ETV Bharat / bharat

ಟ್ರೆಂಡ್‌ಗೆ​ ತಕ್ಕಂತೆ ಬದಲಾಗುತ್ತಿರುವ ಸೈಬರ್​ ಅಪರಾಧಿಗಳು; ಅನಗತ್ಯ ಜಾಹೀರಾತುಗಳ ಬಗ್ಗೆ ಇರಲಿ ಎಚ್ಚರಿಕೆ - Jandhan Yojana

ಚುನಾವಣಾ ಸಮಯದಲ್ಲಿ ಸೈಬರ್ ಕ್ರಿಮಿನಲ್‌ಗಳು ಹೊಸ ತಂತ್ರ ಬಳಸುತ್ತಿದ್ದು, ಸರ್ಕಾರದ ಯೋಜನೆಗಳ ಹೆಸರಿನಲ್ಲಿ ಹಣ ಲೂಟಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

Looting money  government schemes  Lok Sabha elections  spreading rumors
ಅನಗತ್ಯ ಜಾಹೀರಾತುಗಳನ್ನು ನಂಬಬೇಡಿ ಎನ್ನತ್ತಿದೆ ಪೊಲೀಸ್​ ಇಲಾಖೆ
author img

By ETV Bharat Karnataka Team

Published : Mar 18, 2024, 3:17 PM IST

ಹೈದರಾಬಾದ್ (ತೆಲಂಗಾಣ) : ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಸೈಬರ್ ಕ್ರಿಮಿನಲ್​ಗಳು ಸರ್ಕಾರಿ ಯೋಜನೆಗಳ ಹೆಸರಲ್ಲಿ ಹಣ ಸುಲಿಗೆ ಮಾಡುತ್ತಿದ್ದಾರೆ. ಸೈಬರ್​ ಅಪರಾಧಿಗಳು, ಕೇಂದ್ರ ಸರ್ಕಾರ ‘ಜನಧನ್ ಯೋಜನೆ’ ಮೂಲಕ ನಿಮ್ಮ ಬ್ಯಾಂಕ್ ಖಾತೆಗೆ 5 ಸಾವಿರ ರೂಪಾಯಿ ಹಣ ಜಮಾ ಮಾಡುತ್ತಿದೆ ಅಂತಾ ಅಪಪ್ರಚಾರ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣದಲ್ಲಿ ನಕಲಿ ಪೋಸ್ಟ್​​ಗಳು, ಲಿಂಕ್​ಗಳನ್ನು ಕಳುಹಿಸುವ ಮೂಲಕ ಅಮಾಯಕರ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಈಗಾಗಲೇ ಹತ್ತಾರು ಸಂತ್ರಸ್ತರು ಹಣ ಕಳೆದುಕೊಂಡಿರುವುದು ಬೆಳಕಿಗೆ ಬಂದಿದೆ.

ಸ್ಕ್ರ್ಯಾಚ್ ಮತ್ತು ಸ್ಕ್ಯಾನ್ ಮಾಡಿ: Instagram ಮತ್ತು Facebook ನಲ್ಲಿ ಪೋಸ್ಟ್‌ಗಳು ಮತ್ತು ರೀಲ್‌ಗಳಂತಹ ಕೆಲವು ಜಾಹೀರಾತುಗಳಿವೆ. ಇವುಗಳಲ್ಲಿ ಕೆಲವು ಸೈಬರ್ ಅಪರಾಧಿಗಳು ಹರಿಯಬಿಟ್ಟಿದ್ದಾರೆ. ಹಣದ ನಿರೀಕ್ಷೆಯಲ್ಲಿ ನೀವು ಅದರ ಮೇಲೆ ಕ್ಲಿಕ್ ಮಾಡಿದರೆ, ಅದು ನಿಮ್ಮನ್ನು ನೇರವಾಗಿ ಅಪರಾಧಿಗಳು ರಚಿಸಿದ ವೆಬ್‌ಸೈಟ್‌ಗೆ ಕರೆದೊಯ್ಯುತ್ತದೆ. ಇದು ನರೇಂದ್ರ ಮೋದಿಯವರ ಚಿತ್ರವಿರುವ ಸರ್ಕಾರಿ ವೆಬ್‌ಸೈಟ್‌ನಂತೆ ಕಾಣುತ್ತದೆ. ಅಲ್ಲಿ ಕಾಣಿಸಿಕೊಳ್ಳುವ ಕಾರ್ಡ್ ಅನ್ನು ಸ್ಕ್ರ್ಯಾಚ್ ಮಾಡಲು ಸೂಚಿಸಲಾಗುತ್ತದೆ. ಆಗ ನಿಮಗೆ ಐದು ಸಾವಿರ ಅಥವಾ ಅದಕ್ಕಿಂತ ಹೆಚ್ಚು ಮೊತ್ತ ನಿಮ್ಮ ಖಾತೆ ಜಮಾ ಆಗುತ್ತದೆ ಎಂದು ತೋರಿಸುತ್ತದೆ. ಈ ಹಣವನ್ನು ಪಡೆಯಲು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಲು ತಿಳಿಸುತ್ತದೆ. ಸ್ಕ್ಯಾನ್ ಮಾಡಿದ ನಂತರ ಅದು UPI ಪಿನ್ ಕೇಳುತ್ತದೆ. ಒಂದು ವೇಳೆ ಪಿನ್ ಎಂಟ್ರಿ ಮಾಡಿದ್ರೆ ನಿಮ್ಮ ಖಾತೆಯಲ್ಲಿರುವ ಹಣ ಖಾಲಿಯಾಗುತ್ತದೆ.

