ETV Bharat / bharat

ಲೋಕಸಭೆಯಲ್ಲಿ ಭಾರಿ ಹಿನ್ನಡೆ ಹಿನ್ನೆಲೆ: ಪೂರ್ವ ಉತ್ತರ ಪ್ರದೇಶದಲ್ಲಿ ಆರ್‌ಎಸ್‌ಎಸ್ ಪದಾಧಿಕಾರಿಗಳ ಭಾರಿ ವರ್ಗಾವಣೆ - RSS office bearers Transfer

author img

By ETV Bharat Karnataka Team

Published : Jun 28, 2024, 8:19 AM IST

ರಾಷ್ಟ್ರೀಯ ಸ್ವಯಂಸೇವಕ ಸಂಘವು ಪೂರ್ವ ಉತ್ತರ ಪ್ರದೇಶದಲ್ಲಿ ಕೆಲವು ಪದಾಧಿಕಾರಿಗಳನ್ನು ವರ್ಗಾವಣೆ ಮಾಡಿದೆ.

RSS OFFICE BEARERS TRANSFER
ಆರ್‌ಎಸ್‌ಎಸ್ ಪದಾಧಿಕಾರಿಗಳ ವರ್ಗಾವಣೆ (ETV Bharat)

ಲಕ್ನೋ(ಉತ್ತರ ಪ್ರದೇಶ): ರಾಷ್ಟ್ರೀಯ ಸ್ವಯಂಸೇವಕ ಸಂಘ ಆರ್‌ಎಸ್‌ಎಸ್ ಪೂರ್ವ ಉತ್ತರ ಪ್ರದೇಶದಲ್ಲಿ ತನ್ನ ಹಲವು ಪದಾಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಆರ್​ಎಸ್​ಎಸ್​ ಒಟ್ಟು 3 ದಿನಗಳ ಸಭೆಯನ್ನು ನಡೆಸುತ್ತಿದ್ದು, ಮೊದಲ ಸಭೆ ನಿನ್ನೆ ಲಖನೌದಲ್ಲಿ ಆರಂಭವಾಗಿದೆ. ನಿನ್ನೆ ನಡೆದ ಸಭೆಯಲ್ಲಿ ವರ್ಗಾವಣೆಯ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿಯಾದ ದತ್ತಾತ್ರೇಯ ಹೊಸಬಾಳೆ ಅವರ ಅಧ್ಯಕ್ಷತೆಯಲ್ಲಿ ಸಭೆಯು ನಡೆಯುತ್ತಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘಟನೆಗೆ ನೂರು ವರ್ಷ ತುಂಬುವ ಹಿನ್ನೆಲೆ ಸಂಘಟನೆಯ ಶತಮಾನೋತ್ಸವದ ಆಚರಣೆಗೆ ಸಿದ್ಧತೆ ಹಾಗೂ ಇತರ ಸಾಂಸ್ಥಿಕ ವಿಷಯಗಳ ಬಗ್ಗೆ ಪೂರ್ವ ಉತ್ತರ ಪ್ರದೇಶದ ಕಾಶಿ, ಕಾನ್ಪುರ ಮತ್ತು ಅವಧ್ ಪ್ರದೇಶಗಳ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸುವುದು ಸಭೆಯ ಮುಖ್ಯ ಉದ್ದೇಶವಾಗಿದೆ.

