಸ್ಸಾಂನಲ್ಲಿ ಬಹುಪತ್ನಿತ್ವ ನಿಷೇಧ ಮಸೂದೆ: ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಸರ್ಕಾರಗಳಿಂದ ಭರ್ಜರಿ ಸಿದ್ಧ
author img

By ETV Bharat Karnataka Team

Published : Feb 6, 2024, 10:29 AM IST

ಗುವಾಹಟಿ/ಡೆಹರಾಡೂನ್: ಉತ್ತರಾಖಂಡ​ದಲ್ಲಿ ಏಕರೂಪ ನಾಗರಿಕ ಸಂಹಿತೆ ಹಾಗೂ ಅಸ್ಸೋಂ ಕೂಡ ರಾಜ್ಯದ ಚಾರ್ ಪ್ರದೇಶದಲ್ಲಿ ವಾಸಿಸುವ ಅಲ್ಪಸಂಖ್ಯಾತರಲ್ಲಿ ಬಹುಪತ್ನಿತ್ವ ನಿಷೇಧಿಸಲು ಕಾನೂನನ್ನು ಜಾರಿಗೊಳಿಸುವ ಸಾಧ್ಯತೆಯಿದೆ. ಉತ್ತರಾಖಂಡದಂತೆಯೇ, 14.07 ಲಕ್ಷ (13.95 ಪ್ರತಿಶತ) ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಉತ್ತರದ ರಾಜ್ಯ. 1.07 ಕೋಟಿ (34.22 ಪ್ರತಿಶತ) ಅಲ್ಪಸಂಖ್ಯಾತರ ಜನಸಂಖ್ಯೆಯನ್ನು ಅಸ್ಸೋಂ ಹೊಂದಿದೆ. ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದೆ.

ಬಿಜೆಪಿಯು ಏಕರೂಪ ನಾಗರಿಕ ಸಂಹಿತೆಯನ್ನು ರಾಜಕೀಯ ಚರ್ಚೆಯ ಭಾಗವಾಗಿ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಯುಸಿಸಿಗಾಗಿ (ಏಕರೂಪ ನಾಗರಿಕ ಸಂಹಿತೆ) ವಿಷಯವನ್ನು ಆಗಾಗ್ಗೆ ಎತ್ತುತ್ತಿದ್ದಾರೆ. ಇದು ದೀರ್ಘಕಾಲದವರೆಗೆ ಬಿಜೆಪಿಯ ನಿಲುವಿನ ಭಾಗವಾಗಿದೆ. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನೇತೃತ್ವದ ಉತ್ತರಾಖಂಡ ಕ್ಯಾಬಿನೆಟ್ ಸರ್ಕಾರವು ನೇಮಿಸಿದ ಉನ್ನತ ಮಟ್ಟದ ಸಮಿತಿಯು ಮಾಡಿದ ಶಿಫಾರಸುಗಳ ಮೇಲೆ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮಸೂದೆಯನ್ನು ಭಾನುವಾರ ಅಂಗೀಕರಿಸಿದೆ. ಇಂದು ಈ ಮಸೂದೆ ಸದನದಲ್ಲಿ ಅಂಗೀಕಾರ ಆಗಲಿದೆ.

ಒಮ್ಮೆ ಕಾರ್ಯಗತಗೊಂಡ ನಂತರ, ಉತ್ತರಾಖಂಡವು ಸ್ವಾತಂತ್ರ್ಯದ ನಂತರ ಏಕರೂಪ ನಾಗರಿಕ ಸಂಹಿತೆ ಅಳವಡಿಸಿಕೊಂಡ ದೇಶದ ಮೊದಲ ರಾಜ್ಯವಾಗಲಿದೆ. ಏಕರೂಪ ನಾಗರಿಕ ಸಂಹಿತೆಯು ಪೋರ್ಚುಗೀಸ್ ಆಳ್ವಿಕೆಯ ದಿನಗಳಿಂದಲೂ ಗೋವಾದಲ್ಲಿ ಕಾರ್ಯನಿರ್ವಹಿಸುತ್ತಿದೆ. ನಾಗರಿಕ ಕಾನೂನುಗಳಲ್ಲಿ ಏಕರೂಪತೆಯನ್ನು ತರುವ ಗುರಿಯನ್ನು ಹೊಂದಿರುವ ಮಸೂದೆಯನ್ನು ಇದೀಗ ಉತ್ತರಾಖಂಡ ವಿಧಾನಸಭೆಯಲ್ಲಿ ಇಂದು ಮಂಡನೆಯಾಗಲಿದೆ.

