ETV Bharat / bharat

ತಿರುಪತಿ ಲಡ್ಡು ವಿವಾದ: ಪ್ರಧಾನಿ ಮೋದಿಗೆ ಪತ್ರ ಬರೆದ ಮಾಜಿ ಸಿಎಂ ಜಗನ್, ಕೋರಿದ್ದೇನು? - Jagan writes to PM Modi - JAGAN WRITES TO PM MODI

ತಿರುಪತಿ ಲಡ್ಡು ವಿವಾದ ಭುಗಿಲೆದ್ದ ಬೆನ್ನಲ್ಲೇ, ಆಂಧ್ರಪ್ರದೇಶದ ಮಾಜಿ ಸಿಎಂ ಜಗನ್​​, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಸಿಎಂ ಚಂದ್ರಬಾಬು ನಾಯ್ಡು ಅವರು ದೇವಸ್ಥಾನದ ವಿಚಾರದಲ್ಲಿ ಸುಳ್ಳು ಹರಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರಧಾನಿ ಮೋದಿಗೆ ಪತ್ರ ಬರೆದ ಮಾಜಿ ಸಿಎಂ ಜಗನ್
ಪ್ರಧಾನಿ ಮೋದಿಗೆ ಪತ್ರ ಬರೆದ ಮಾಜಿ ಸಿಎಂ ಜಗನ್ (ETV Bharat)
author img

By PTI

Published : Sep 22, 2024, 6:05 PM IST

ಅಮರಾವತಿ (ಆಂಧ್ರಪ್ರದೇಶ): ವಿಶ್ವವಿಖ್ಯಾತ ತಿರುಪತಿ ತಿಮ್ಮಪ್ಪನ ಪ್ರಸಾದವಾದ ಲಡ್ಡು ಕಲಬೆರಕೆ ಆರೋಪ ಭಕ್ತವೃಂದವನ್ನು ಬೆಚ್ಚಿಬೀಳಿಸಿದೆ. ಇದು ಧಾರ್ಮಿಕ ನಂಬಿಕೆಯನ್ನೇ ಬುಡಮೇಲು ಮಾಡಿದೆ. ಈ ಬಗ್ಗೆ ಸುಳ್ಳು ಹೇಳಿದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ವಾಗ್ದಂಡನೆಗೆ ಒಳಪಡಿಸಬೇಕು ಎಂದು ಮಾಜಿ ಸಿಎಂ ಜಗನ್​​ಮೋಹನ್​​ರೆಡ್ಡಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾನುವಾರ ಪತ್ರ ಬರೆದಿದ್ದಾರೆ.

