ಕಪುರ್ತಲಾ, ಪಂಜಾಬ್: ಕಾಂಗ್ ಸಾಹಬು ಗ್ರಾಮದ ಪಂಜಾಬ್ ಸಾರಿಗೆ ಇಲಾಖೆಯಿಂದ ನಿವೃತ್ತರಾದ ರೇಶಮ್ ಸಿಂಗ್ ಅವರ ಮನೆ ಈಗ ಜನರ ಆಕರ್ಷಣೆಯ ಕೇಂದ್ರವಾಗಿದೆ. ಅವರ ಮನೆ ಇಡೀ ಗ್ರಾಮದಲ್ಲಿ ವಿಭಿನ್ನವಾಗಿ ಕಾಣಲು ಅವರ ಮನೆ ಛಾವಣಿಯೇ ಕಾರಣ. ಏಕೆ ಎಂದರೆ ಪಂಜಾಬ್ ರೋಡ್‌ವೇಸ್ ಬಸ್ ಅವರ ಮನೆಯ ಛಾವಣಿಯ ಮೇಲೆ ನಿಂತಿದೆ. ಇದನ್ನು ನೋಡಲು ಅಕ್ಕಪಕ್ಕದ ಜನರು, ಈ ಪ್ರದೇಶದತ್ತ ಧಾವಿಸಿ ಬರುತ್ತಿದ್ದಾರೆ. ಪಂಜಾಬ್ ರೋಡ್‌ವೇಸ್‌ನ ನಿವೃತ್ತ ಉದ್ಯೋಗಿ ರೇಶಮ್ ಸಿಂಗ್ ಅವರು ತಮ್ಮ ಮನೆ ಛಾವಣಿ ಮೇಲೆ ಪಂಜಾಬ್ ರೋಡ್‌ವೇಸ್‌ನಂತಹ ಬಸ್ ನಿರ್ಮಿಸಿದ್ದಾರೆ.
ಮೇಲ್ಛಾವಣಿಯಲ್ಲಿ ಬಸ್ ನಿರ್ಮಿಸಿದ್ದೇಕೆ?: ಈ ಕುರಿತು ರೇಶಮ್ ಸಿಂಗ್ ಮಾತನಾಡಿ, 'ಪಿಆರ್‌ಟಿಸಿಯಿಂದ ನಿವೃತ್ತರಾದ ನಾನು ಪಂಜಾಬ್ ರೋಡ್‌ವೇಸ್‌ನ ತಾಂತ್ರಿಕ ವಿಭಾಗದಲ್ಲಿ 40 - 45 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. 2013 ರಲ್ಲಿ ತಮ್ಮ ಕೆಲಸದಿಂದ ನಿವೃತ್ತನಾದೆ. ಪಿಆರ್‌ಟಿಸಿ ನನಗೆ ಪ್ರತಿದಿನ ಊಟ ಹಾಕುತ್ತಿತ್ತು. ಇಲ್ಲಿ ನನ್ನ ಆಸ್ತಿಯೂ ಇದೆ. ಅಷ್ಟೇ ಅಲ್ಲ ನನ್ನ ಜೊತೆ ಕೆಲಸ ಮಾಡುವವರೂ ತಮ್ಮ ಆಸ್ತಿಯನ್ನು ಒಟ್ಟಿಗೆ ಇಡುತ್ತಾರೆ. ಮನೆಯ ಛಾವಣಿಯಲ್ಲಿ ನನ್ನ ಆಸ್ತಿಯನ್ನು ನಾನು ಸಿದ್ಧಪಡಿಸಿದ್ದೇನೆ. ಅಂದರೆ, ಪಿಆರ್‌ಟಿಸಿ ಬಸ್ ಛಾವಣಿ ಮೇಲೆ ನಿರ್ಮಿಸಿದ್ದೇನೆ ಎಂದು ಹೇಳಿದರು. ಅದರ ಎಲ್ಲ ಕೆಲಸಗಳು ಮುಗಿದಿದ್ದು, ಪೇಂಟಿಂಗ್ ಮಾತ್ರ ಬಾಕಿ ಇದೆ ಅಂತಾ ಹೇಳಿದರು.