ಅಸ್ಸೋಂ ಮುಖ್ಯಮಂತ್ರಿ ಪ್ರತಿಕ್ರಿಯೆ: ಈ ಮಧ್ಯೆಯೇ, ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಉತ್ತರಾಖಂಡದಲ್ಲಿ ಮಸೂದೆ ಜಾರಿಗೊಳಿಸಿದ ನಂತರ ಅಸ್ಸೋಂನಲ್ಲಿ ಯುಸಿಸಿಯನ್ನು ಜಾರಿಗೆ ತರಲಾಗುವುದು ಎಂದು ಒತ್ತಿ ಹೇಳಿದ್ದಾರೆ. ತಮ್ಮ ಸರ್ಕಾರವು ಉತ್ತರಾಖಂಡ ಯುಸಿಸಿ ವರದಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಸೋಮವಾರದಂದು ಆರಂಭಗೊಂಡ ಬಜೆಟ್ ಅಧಿವೇಶನದಲ್ಲಿ ರಾಜ್ಯದಲ್ಲಿ ಬಹುಪತ್ನಿತ್ವವನ್ನು ನಿಷೇಧಿಸುವ ಬಗ್ಗೆ ತನ್ನ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂದೂ ಶರ್ಮಾ ಶುಕ್ರವಾರ ತಿಳಿಸಿದ್ದಾರೆ.

"ನಾವು ಅಸ್ಸೋಂನಲ್ಲಿ ಬಹುಪತ್ನಿತ್ವ ನಿಷೇಧ ಕಾಯಿದೆ ಜಾರಿಗೆ ತರಲು ನಿಯಮಗಳನ್ನ ರೂಪಿಸುತ್ತಿದ್ದೇವೆ. ನಾವು ಉತ್ತರಾಖಂಡದ ಬೆಳವಣಿಗೆಗಳನ್ನೂ ಸಹ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಉತ್ತರಾಖಂಡ ಯುಸಿಸಿ ಮಸೂದೆಯನ್ನು ರಾಜ್ಯ ವಿಧಾನಸಭೆಯಲ್ಲಿ ಮಂಡಿಸಿದರೆ, ನಾವು ಸಂಪೂರ್ಣ ಯುಸಿಸಿಯನ್ನು ಜಾರಿಗೆ ತರಲು ಸಾಧ್ಯವೇ? ಅದನ್ನೂ ನೋಡುತ್ತೇವೆ. ಫೆಬ್ರವರಿ 12 ರಂದು ನಮ್ಮ ವಿಧಾನಸಭೆ ಶುರುವಾಗಲಿದೆ. ಇದರಿಂದ ನಮಗೆ ಸ್ವಲ್ಪ ಸಮಯವಿದೆ'' ಎಂದು ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ಎಐಯುಡಿಎಫ್ ಶಾಸಕ ವಾಗ್ದಾಳಿ: ಅಸ್ಸೋಂ ಸಿಎಂ ಹೇಳಿಕೆಯ ನಂತರ, ಎಐಯುಡಿಎಫ್ ಶಾಸಕ ರಫೀಕುಲ್ ಇಸ್ಲಾಂ, ಬಿಜೆಪಿ ನೇತೃತ್ವದ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು. ''ಬಿಜೆಪಿಯು ಯುಸಿಸಿಯನ್ನು ಸಂಪೂರ್ಣವಾಗಿ ಜಾರಿಗೆ ತರಲು ಧೈರ್ಯ ಮಾಡುವುದಿಲ್ಲ'' ಎಂದು ಹೇಳಿದ್ದಾರೆ.

ಅಸ್ಸೋಂ ತಜ್ಞರ ಸಮಿತಿಯು ಬಹುಪತ್ನಿತ್ವ ನಿಷೇಧಿಸುವ ಕುರಿತು ತನ್ನ ವರದಿಯನ್ನು ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಸಲ್ಲಿಕೆ ಮಾಡಿತ್ತು. ಬಹುಪತ್ನಿತ್ವವನ್ನು ಕೊನೆಗೊಳಿಸಲು ಕಾನೂನನ್ನು ಜಾರಿಗೊಳಿಸಲು ಸಮಿತಿಯ ವರದಿಯಲ್ಲಿ ತಿಳಿಸಲಾಗಿದೆ.

