ETV Bharat / bharat

ಬಿಜೆಪಿಯ ದಿಲೀಪ್ ಘೋಷ್ ವಿರುದ್ದ ಟಿಎಂಸಿ ಭಾರಿ ಪ್ರತಿಭಟನೆ: ಭದ್ರತಾ ಸಿಬ್ಬಂದಿ ಕಾರು ಧ್ವಂಸ - TMC accused of attacking Dilip - TMC ACCUSED OF ATTACKING DILIP

ಬಿಜೆಪಿ ಅಭ್ಯರ್ಥಿ ದಿಲೀಪ್ ಘೋಷ್ ವಿರುದ್ದ ಪ್ರತಿಭಟನೆ ನಡೆಸಿ ಅವರ ಭದ್ರತಾ ಸಿಬ್ಬಂದಿ ಮತ್ತು ಮಾಧ್ಯಮದ ಕಾರುಗಳನ್ನು ಟಿಎಂಸಿ ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

Dilip Ghosh
ದಿಲೀಪ್ ಘೋಷ್ (ETV Bharat)
author img

By ETV Bharat Karnataka Team

Published : May 13, 2024, 5:33 PM IST

ಬರ್ಧಮಾನ್ (ಪಶ್ಚಿಮ ಬಂಗಾಳ) : ಬರ್ಧಮಾನ್ - ದುರ್ಗಾಪುರ ಲೋಕಸಭಾ ಕ್ಷೇತ್ರದ ಮೊಂಟೇಶ್ವರ್‌ನ ಗ್ರಾಮವೊಂದರಲ್ಲಿ ಬಿಜೆಪಿ ಬೂತ್ ಏಜೆಂಟ್‌ಗೆ ಥಳಿಸಿ ಹೊರಹಾಕಲಾಗಿದೆ ಎಂಬ ಆರೋಪ ಮಾಡಲಾಗಿದೆ. ಸುದ್ದಿ ತಿಳಿದು ಬಿಜೆಪಿ ಅಭ್ಯರ್ಥಿ, ಎಸ್‌ಎನ್‌ಡಿ ಮಾಜಿ ರಾಜ್ಯ ಮುಖ್ಯಸ್ಥ ದಿಲೀಪ್ ಘೋಷ್ ಸ್ಥಳಕ್ಕೆ ಹೋದಾಗ, ಅವರ ಸುತ್ತಲೂ ಸಹ ಪ್ರತಿಭಟನೆಗಳು ನಡೆದಿವೆ. ಈ ವೇಳೆ, ದಿಲೀಪ್ ಘೋಷ್ ಮತ್ತು ಅವರ ಭದ್ರತಾ ಸಿಬ್ಬಂದಿಗೂ ಕಿರುಕುಳ ನೀಡಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ದಿಲೀಪ್ ಅವರ ಭದ್ರತಾ ಸಿಬ್ಬಂದಿ ಮತ್ತು ಮಾಧ್ಯಮದ ಕಾರುಗಳನ್ನು ಧ್ವಂಸಗೊಳಿಸಲಾಗಿದೆ ಎಂದು ವರದಿಯಾಗಿದೆ.

ಈ ಇಡೀ ಘಟನೆಯಲ್ಲಿ ತೃಣಮೂಲ ವಿರುದ್ಧ ದೂರು ದಾಖಲಾಗಿದ್ದು, ಕೇಂದ್ರ ಪಡೆಗಳು ಮತ್ತು ಪೊಲೀಸರು ಮೊಂಟೇಶ್ವರದ ಗ್ರಾಮವೊಂದರ ಆ ಬೂತ್‌ಗೆ ಆಗಮಿಸಿ ಪರಿಸ್ಥಿತಿ ಹತೋಟಿಗೆ ತಂದರು. ಸದ್ಯ ಅಲ್ಲಿ ಪರಿಸ್ಥಿತಿ ಸ್ತಬ್ಧವಾಗಿದ್ದು, ಸೇನೆಯ ಉಸ್ತುವಾರಿಯಲ್ಲಿ ಮತದಾನ ನಡೆಯುತ್ತಿದೆ. ಎಲ್ಲ ಆರೋಪಗಳು ಸುಳ್ಳು ಎಂದು ತೃಣಮೂಲ ಕಾಂಗ್ರೆಸ್​ ಹೇಳಿ ಕೊಂಡಿದೆ.