ಸ್ಟೀರಿಂಗ್‌ನಿಂದ ಬಸ್‌ನಲ್ಲಿ ಸೀಟುಗಳವರೆಗೆ: ಈ ಬಸ್ ಅನ್ನು ಮನೆಯ ಛಾವಣಿಯ ಮೇಲೆ ನಿರ್ಮಿಸಿದ್ದೇನೆ. ಈ ಬಸ್ ಹೆದ್ದಾರಿಯಿಂದ ನೋಡಿದರೆ ಗೋಚರಿಸುತ್ತದೆ. ಪಂಜಾಬ್ ರೋಡ್‌ವೇಸ್‌ನ ಪ್ರತಿಯೊಂದು ಬಸ್‌ನಲ್ಲೂ ಇರುವ ಈ ಬಸ್‌ನಲ್ಲಿ ಸ್ಟೀರಿಂಗ್, ಸೀಟುಗಳು, ಎಲ್‌ಇಡಿ ಮುಂತಾದ ವಸ್ತುಗಳು ಸೇರಿದಂತೆ ಪ್ರತಿಯೊಂದು ಸಣ್ಣ ವಸ್ತುಗಳನ್ನು ಕಾಣಬಹುದಾಗಿದೆ. ಈ ಬಸ್‌ಗೆ ಇಲ್ಲಿಯವರೆಗೆ 2.5 ರಿಂದ 3 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಇನ್ನೇನು ಮನಸ್ಸಿಗೆ ಬರುತ್ತದೋ ಅದನ್ನು ಈ ಬಸ್‌ಗೆ ಸೇರಿಸುತ್ತಲೇ ಇರುತ್ತೇನೆ ಎಂದು ರೇಶಮ್ ಸಿಂಗ್ ಹೇಳಿದ್ದಾರೆ.
ಅವರು 2018 ರಲ್ಲಿ ಈ ಬಸ್ ನಿರ್ಮಾಣವನ್ನು ಪ್ರಾರಂಭಿಸಿದರು. ಆದರೆ, ಕೊರೊನಾ ಬಿಕ್ಕಟ್ಟಿನಿಂದಾಗಿ ಕೆಲಸ ನಿಂತುಹೋಯಿತು. ನಂತರ ನಾನು ಮತ್ತು ನನ್ನ ಕುಟುಂಬ ಸದಸ್ಯರು ಸ್ವತಃ ಅನಾರೋಗ್ಯಕ್ಕೆ ಒಳಗಾದೆವು. ಚೇತರಿಕೆಯ ನಂತರ, ಎಲ್ಲ ಕೆಲಸವನ್ನು ಮತ್ತೆ ಪ್ರಾರಂಭಿಸಲಾಯಿತು ಎಂದು ರೇಶಮ್ ಸಿಂಗ್ ಹೇಳಿದರು.
ಗ್ರಾಮದ ಪ್ರಸಿದ್ಧ ಬಸ್ ಮನೆ: ಈ ಬಸ್ ಬಗ್ಗೆ ಯಾವುದೇ ಪಿಆರ್‌ಟಿಸಿ ನೌಕರರಿಗೆ ಇನ್ನೂ ಮಾಹಿತಿ ನೀಡಿಲ್ಲ. ಆಗಾಗ ಪಿಆರ್‌ಟಿಸಿ ಕಾರ್ಯದರ್ಶಿ ಮತ್ತು ಇತರ ಸಂಘದ ನೌಕರರು ಭೇಟಿಯಾಗಲು ಬರುತ್ತಾರೆ. ನಿವೃತ್ತಿಯ ನಂತರ ನಾನು ನಮ್ಮ ಮನೆಯ ಛಾವಣಿ ಮೇಲೆ ಬಸ್ ನಿರ್ಮಿಸಲು ಯೋಚಿಸಿದೆ. ಇದು ನನ್ನ ಕನಸು ಇಂದು ನನಸಾಗುತ್ತಿರುವುದು ಸಂತಸ ತಂದಿದೆ. ಈ ಸಂದರ್ಭದಲ್ಲಿ ನನ್ನ ಹಳ್ಳಿಯಲ್ಲಿರುವ ನನ್ನ ಮನೆ ಈಗ ಈ ಪಿಆರ್‌ಟಿಸಿ ಬಸ್ ಹೌಸ್ ಹೆಸರಿನಿಂದ ಪ್ರಸಿದ್ಧವಾಗಿದೆ. ನಮ್ಮ ಮೊಮ್ಮಕ್ಕಳು ಈ ಬಸ್ನ ಸಂಪೂರ್ಣ ಕಾಳಜಿ ವಹಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಅಂತಾ ರೇಶಮ್ ಸಿಂಗ್ ಹೇಳಿದರು.
ಓದಿ: ಭಾಷಣ ಅಥವಾ ಮತ ಹಾಕಲು ಲಂಚ ಪಡೆದ ಜನಪ್ರತಿನಿಧಿಗಳಿಗೆ ಕಾನೂನು ವಿನಾಯಿತಿ ಇಲ್ಲ: ಸುಪ್ರೀಂ ಕೋರ್ಟ್