ತಿರುಪತಿ ಲಡ್ಡು ಕಲಬೆರಕೆ ವಿಚಾರದಲ್ಲಿ ನಾಯ್ಡು ಅವರು ದೊಡ್ಡ ಸುಳ್ಳು ಹರಡಿಸಿದ್ದಾರೆ. ಪ್ರಧಾನಿ ಮೋದಿ ಅವರು ಮಧ್ಯಸ್ಥಿಕೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಿಎಂ ಚಂದ್ರಬಾಬು ನಾಯ್ಡು ಅವರು ಕೇವಲ ರಾಜಕೀಯ ಉದ್ದೇಶಕ್ಕಾಗಿ ಕೋಟ್ಯಂತರ ಜನರ ನಂಬಿಕೆಗೆ ಧಕ್ಕೆ ತರುವಷ್ಟು ಕೆಳಮಟ್ಟಕ್ಕೆ ಇಳಿದಿದ್ದಾರೆ. ಸಿಎಂ ಅವರ ಹೇಳಿಕೆಗಳು ಅವರ ಸ್ಥಾನ ಮಾತ್ರವಲ್ಲದೆ ಪ್ರತಿಯೊಬ್ಬರ ನಂಬಿಕೆಗೂ ದ್ರೋಹಬಗೆದಂತಾಗಿದೆ ಎಂದು ಆರೋಪಿಸಿದ್ದಾರೆ. ವೆಂಕಟೇಶ್ವಸ್ವಾಮಿಯ ದೇಗುಲವನ್ನು ನಿರ್ವಹಣೆ ಮಾಡುವ ಟಿಟಿಡಿಯ ಪಾವಿತ್ರ್ಯತೆ ಮತ್ತು ಅದರ ಆಚರಣೆಗಳನ್ನೇ ಪ್ರಶ್ನಿಸುವಂತಾಗಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ತಮ್ಮ ಸರ್ಕಾರದ ಅವಧಿಯಲ್ಲಿ ತಿರುಪತಿ ಲಡ್ಡಿಗೆ ಬಳಕೆ ಮಾಡಲಾದ ತುಪ್ಪದ ಕುರಿತು 8 ಪುಟಗಳಲ್ಲಿ ವಿವರಿಸಿರುವ ಜಗನ್​​, ಖ್ಯಾತ ದೇಗುಲದ ಮೇಲೆ ಕೇಳಿಬಂದ ಆರೋಪದಲ್ಲಿ ತಾವೇ ಮಧ್ಯಸ್ಥಿಕೆ ವಹಿಸಬೇಕು. ಸಿಎಂ ನಾಯ್ಡು ಅವರ ಸುಳ್ಳುಗಳನ್ನು ಬಯಲು ಮಾಡಿ, ಸತ್ಯ ಏನೆಂಬುದು ಭಕ್ತರಿಗೆ ತಿಳಿಸಬೇಕಿದೆ. ಇದರಿಂದ ಕೋಟ್ಯಂತರ ಹಿಂದೂ ಭಕ್ತರ ಮನಸ್ಸಿನಲ್ಲಿ ಮೂಡಿರುವ ಅನುಮಾನ ನಿವಾರಣೆ, ಟಿಟಿಡಿಯ ಪಾವಿತ್ರ್ಯತೆಯ ಮೇಲೆ ನಂಬಿಕೆ ಪುನಃಸ್ಥಾಪಿಸಲು ಇದು ಸಹಾಯ ಮಾಡುತ್ತದೆ ಎಂದು ಜಗನ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸಿಎಂ ನಾಯ್ಡು ಆರೋಪವೇನು?: ತಿರುಪತಿ ತಿಮ್ಮಪ್ಪನ ಲಡ್ಡು ತಯಾರಿಕೆಯಲ್ಲಿ ಬಳಸಲಾದ ತುಪ್ಪವು ಕಲಬೆರಕೆಯಿಂದ ಕೂಡಿತ್ತು. ಹಿಂದಿನ ಸರ್ಕಾರ ಇದರಲ್ಲಿ ದೊಡ್ಡ ಹಗರಣ ನಡೆಸಿದೆ. ಇದರಿಂದ ದೇವಸ್ಥಾನದ ಪಾವಿತ್ರ್ಯತೆ ಹಾಳು ಮಾಡಲಾಗಿದೆ ಎಂದು ಸಿಎಂ ಚಂದ್ರಬಾಬು ನಾಯ್ಡು ಅವರು ಗಂಭೀರ ಆರೋಪ ಮಾಡಿದ್ದರು. ಲಡ್ಡು ತಯಾರಿಸಲು ಬಳಸಿದ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಪತ್ತೆಯಾಗಿದೆ ಟಿಡಿಪಿ ವರಿಷ್ಠರು ಹೇಳಿದ್ದರು.

ಇದಾದ ಬಳಿಕ ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಜೆ.ಶ್ಯಾಮಲಾ ರಾವ್ ಮಾಧ್ಯಮಗೋಷ್ಟಿ ನಡೆಸಿ, ಪ್ರಯೋಗಾಲಯ ಪರೀಕ್ಷೆಗಳಲ್ಲಿ ಲಡ್ಡುವಿನ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ ಇರುವುದು ಪತ್ತೆಯಾಗಿದೆ. ಕಲಬೆರಕೆ ತುಪ್ಪವನ್ನು ಸರಬರಾಜು ಮಾಡಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಹೇಳಿದ್ದರು.

ಇದನ್ನೂ ಓದಿ:1 ಕೆಜಿ ಶುದ್ಧ ತುಪ್ಪಕ್ಕೆ ₹1667, ತಿರುಪತಿ ಲಡ್ಡು ಪ್ರಸಾದಕ್ಕೆ ಬಳಸಿದ್ದು ₹320 ದರದ ತುಪ್ಪ! - Animal Fat In Tirupati Laddu

ETV Bharat Logo

Copyright © 2024 Ushodaya Enterprises Pvt. Ltd., All Rights Reserved.