ಚೆನ್ನೈ, ತಮಿಳುನಾಡು: ರಾಜ್ಯದಲ್ಲಿ ಹೂಡಿಕೆ ಅವಕಾಶ ಮತ್ತು ಸಹಭಾಗಿತ್ವ ಕುರಿತು ಚರ್ಚೆಗಾಗಿ ತಮಿಳುನಾಡು ಸಿಎಂ ಸ್ಠಾಲಿನ್ ಇಂದು ಐಟಿ ದಿಗ್ಗಜ ಸಂಸ್ಥೆಗಳಾದ ಆಪಲ್, ಗೂಗಲ್ ಮತ್ತು ಮೈಕ್ರೋಸಾಫ್ಟ್ನ ಅಮೆರಿಕದಲ್ಲಿರುವ ಕೇಂದ್ರ ಕಚೇರಿಗಳಿಗೆ ಭೇಟಿ ನೀಡಿ, ಚರ್ಚೆ ನಡೆಸಲಿದ್ದಾರೆ
ರಾಜ್ಯಕ್ಕೆ ಬಂಡವಾಳ ಆಕರ್ಷಿಸುವ ನಿಟ್ಟಿನಲ್ಲಿ ಅಮೆರಿಕದ ಪ್ರವಾಸದಲ್ಲಿರುವ ಅವರು, ವಿವಿಧ ಸಂಸ್ಥೆಗಳೊಂದಿಗೆ ಹಲವು ಅವಕಾಶಗಳು ಮತ್ತು ಸಹಭಾಗಿತ್ವದ ಕುರಿತು ಚರ್ಚೆ ನಡೆಸಲಾಗಿದೆ. ಈ ಸಹಭಾಗಿತ್ವವನ್ನು ಬಲಪಡಿಸಲು ಮತ್ತು ಏಷ್ಯಾದಲ್ಲಿ ಅಭಿವೃದ್ಧಿ ಇಂಜಿನ್ನಲ್ಲಿ ತಮಿಳುನಾಡುನ್ನು ಒಂದಾಗಿರುವಂತೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಂಸ್ಥೆಗಳೊಂದಿಗೆ ಹಲವು ಅವಕಾಶಗಳು ಮತ್ತು ಉತ್ಸಕ ಸಹಭಾಗಿತ್ವದ ಕುರಿತು ಚರ್ಚಿಸಿದ್ದು, ಈ ಸಹಭಾಗಿತ್ವವನ್ನು ಬಲಪಡಿಸಲು ಮತ್ತು ಏಷ್ಯಾದಲ್ಲಿ ಅಭಿವೃದ್ಧಿ ಇಂಜಿನ್ನಲ್ಲಿ ತಮಿಳುನಾಡನ್ನು ಒಂದಾಗಿಸಲು ನಿರ್ಧರಿಸಲಾಗಿದೆ ಎಂದು ಎಕ್ಸ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಹೂಡಿಕೆ ಆಕರ್ಷಿಸಲು ಸ್ಟಾಲಿನ್ ಕಾರ್ಯತಂತ್ರ: ರಾಜ್ಯದ ಆರ್ಥಿಕ ಅಭಿವೃದ್ಧಿಗ ಬೆಂಬಲ ಮತ್ತು ಹೂಡಿಕೆ ಆಕರ್ಷಿಸುವ ಗುರಿಯೊಂದಿಗೆ ಅವರು ಅಮೆರಿಕಕ್ಕೆ ಅಧಿಕೃತ ಪ್ರವಾಸ ನಡೆಸಿದ್ದಾರೆ. ಈ ಭೇಟಿ ವೇಳೆ ಅವರು ಅಮೆರಿಕ ಮೂಲದ ಕಂಪನಿಗಳಂದಿಗೆ ತಮಿಳುನಾಡಿನಲ್ಲಿ ಹೂಡಿಕೆ ಸಾಮರ್ಥ್ಯದ ಅವಕಾಶಗಳ ಕುರಿತು ಚರ್ಚಿಸಲಿದ್ದಾರೆ.
ಶುಕ್ರವಾರ ತಮ್ಮ ಮೊದಲ ದಿನದ ಭೇಟಿಯಲ್ಲಿ ಅವರು ಚೆನ್ನೈ, ಕೊಯಮತ್ತೂರ್, ಮಧುರೈ ಮತ್ತು ಚೆಂಗಲ್ಪಟ್ಟುನಲ್ಲಿ 900 ಕೋಟಿಗೂ ಹೆಚ್ಚಿಸನ ಸುರಕ್ಷಿತ ಹೂಡಿಕೆ ಹಲವು ಸಂಸ್ಥೆಗಳೊಂದಿಗೆ ಚರ್ಚಿಸಿದ್ದಾಗಿ ತಿಳಿಸಿದ್ದರು. ಇದರಿಂದ ಅನೇಕ ವಲಯದಲ್ಲಿ 4,100 ಹೊಸ ಉದ್ಯೋಗ ಸೃಷ್ಟಿಯಾಗಲಿದೆ.
ಈ ಕುರಿತು ಎಕ್ಸ್ ತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ನೋಕಿಯಾದಿಂದ 450 ಕೋಟಿ 100 ಉದ್ಯೋಗ, ಆಪಲ್ನಿಂದ 1,000 ಉದ್ಯೋಗ, ಯೀಲ್ಡ್ ಇಂಜಿನಿಯರಿಂಗ್ ಸಿಸ್ಟಂನಿಂದ 150 ಕೋಟಿ- 300 ಉದ್ಯೋಗ, ಮೈಕ್ರೋಚಿಪ್ನಿಂದ 250 ಕೋಟಿ- 1500 ಉದ್ಯೋಗ, ಇನ್ಫಿಕ್ಸ್ನಿಂದ 50 ಕೋಟಿ 700 ಉದ್ಯೋಗ, ಅಪ್ಲೈಡ್ ಮೆಟಿರಿಯಲ್ಸ್ನಿಂದ 500 ಉದ್ಯೋಗ ಸೃಷ್ಟಿಗೆ ಒಪ್ಪಂದಗಳನ್ನು ಮಾಡಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ. ತಮ್ಮ ಎರಡು ವಾರದ ಪ್ರವಾಸದ ಸಂದರ್ಭದಲ್ಲಿ ಮತ್ತಷ್ಟು ಹೂಡಿಕೆದಾರರನ್ನು ಆಕರ್ಷಿಸುತ್ತೇವೆ. ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ನಮ್ಮ ನಡಿಗೆ ಮುಂದುವರೆಲಿದೆ ಎಂದು ಸ್ಟಾಲಿನ್ ಹೇಳಿದ್ದಾರೆ.
ಸ್ಯಾನ್ಫ್ರಾನ್ಸಿಸ್ಕೋ ಹೂಡಿಕೆ ಸಮಾವೇಶದಲ್ಲಿ ಮಾತನಾಡಿದ ಅವರು, ತಮಿಳುನಾಡು ಭಾರತದ ಎರಡನೇ ಆರ್ಥಿಕ ರಾಜ್ಯವಾಗಿದ್ದು, ಇಲ್ಲಿ ನಗರೀಕರಣ ದರ ಹೆಚ್ಚಿದೆ. ಶಿಕ್ಷಣದಲ್ಲಿ ಗಮನಾರ್ಹ ಸಾಧನೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ದೇವೇಗೌಡರು: ಶಂಕರಾಚಾರ್ಯ ಬೆಟ್ಟದ ಮೆಟ್ಟಿಲು ಹತ್ತಿ ಶಿವನ ದರ್ಶನ ಪಡೆದ ಮಾಜಿ ಪ್ರಧಾನಿ