ETV Bharat / bharat

ಮಾದಕ ವಸ್ತು ಮಾರಾಟ ಮಾಡುವಾಗ ಸಿಕ್ಕಿ ಬಿದ್ದಿದ್ದ ಇಬ್ಬರು ಕಾನ್ಸ್​ಟೇಬಲ್​​​: 23 ಕೋಟಿ ರೂ. ಆಸ್ತಿ ಮುಟ್ಟುಗೋಲು - Drug sale case - DRUG SALE CASE

ಕಳೆದ ವರ್ಷ ಹೈದರಾಬಾದ್​ನ ಶಾದ್​ನಗರದಲ್ಲಿ ಮಾದಕ ವಸ್ತು ಮಾರಾಟ ಮಾಡುವಾಗ ಇಬ್ಬರು ಪೊಲೀಸರು ಟಿಎಸ್‌ಎನ್‌ಎಬಿ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದರು.

ಮಾದಕ ವಸ್ತು
ಮಾದಕ ವಸ್ತು
author img

By ETV Bharat Karnataka Team

Published : Mar 21, 2024, 8:03 PM IST

ಹೈದರಾಬಾದ್​ : ಇಲ್ಲಿನ ಶಾದ್‌ನಗರನಲ್ಲಿ ಮಾದಕ ವಸ್ತು ಮಾರಾಟ ಮಾಡುವಾಗ ಸಿಕ್ಕಿ ಬಿದ್ದಿದ್ದ ಇಬ್ಬರು ಪೊಲೀಸರ, ಒಟ್ಟು 23 ಕೋಟಿ ರೂ. ಆಸ್ತಿಯನ್ನು ಬುಧವಾರ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇದೇ ಮೊದಲ ಬಾರಿಗೆ ತೆಲಂಗಾಣ ರಾಜ್ಯ ಮಾದಕ ದ್ರವ್ಯ ನಿಗ್ರಹ ದಳ (ಟಿಎಸ್‌ಎನ್‌ಎಬಿ) ಅಧಿಕಾರಿಗಳು ಶಾದ್‌ನಗರ ಪೊಲೀಸರೊಂದಿಗೆ 23 ಕೋಟಿ ರೂ. ನಷ್ಟು ಆರೋಪಿಗಳ ಆಸ್ತಿಯನ್ನು ಜಪ್ತಿ ಮಾಡಿದ್ದಾರೆ ಎಂದು ಟಿಎಸ್‌ಎನ್‌ಎಬಿ ನಿರ್ದೇಶಕ ಸಂದೀಪ್ ಸ್ಯಾಂಡಿಲ್ಯ ಹೇಳಿದ್ದಾರೆ.

ಅಬಕಾರಿ ಇಲಾಖೆಯಲ್ಲಿ ಕಾನ್ಸ್​ಟೇಬಲ್​​​​​​ಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಕಾಮರೆಡ್ಡಿ ಜಿಲ್ಲೆಯ ರಮೇಶ್ ಮತ್ತು ರಂಗಾರೆಡ್ಡಿ ಜಿಲ್ಲೆಯ ಶಾಬಾದ್‌ನ ಗುಂಡುಮಲ್ಲ ವೆಂಕಟಯ್ಯ ಎಂಬುವವರ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಕಳೆದ ವರ್ಷ ಡಿಸೆಂಬರ್​ 25 ರಂದು 2 ಕೆ.ಜಿ ಆಲ್ಟ್ರ ಜೋಲಮ್​ ಎಂಬ ಮಾದಕ ವಸ್ತುವನ್ನು ಈ ಇಬ್ಬರು ಅಧಿಕಾರಿಗಳು ಮಾರಾಟ ಮಾಡುವಾಗ ಶಾದ್‌ನಗರ ಪೊಲೀಸರು ಮತ್ತು ಟಿಎಸ್‌ಎನ್‌ಎಬಿ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದರು. ಬಳಿಕ ಮಾದಕ ದ್ರವ್ಯ ನಿಯಂತ್ರಣ ಕಾಯ್ದೆ (ಎನ್‌ಡಿಪಿಎಸ್) ಅಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿತ್ತು.

ಮಾದಕ ದ್ರವ್ಯ - ಸಂಪಾದಿಸಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕಾಯ್ದೆಯಲ್ಲಿ ಅವಕಾಶ ಇರುವುದರಿಂದ ಆರೋಪಿಗಳಿಬ್ಬರು ಅಲ್ಪ್ರಜೋಲಂ ಮಾರಾಟ ಮಾಡಿ ಕೂಡಿಟ್ಟ ಆಸ್ತಿ ವಿವರವನ್ನು ಪೊಲೀಸರು ಸಂಗ್ರಹಿಸಿದ್ದರು. ಇವರಿಬ್ಬರೂ 23 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿ ಹೊಂದಿರುವುದು ಪತ್ತೆಯಾಗಿತ್ತು. ಅವುಗಳನ್ನು ಇದೀಗ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ವೆಂಕಟಯ್ಯ ಶಾದ್‌ನಗರದಲ್ಲಿ 866.66 ಗಜಗಳ ನಾಲ್ಕು ತೆರೆದ ನಿವೇಶನ, ಶಾದ್‌ನಗರ ಮಂಡಲದಲ್ಲಿ 21.28 ಎಕರೆ ಕೃಷಿ ಭೂಮಿ, ಶಾಬಾದ್‌ ಮಂಡಲದಲ್ಲಿ 13.04 ಎಕರೆ ಕೃಷಿ ಭೂಮಿ, ಪತ್ನಿ ಹೆಸರಿನಲ್ಲಿ ಖರೀದಿಸಿದ 2.22 ಎಕರೆ ಜಮೀನು, ಮೂರು ಖಾತೆಗಳಲ್ಲಿ 4,24,990 ರೂ. ಹಾಗೂ ಮತ್ತೊಬ್ಬ ಆರೋಪಿ ರಮೇಶನ ಮಾರುತಿ ಸ್ವಿಫ್ಟ್ ಕಾರು ಮತ್ತು ಕಾಮರೆಡ್ಡಿಯ ಎರಡು ಎಸ್‌ಬಿಐ ಖಾತೆಗಳಲ್ಲಿ 2,21,191 ರೂ. ನಗದನ್ನು ವಶಪಡಿಕೊಳ್ಳಲಾಗಿದೆ. ಈ ಪ್ರಕರಣದ ಬಗ್ಗೆ ಮಾಹಿತಿ ತಿಳಿದಿರುವವರು 8712671111 ಅಥವಾ tsnabho-hyd@tspolice.gov.in ಗೆ ಸಂಪರ್ಕಿಸುವಂತೆ ಸಂದೀಪ್ ಸ್ಯಾಂಡಿಲ್ಯ ಇದೇ ವೇಳೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಕಾಸರಗೋಡಿನಲ್ಲಿ 7.5 ಕೋಟಿ ಮೌಲ್ಯದ 2000 ರೂಪಾಯಿ ಮುಖಬೆಲೆಯ ನಕಲಿ ನೋಟುಗಳು ವಶಕ್ಕೆ - Fake 2000 notes seized at Kasaragod

ETV Bharat Logo

Copyright © 2024 Ushodaya Enterprises Pvt. Ltd., All Rights Reserved.