ಆ ಬೂತ್‌ನಲ್ಲಿ ಬಿಜೆಪಿ ಏಜೆಂಟರನ್ನು ಕೂರಲು ಬಿಡದೇ ತೃಣಮೂಲ ಕಾಂಗ್ರೆಸ್​​ನ ಕಾರ್ಯಕರ್ತರು ಥಳಿಸಿ ಹೊರಗೆ ಕಳಿಸಿದ್ದಾರೆ ಎಂಬ ಆರೋಪದ ಸುದ್ದಿ ತಿಳಿದ ದಿಲೀಪ್ ಘೋಷ್ ಸ್ಥಳಕ್ಕೆ ಆಗಮಿಸಿದ್ದರು. ಆದರೆ, ಬಿಜೆಪಿ ಅಭ್ಯರ್ಥಿ ಅಲ್ಲಿಗೆ ತಲುಪುತ್ತಿದ್ದಂತೆಯೇ ಪರಿಸ್ಥಿತಿ ಬಿಗಡಾಯಿಸಿತು. ತೃಣಮೂಲ ಕಾರ್ಯಕರ್ತರು ದಿಲೀಪ್ ಘೋಷ್ ಸ್ಥಳವನ್ನು ತೊರೆಯುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ದಿಲೀಪ್ ಘೋಷ್ ಅವರ ಕಾರಿನ ಮುಂದೆ ಮಲಗಿ ಪ್ರತಿಭಟಿಸಿದರು. ಈ ವೇಳೆ, ಕೆಲವು ತೃಣಮೂಲ ಕಾರ್ಯಕರ್ತರೊಂದಿಗೆ ದಿಲೀಪ್ ವಾಗ್ವಾದ ಮಾಡುತ್ತಿರುವ ಚಿತ್ರಗಳು ಮಾಧ್ಯಮಗಳಲ್ಲಿ ಲಭ್ಯವಾಗಿವೆ.

ಆಂಧ್ರದಲ್ಲೂ ಅಲ್ಲಲ್ಲಿ ಗಲಾಟೆ, ಹಲ್ಲೆ ಆರೋಪ - ದಾಳಿ ಖಂಡಿಸಿದ ಚಂದ್ರಬಾಬು ನಾಯ್ಡು: ಟಿಡಿಪಿ ಮುಖ್ಯಸ್ಥ ನಾರಾ ಚಂದ್ರಬಾಬು ನಾಯ್ಡು ಅವರು ಪುಂಗನೂರು, ಮಾಚೆರ್ಲಾ, ರೈಲ್ವೆ ಕೋಡೂರು, ಮೈದುಕೂರು, ಅಮದಾಲವಲಸ ಮತ್ತು ತಾಡಿಕೊಂಡದಲ್ಲಿ ಎನ್‌ಡಿಎ ಮೈತ್ರಿಕೂಟದ ಏಜೆಂಟ್‌ಗಳ ಮೇಲಿನ ದಾಳಿಯನ್ನು ಬಲವಾಗಿ ಖಂಡಿಸಿದ್ದಾರೆ.

ತೆನಾಲಿಯಲ್ಲಿ ವೈಎಸ್‌ಆರ್‌ಸಿಪಿ ಶಾಸಕ ಅನ್ನಬತುನಿ ಶಿವಕುಮಾರ್‌ ಅವರ ಕಪಾಳಮೋಕ್ಷ ಮತ್ತು ಸಂಸದ ಅಭ್ಯರ್ಥಿ ಕಿಲಾರು ರೋಸಯ್ಯ ಅವರ ಕಾರು ತಕ್ಕೆಲ್ಲಪಾಡು ಮತಗಟ್ಟೆಯಲ್ಲಿ ಎಸ್‌ಸಿ ಮಹಿಳೆಯರ ಮೇಲೆ ನುಗ್ಗಿದ ಘಟನೆಗೆ ಮಾಜಿ ಎಪಿ ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ. ಘಟನೆಗಳನ್ನು ಕೆಟ್ಟ ಅಪರಾಧಗಳು ಎಂದು ಲೇಬಲ್ ಮಾಡುತ್ತದೆ ಎಂದಿದ್ದಾರೆ.

ಜಗನ್ ರೆಡ್ಡಿ ಈಗಾಗಲೇ ಸೋಲನ್ನು ಒಪ್ಪಿಕೊಂಡಿದ್ದಾರೆ ಎಂದು ಆರೋಪಿಸಿ, ಹಲ್ಲೆ ಮತ್ತು ದೌರ್ಜನ್ಯದ ಮೂಲಕ ಮತದಾರರನ್ನು ಬೆದರಿಸಲು ಸಂಚು ನಡೆಸುತ್ತಿರುವವರ ವಿರುದ್ಧ ಚುನಾವಣಾ ಆಯೋಗ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಟಿಡಿಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಆಗ್ರಹಿಸಿದ್ದಾರೆ.

"ಸಾರ್ವಜನಿಕ ಪ್ರತಿಕ್ರಿಯೆಗಳನ್ನು ಕಂಡು ಸೋಲಿನ ಭಯದಿಂದ ಮಾಚರ್ಲಾ, ರೈಲ್ವೆ ಕೋಡೂರು, ಮತ್ತು ಪುಂಗನೂರು ಮುಂತಾದ ಕಡೆ ದಾಳಿ ನಡೆಸಲಾಗಿದೆ. ರಕ್ತಪಾತಕ್ಕೆ ಕಾರಣವಾಗುವ ವೈಎಸ್‌ಆರ್‌ಸಿಪಿ ನಾಯಕರ ವಿರುದ್ಧ ಚುನಾವಣಾ ಆಯೋಗ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಪಶ್ಚಿಮ ಬಂಗಾಳದಲ್ಲಿ ಬಿಜೆಪಿ - ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ - Lok Sabha Election 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.