ನ್ಯಾಯವಾದಿ ನೆಕಿಬುರ್ ಜಮಾನ್ ಅಭಿಪ್ರಾಯ: ತಜ್ಞರ ಸಮಿತಿಯ ಸದಸ್ಯ, ನ್ಯಾಯವಾದಿ ನೆಕಿಬುರ್ ಜಮಾನ್, ''ಬಹುಪತ್ನಿತ್ವ ಕೊನೆಗೊಳಿಸಲು ಕಾನೂನನ್ನು ಜಾರಿಗೆ ತರಲು ರಾಜ್ಯ ವಿಧಾನಸಭೆಯ ಶಾಸಕಾಂಗ ಸಾಮರ್ಥ್ಯವನ್ನು ಪರಿಶೀಲಿಸಲು ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರು ತಜ್ಞರ ಸಮಿತಿ ರಚಿಸಿದ್ದರು. ನಾವು ನಮ್ಮ ವರದಿಯನ್ನು ಸಿದ್ಧಪಡಿಸಿದ್ದೇವೆ ಮತ್ತು ಸಿಎಂಗೆ ವರದಿಯನ್ನು ಸಲ್ಲಿಸಿದ್ದೇವೆ" ಎಂದು ತಿಳಿಸಿದರು.

ಫೆಬ್ರವರಿ 28 ರವರೆಗೆ ಮುಂದುವರಿಯಲಿರುವ ಅಸ್ಸೋಂ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಮಸೂದೆ ಪರಿಚಯಿಸುವ ಸಾಧ್ಯತೆಯಿದೆ. ಆಡಳಿತ ಪಕ್ಷವು ಸದನದಲ್ಲಿ ಸಾಕಷ್ಟು ಮತಗಳನ್ನು ಹೊಂದಿರುವುದರಿಂದ ಇದು ಕಾಯಿದೆಯಾಗುವ ಸಾಧ್ಯತೆಯಿದೆ.

"ಈ ಬಹುಪತ್ನಿತ್ವ ನಿಷೇಧ ಮಸೂದೆಯು ಕಾನೂನಾಗಿ ಜಾರಿಗೆ ಬಂದರೆ, ಬಹುಪತ್ನಿತ್ವದ ವಿರುದ್ಧ ಹಿಮಂತ ಬಿಸ್ವಾ ಶರ್ಮಾ ಸರ್ಕಾರವು ಕಠಿಣವಾಗಿರುತ್ತದೆ. ಶರ್ಮಾ ಅವರು ಅಸ್ಸೋಂನಲ್ಲಿ ಬಹುಪತ್ನಿತ್ವವನ್ನು ನಿಷೇಧಿಸುವುದಾಗಿ ಆರು ತಿಂಗಳ ಹಿಂದೆಯೇ ಘೋಷಿಸಿದ್ದರು" ಎಂದು ಜಮಾನ್ ಹೇಳಿದ್ದಾರೆ. ಸರ್ಕಾರದ ಕ್ರಮದ ಬಗ್ಗೆ ವಿವರಗಳನ್ನು ನೀಡಿದ ಅವರು, ಅಸ್ಸೋಂ ಸರ್ಕಾರವು ನ್ಯಾಯಮೂರ್ತಿ ರೂಮಿ ಫುಕನ್ ಅವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯನ್ನು ರಚಿಸಿದೆ ಎಂದು ಹೇಳಿದರು. ‘‘ವಿವಿಧ ಧರ್ಮಗಳಲ್ಲಿ ಬಹುಪತ್ನಿತ್ವವನ್ನು ಕಾನೂನಾತ್ಮಕವಾಗಿ ನಿಷೇಧಿಸಲಾಗಿದೆ. ಹಿಂದೂ ಧರ್ಮದಲ್ಲಿ ವಿಚ್ಛೇದನವಿಲ್ಲದೇ ಮರು ಮದುವೆ ಆಗುವಂತಿಲ್ಲ. ಮರು ಮದುವೆಗೆ ಹಲವು ನಿಯಮಗಳಿವೆ.

