ತಿನ್ಸುಕಿಯಾ: ಅಸ್ಸೋಂನ ತಿನ್ಸುಕಿಯಾ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ದೀಪಂಕರ್ ಬೋರಾ ಬುಧವಾರದಂದು ಆರು ಪೊಲೀಸರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಈ ಆರು ಪೊಲೀಸರು ತಿನ್ಸುಕಿಯಾದಲ್ಲಿ ಯುವಕನಿಗೆ ಚಿತ್ರಹಿಂಸೆ ನೀಡಿ, ಆತನ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಭಾಗಿಯಾಗಿದ್ದರು.
2013ರಲ್ಲಿ, ಸಾದಿಯಾ ಉಪವಿಭಾಗದ ಅಂಬಿಕಾಪುರದ 19ಎಪಿ (ಐಆರ್) ಬೆಟಾಲಿಯನ್‌ನ ಕ್ಯಾಂಪ್‌ನಲ್ಲಿ ಈ ಪೊಲೀಸರನ್ನು ನಿಯೋಜಿಸಲಾಗಿತ್ತು. ಆ ಸಂದರ್ಭ ಯುವಕನೊಬ್ಬನನ್ನು ಪೊಲೀಸರು ಅಮಾನುಷವಾಗಿ ಥಳಿಸಿದ್ದರು. ನಂತರ, ದಿಬ್ರುಗಢ್‌ನ ಎಎಂಸಿಹೆಚ್‌ನಲ್ಲಿ ಯುವಕ ಸಾವನಪ್ಪಿದ್ದ.
ತಿನ್ಸುಕಿಯಾ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ದೀಪಂಕರ್ ಬೋರಾ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302ರ ಅಡಿ ಆರು ಪೊಲೀಸರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಸಬ್ ಇನ್ಸ್‌ಪೆಕ್ಟರ್ ವಿಶಾಲ್ ಬೋರೋ, ಹವಾಲ್ದಾರ್ ಅನಂತ ದುವಾರಾ, ಕಾನ್‌ಸ್ಟೇಬಲ್ ಭರತ್ ಗೊಗೋಯ್, ಗಿರಿನ್ ಸೈಕಿಯಾ, ಉತ್ಪಲ್ ಕಾಕತಿ ಮತ್ತು ಅನಂತ ಕಾಕತಿ ಶಿಕ್ಷೆಗೊಳಗಾದವರು.
2013ರ ಅಕ್ಟೋಬರ್ 7ರ 1 ಗಂಟೆ ಸುಮಾರಿಗೆ ಅಜಿತ್ ಸೋನೋವಾಲ್ ಎಂಬ ಸ್ಥಳೀಯ ವ್ಯಕ್ತಿಯನ್ನು ಅಂಬಿಕಾಪುರ ಮಾರುಕಟ್ಟೆಯಿಂದ ಪೊಲೀಸ್ ತಂಡ ಥಳಿಸಿ ಶಿಬಿರಕ್ಕೆ ಕರೆದೊಯ್ದಿತ್ತು. ಬಳಿಕ ಸಾದಿಯಾ ಪೊಲೀಸರು ಯುವಕರನ್ನು ಶಿಬಿರದಿಂದ ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಆದರೆ ತೀವ್ರ ಥಳಿತಕ್ಕೊಳಗಾದ ಯುವಕನ ಆರೋಗ್ಯ ಹದಗೆಟ್ಟ ಕಾರಣ ಉತ್ತಮ ಚಿಕಿತ್ಸೆಗಾಗಿ ದಿಬ್ರುಗಥ್ನ ಅಸ್ಸಾಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ದುರಾದೃಷ್ಟವಶಾತ್ ಅಜಿತ್ ಸೋನೋವಾಲ್ ಕೊನೆಯುಸಿರೆಳೆದರು.
ಇಡೀ ಪ್ರಕರಣಕ್ಕೆ ಸಂಬಂಧಿಸಿದಂತೆ ಅಜಿತ್ ಸೋನೋವಾಲ್ ತಾಯಿ ಕೃತಿಕಾ ಸೋನೋವಾಲ್ ಅವರು 2013ರ ಅಕ್ಟೋಬರ್ 9 ರಂದು ಸಾದಿಯಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿರು. ಮಗನ ಸಾವಿಗೆ ಸೂಕ್ತ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು. ಎಫ್‌ಐಆರ್ ಆಧರಿಸಿ, ಸಾದಿಯಾ ಪೊಲೀಸರು ಪ್ರಕರಣದ ತನಿಖೆಯನ್ನು ಸಬ್‌ಇನ್‌ಸ್ಪೆಕ್ಟರ್ ದುಲುಮಣಿ ಬರುವಾ ಅವರಿಗೆ ವಹಿಸಿದ್ದರು.
ಇದನ್ನೂ ಓದಿ: ಸಾಕು ನಾಯಿ ದಾಳಿಗೆ ತಂದೆ-ಮಗ ಸಾವು; ಅದೃಷ್ಟವಶಾತ್ ಬದುಕುಳಿದ ತಾಯಿ - Pet Dog Attack
ತನಿಖಾಧಿಕಾರಿಯು ನ್ಯಾಯಾಲಯದಲ್ಲಿ ಆರು ಪೊಲೀಸರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ ನಂತರ ತಿನ್ಸುಕಿಯಾ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರೆದುರು ವಿಚಾರಣೆ ನಡೆಸಲಾಯಿತು. ಪ್ರಕರಣದಲ್ಲಿ ಒಟ್ಟು 27 ಸಾಕ್ಷ್ಯಧಾರರ ಹೇಳಿಕೆಗಳನ್ನು ತನಿಖಾಧಿಕಾರಿ ದಾಖಲಿಸಿದ್ದರು. ಈ ಪೈಕಿ 23 ಮಂದಿಯ ಸಾಕ್ಷಿಗಳನ್ನು ನ್ಯಾಯಾಲಯ ಸ್ವೀಕರಿಸಿದೆ. ಈ 23 ಮಂದಿಯಲ್ಲಿ 9 ಮಂದಿ ಘಟನೆಯ ಪ್ರತ್ಯಕ್ಷದರ್ಶಿಗಳು ಎಂದು ವರದಿಯಾಗಿದೆ. ಪಬ್ಲಿಕ್ ಪ್ರಾಸಿಕ್ಯೂಟರ್ ಅಶೋಕ್ ಚೌಬೆ ಅವರ ವಾದದ ನಂತರ ತಿನ್ಸುಕಿಯಾ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ದೀಪಂಕರ್ ಬೋರಾ ಅವರು ಬುಧವಾರ ಆರು ಅಸ್ಸಾಂ ಪೊಲೀಸರಿಗೆ ಜೀವಾವಧಿ ಶಿಕ್ಷೆ ವಿಧಿಸಿದರು.
ಇದನ್ನೂ ಓದಿ: ತುಂಗಾ ನದಿ ಕುರಿತು ಸಿಎಂಗೆ ಅನಿರುದ್ಧ್ ಮನವಿ ಸಲ್ಲಿಸಿದ್ಯಾಕೆ; ಪತ್ರದಲ್ಲೇನಿದೆ, ನಟ ಹೇಳಿದ್ದೇನು? - Anirudh Jatkar