ಹೈದರಾಬಾದ್: ಶ್ರೀಲಂಕಾದ ವೈದಿಕ್ ಬುಡಕಟ್ಟು ಜನರು ಭಾರತೀಯರೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದಾರೆ ಎಂಬ ಮಾಹಿತಿಯನ್ನು ಸಿಸಿಎಂಬಿ ಸಂಶೋಧನೆ ಹೊರಗೆಡುವಿದೆ. ಭಾರತದ ಕೆಲವು ಬುಡಕಟ್ಟು ಗುಂಪುಗಳೊಂದಿಗೆ ಆನುವಂಶಿಕ ಸಂಬಂಧವನ್ನು ವೈದಿಕ ಬುಡಕಟ್ಟುಗಳಲ್ಲಿ ಕಾಣಬಹುದಾಗಿದೆ.
ಶ್ರೀಲಂಕಾದ ಸಣ್ಣ ಅರಣ್ಯದಲ್ಲಿ ವಾಸವಾಗಿರುವ ಬುಡಕಟ್ಟು ಜನರ ಭಾಷೆ ಮತ್ತು ಸಂಸ್ಕೃತಿ ಗುಣಲಕ್ಷಣಗಳು ವಿಶೇಷತೆಯಿಂದ ಕೂಡಿದೆ. ಆದಾಗ್ಯೂ ಈ ಅನುವಂಶಿಕತೆ ಕುರಿತು ಯಾವುದೇ ವೈದ್ಯಕೀಯ ಪುರಾವೆಗಳು ಇಲ್ಲ. ಇದೇ ಕಾರಣದಿಂದ ಇತಿಹಾಸಕಾರರು ಮತ್ತು ವಿಜ್ಞಾನಿಗಳು ಅವರ ಮೂಲಗಳ ಅರಿವು ಕುರಿತು ಹಲವು ವರ್ಷಗಳಿಂದ ಆಸಕ್ತಿ ತೋರುತ್ತಿದ್ದಾರೆ.
ಹೈದರಾಬಾದ್ನ ಸಿಸಿಎಂಬಿ ಜೊತೆಯಲ್ಲಿ ಇತರ ನಾಲ್ಕು ಸಂಸ್ಥೆಗಳ 10 ಸಂಶೋಧನೆಗಳು, ವೈದಿಕ ಜನಸಂಖ್ಯೆ ಮೂಲಗಳ ಕುರಿತು ಅಧ್ಯಯನ ನಡೆಸಿದೆ. ಶ್ರೀಲಂಕಾದಲ್ಲಿ ವಾಸವಾಗಿರುವ ಜನರ ಡಿಎನ್ಎಯನ್ನು ನಾವು ಸಂಗ್ರಹಿಸಿದ್ದೇವೆ. ಅದನ್ನು ನಮ್ಮ ಬಳಿ ಇರುವ ಡಿಎನ್ಎ ದತ್ತಾಂಶದ ಬ್ಯಾಂಕ್ನೊಂದಿಗೆ ಹೋಲಿಕೆ ಮಾಡಿದ್ದೇವೆ. ಭಾರತದ ದಕ್ಷಿಣದ ಕಲ್ಲರ್ ಮತ್ತು ಪಲೈರ್ನಲ್ಲಿರುವ ಬುಡಕಟ್ಟು ಗುಂಪಿನಲ್ಲಿ ನಾವು ಸಾಮ್ಯತೆಯನ್ನು ಪತ್ತೆ ಮಾಡಿದ್ದೇವೆ. ಸಾವಿರಾರು ವರ್ಷಗಳ ಹಿಂದೆ ಇವರೆಲ್ಲಾ ಆಫ್ರಿಕಾದಿಂದ ಭಾರತಕ್ಕೆ ವಲಸೆ ಬಂದಿದ್ದಾರೆ. ಇವರಲ್ಲಿ ಕೆಲವರು ಶ್ರೀಲಂಕಾಗೆ ವಲಸೆ ಹೋಗಿದ್ದಾರೆ ಎಂದು ಸಂಶೋಧನೆಯ ಭಾಗವಾಗಿರುವ ಸಿಸಿಎಂಬಿ ಮುಖ್ಯ ವಿಜ್ಞಾನಿಯಾಗಿರುವ ಡಾ ತಂಗರಾಜ್ ತಿಳಿಸಿದ್ದಾರೆ.
ಈ ಅನುವಂಶಿಕತೆಯ ಸಂಬಂಧವನ್ನು ಕೇವಲ ಶ್ರೀಲಂಕಾ ಮಾತ್ರವಲ್ಲ, ದಕ್ಷಿಣ ಏಷ್ಯಾದ ದೇಶಗಳಲ್ಲಿಯೂ ಕಾಣಬಹುದಾಗಿದೆ. ಈ ಹಿನ್ನೆಲೆ ದಕ್ಷಿಣ ಏಷ್ಯಾದಲ್ಲಿನ ಅನುವಂಶಿಕತೆಯ ವೈವಿಧ್ಯತೆಯನ್ನು ಮತ್ತಷ್ಟು ಅರ್ಥ ಮಾಡಿಕೊಳ್ಳಲು ಇದು ಕೊಡುಗೆ ನೀಡುತ್ತದೆ ಎಂದು ಸಿಸಿಎಂಬಿ ನಿರ್ದೇಶಕ ಡಾ ವಿನಯ್ ಕುಮಾರ್ ನಂದಿಕುರಿ ತಿಳಿಸಿದ್ದಾರೆ.
ಈ ಅಧ್ಯಯನವನ್ನು ಇತ್ತೀಚಿಗೆ ಮೈಟೊಕಾಂಡ್ರಿಯನ್ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ. ಶ್ರೀಲಂಕಾದ ಜನಸಂಖ್ಯೆಯಲ್ಲಿ ವೈದಿಕ ಬುಡಕಟ್ಟು ಜನರು ಶೇ 1 ರಷ್ಟಿದ್ದಾರೆ.
ಇದನ್ನೂ ಓದಿ: ಬ್ರೆಜಿಲ್ನಲ್ಲಿದ್ದಾರೆ 1.7 ಮಿಲಿಯನ್ ಬುಡಕಟ್ಟು ಜನರು: ಹಿಂದಿನ ಜನಗಣತಿಗಿಂತ ದುಪ್ಪಟ್ಟು ಏರಿಕೆ