ETV Bharat / bharat

ಮುಂಬೈನ 14 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ: ಮೂವರು ಸಾವು - FIRE CAUGHT IN BUILDING

ಮುಂಬೈನ 14 ಅಂತಸ್ತಿನ ಕಟ್ಟಡವೊಂದರಲ್ಲಿ ಬೆಂಕಿ ಅವಘಡದಿಂದ ಮೂವರು ಸಾವನ್ನಪ್ಪಿದ್ದಾರೆ.

ಮುಂಬೈನ 14 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ
ಮುಂಬೈನ 14 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ (ETV Bharat)
author img

By ETV Bharat Karnataka Team

Published : Oct 16, 2024, 11:54 AM IST

ಮುಂಬೈ: ನಗರದಲ್ಲಿ ಬೆಂಕಿ ಅವಘಡಗಳು ದಿನೇ ದಿನೆ ಹೆಚ್ಚುತ್ತಿದೆ. ಇಂದು ಮತ್ತೆ 14 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮೂವರು ಸಾವನ್ನಪ್ಪಿದ್ದಾರೆ.

ರಿಯಾ ಪ್ಯಾಲೇಸ್ ಅಂಧೇರಿ ಪಶ್ಚಿಮದ ಲೋಖಂಡವಾಲಾ ಪ್ರದೇಶದಲ್ಲಿ 14 ಅಂತಸ್ತಿನ ಕಟ್ಟಡದ 10 ನೇ ಮಹಡಿಯಲ್ಲಿ ಬೆಳಗ್ಗೆ 8 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ. ಸದ್ಯ ಮೂವರು ಸಾವನ್ನಪ್ಪಿರುವ ಮಾಹಿತಿ ಲಭ್ಯವಾಗಿದೆ. ಚಂದ್ರಪ್ರಕಾಶ ಸೋನಿ (ವಯಸ್ಸು 74), ಕಾಂತ ಸೋನಿ (ವಯಸ್ಸು 74), ಮತ್ತು ಪೇಲುಬೆಟ್ಟ (ವಯಸ್ಸು 42) ಮೃತರು.

ಆರಂಭದಲ್ಲಿ ಘಟನೆಯಲ್ಲಿ ಮೃತಪಟ್ಟ ಮೂವರನ್ನು ಚಿಕಿತ್ಸೆಗಾಗಿ ಕೋಪರ್​ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಅಗ್ನಿಶಾಮಕ ದಳ ಯಶಸ್ವಿಯಾಗಿದೆ.

ಇದನ್ನೂ ಓದಿ: ಗೋರಖ್‌ಪುರ ನಿಲ್ದಾಣದಲ್ಲಿ ಹಳಿ ತಪ್ಪಿದ ಮಿಲಿಟರಿ ವಿಶೇಷ ರೈಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.