ಇಸ್ಲಾಂನಲ್ಲಿ ಮರುಮದುವೆಯ ವಿರುದ್ಧ ಕಾನೂನುಗಳಿವೆ. ಮುಸ್ಲಿಂ ಅಲ್ಪಸಂಖ್ಯಾತರ ವಿಷಯದಲ್ಲಿ, ವಲಸಿಗ ಮುಸ್ಲಿಮರಲ್ಲಿ ಬಹುಪತ್ನಿತ್ವವು ಹೆಚ್ಚು ಸಾಮಾನ್ಯವಾಗಿದೆ. ಆದಾಗ್ಯೂ, ಅಸ್ಸಾಮಿ- ಮಾತನಾಡುವ ಸ್ಥಳೀಯ ಮುಸ್ಲಿಮರಲ್ಲಿ ಬಹುಪತ್ನಿತ್ವ ಬಹಳ ಅಪರೂಪ. ಆದರೆ, ಚಾರ್ ಪ್ರದೇಶಗಳಲ್ಲಿ, ಒಬ್ಬ ವ್ಯಕ್ತಿಯು ಹಲವಾರು ಮಹಿಳೆಯರನ್ನು ಮದುವೆಯಾಗುವುದು ಹೆಚ್ಚು ಸಾಮಾನ್ಯವಾಗಿದೆ. ಇಂತಹ ಘಟನೆಗಳಿಗೆ ಸಾಕಷ್ಟು ಉದಾಹರಣೆಗಳಿವೆ. ಈ ನಿಟ್ಟಿನಲ್ಲಿ ಅನೇಕ ಮಹಿಳೆಯರ ಜೀವನ ಕಷ್ಟಕರವಾಗಿದೆ ಎಂದು ತಿಳಿಸುತ್ತಾರೆ ಜಮಾನ್.

ಅನಿಯಂತ್ರಿತ ಜನಸಂಖ್ಯೆಯ ಬೆಳವಣಿಗೆಗೆ ಬಹುಪತ್ನಿತ್ವ ಕಾರಣವಾಗಿದೆ. ಈ ಅಭ್ಯಾಸವು ಮಹಿಳೆಯರ ಜೀವನವನ್ನು ಅಸುರಕ್ಷಿತವಾಗಿಸುತ್ತದೆ. ಬಹುಪತ್ನಿತ್ವ ನಿಲ್ಲಿಸಲು ರಾಜ್ಯಕ್ಕೆ ಬಲವಾದ ಕಾನೂನಿನ ಅಗತ್ಯವಿದೆ ಎಂಬ ಅಂಶವನ್ನು ಅಸ್ಸೋಂ ಸರ್ಕಾರ ಅರಿತುಕೊಂಡಿದೆ. ಈ ಕಾನೂನು ವಿಶೇಷವಾಗಿ ಮುಸ್ಲಿಂ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸುತ್ತದೆ" ಎಂದು ಅವರು ವಿವರಿಸಿದರು.

ಹಿರಿಯ ವಕೀಲರ ಪ್ರಕಾರ, ಬಹುಪತ್ನಿತ್ವವನ್ನು ನಿಷೇಧಿಸುವ ಕಾನೂನು ಬಹಳ ಪ್ರಸ್ತುತವಾಗಿದೆ. ಈ ಕಾನೂನನ್ನು ಅಂಗೀಕರಿಸಿದರೆ, ಸರ್ಕಾರವು ಕೆಲವು ನಿಯಮಗಳನ್ನು ಸಿದ್ಧಪಡಿಸುತ್ತದೆ. ಎಲ್ಲ ಮಹಿಳೆಯರು ಈ ಮಸೂದೆಗೆ ಬೆಂಬಲ ಸೂಚಿಸಿದ್ದಾರೆ. ಈ ಮಸೂದೆಯು ಕಾನೂನು ಆದರೆ, ಇದು ಅಸ್ಸೋಂನ ಸಾಮಾಜಿಕ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ" ಎಂದು ನ್ಯಾಯವಾದಿ ಜಮಾನ್ ಹೇಳಿದರು.

ಇದನ್ನೂ ಓದಿ: ದೆಹಲಿಯ ವೈದ್ಯಕೀಯ ಕಾಲೇಜಿ​ನಲ್ಲಿ ಎಂಬಿಬಿಎಸ್​ ವಿದ್ಯಾರ್ಥಿನಿ ಶವ ಪತ್ತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.