ಮೂಲಗಳ ಪ್ರಕಾರ, ಸುಲ್ತಾನಪುರದ ‘ಕ್ಷೇತ್ರ ಸೇವಾ ಪ್ರಮುಖ್’ ಯುದ್ಧವೀರ್ ಅವರನ್ನು ಕಾಶಿಯ ಸೇವಾ ಭಾರತಿ ಕಚೇರಿಗೆ ವರ್ಗಾಯಿಸಲಾಗಿದೆ. ಹಾಗೇ ಅಯೋಧ್ಯೆಯ 'ಸಹ ಕ್ಷೇತ್ರ ಸಂಪರ್ಕ ಪ್ರಮುಖ್' ಮನೋಜ್ ಕುಮಾರ್ ಅವರನ್ನು ಗೋರಖ್‌ಪುರಕ್ಕೆ ವರ್ಗಾಯಿಸಲಾಗಿದೆ. 'ಅಖಿಲ ಭಾರತೀಯ ಸಹ ಗೌ ಸೇವಾ ಪ್ರಮುಖ್' ನವಲ್ ಕಿಶೋರ್ ಅವರನ್ನು ಗೋರಖ್‌ಪುರದಿಂದ ಲಖನೌದ ಪ್ರಕೃತಿ ಭಾರತಿ ಮೋಹನ್‌ಲಾಲ್‌ಗಂಜ್‌ಗೆ ಸ್ಥಳಾಂತರಿಸಲಾಗಿದೆ. 'ಮುಖ್ಯ ಮಾರ್ಗ ಸಂಪರ್ಕ ಪ್ರಮುಖ್' ರಾಜೇಂದ್ರ ಸಕ್ಸೇನಾ ಅವರನ್ನು ಕಾಶಿಯಿಂದ ಲಖನೌಗೆ ವರ್ಗಾಯಿಸಲಾಗಿದೆ. 'ಪರ್ಯಾವರಣ ಪ್ರಮುಖ್' ಅಜಯ್ ಕುಮಾರ್ ಅವರನ್ನು ಕಾಶಿಗೆ ನಿಯೋಜಿಸಲಾಗಿದೆ. 'ಕ್ಷೇತ್ರ ಪ್ರಚಾರಕ್ ಪ್ರಮುಖ್' ರಾಜೇಂದ್ರ ಸಿಂಗ್ ಅವರನ್ನು ಕಾನ್ಪುರದಿಂದ ಭಾರತಿ ಭವನ ಲಖನೌಗೆ ಸ್ಥಳಾಂತರಿಸಲಾಗಿದೆ.

ಪ್ರಸ್ತುತ ಕೊನೆಗೊಂಡ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಭಾರಿ ಕುಸಿತ ಕಂಡಿತ್ತು. 62 ಸ್ಥಾನಗಳಿಂದ 35ಕ್ಕೂ ಕಡಿಮೆ ಸ್ಥಾನಗಳಿಗೆ ಇಳಿಕೆ ಕಂಡಿತ್ತು. ಉತ್ತರಪ್ರದೇಶದಲ್ಲಿ ಆದ ಈ ಭಾರಿ ಹಿನ್ನಡೆಯಿಂದಾಗಿ ಬಿಜೆಪಿ ಏಕಾಂಗಿಯಾಗಿ ಬಹುಮತ ಪಡೆಯುವಲ್ಲಿ ವಿಫಲವಾಗಿದೆ. ಇದು ಭಾರಿ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ದೊಡ್ಡ ಆಘಾತವನ್ನೇ ನೀಡಿತ್ತು.

ಆ ಬಳಿಕ ಈ ಸೋಲಿನ ಬಗ್ಗೆ ದೇಶಾದ್ಯಂತ ಭಾರಿ ಚರ್ಚೆಗಳಿಗೆ ಕಾರಣವಾಗಿತ್ತು. ಸ್ವತಃ ಆರ್​ಎಸ್​ಎಸ್​ ನಾಯಕರು ಮೋದಿ ಹಾಗೂ ಟೀಂ ಬಗ್ಗೆ ಕೆಲ ಟೀಕೆ ಟಿಪ್ಪಣಿಗಳನ್ನು ಮಾಡಿದ್ದರು. ಅದಾದ ಬಳಿಕ ಆರ್​ಎಸ್​ಎಸ್​ ಈಗ ಸಂಘಟನೆ ಬಲಗೊಳಿಸಲು ಮುಂದಾಗಿದೆ. ಸೋಲಿನ ಪರಾಮರ್ಶೆಯನ್ನೂ ನಡೆಸಿದೆ.

ಇದನ್ನೂ ಓದಿ: ರಾಮೋಜಿ ರಾವ್​ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು - AP CM Chandrababu Naidu

ETV Bharat Logo

Copyright © 2024 Ushodaya Enterprises Pvt. Ltd., All Rights Reserved.