ಕೆಲವರು ಇಂತಹ ಸುಳ್ಳು ಜಾಹೀರಾತುಗಳನ್ನು ನಂಬಿ ಸಾವಿರಾರು ರೂಪಾಯಿ ಹಣ ಕಳೆದುಕೊಂಡಿದ್ದಾರೆ. ಈ ರೀತಿಯ ಜನಧನ್ ಯೋಜನೆ ಹೆಸರಿನಲ್ಲಿ ಬರುವ ಲಿಂಕ್​ಗಳನ್ನು ಕ್ಲಿಕ್ ಮಾಡಿದರೆ ಅನುಮತಿಯಿಲ್ಲದೆ ಕೆಲವೊಂದು ಆ್ಯಪ್​ಗಳು ಡೌನ್ ಲೋಡ್ ಆಗುತ್ತಿವೆ ಎನ್ನುತ್ತಾರೆ ಪೊಲೀಸರು. ಪರಿಣಾಮವಾಗಿ, ಫೋನ್‌ಗಳಲ್ಲಿನ ಬ್ಯಾಂಕ್ ಖಾತೆಗಳ ಗೌಪ್ಯ ಮತ್ತು ವೈಯಕ್ತಿಕ ಮಾಹಿತಿಯು ಆಗಾಗ್ಗೆ ಅಪರಾಧಿಗಳಿಗೆ ರವಾನೆಯಾಗುತ್ತದೆ. ಅಷ್ಟೇ ಅಲ್ಲ, ಫೋನ್ ಅನ್ನು ಸಂಪೂರ್ಣವಾಗಿ ಅವರು ತಮ್ಮ ವಶಕ್ಕೆ ತೆಗೆದುಕೊಂಡು ತಮಗೆ ಯಾವರೀತಿ ಬೇಕೋ ಆ ರೀತಿ ಬಳಸಿಕೊಳ್ಳುತ್ತಾರೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.

ಟ್ರೆಂಡ್​ಗೆ ತಕ್ಕಂತೆ ವಂಚನೆ..!: ಸೈಬರ್ ಅಪರಾಧಿಗಳು ಇತ್ತೀಚಿನ ವರದಿ ಪ್ರಕಾರ ಟ್ರೆಂಡ್​ಗೆ ತಕ್ಕಂತೆ ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ವಿವಿಧ ರಾಜ್ಯಗಳಲ್ಲಿನ ಇತ್ತೀಚಿನ ಬೆಳವಣಿಗೆಗಳ ತಕ್ಕಂತೆ ಸೈಬರ್ ಅಪರಾಧಿಗಳು ವಂಚನೆಗಳನ್ನು ಎಸಗುತ್ತಿದ್ದಾರೆ. ಈ ಹಿಂದೆ ಕ್ರೆಡಿಟ್, ಡೆಬಿಟ್ ಕಾರ್ಡ್ ಮತ್ತು ಕಾಲ್ ಸೆಂಟರ್​ ಮೂಲಕ ವಂಚನೆಗಳು ಹೆಚ್ಚಾಗಿ ನಡೆಯುತ್ತಿದ್ದವು. ಈಗ ಯೋಜನೆಗಳ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದಾರೆ. ಜನಪ್ರಿಯವಾದ ವಿಷಯಗಳನ್ನು ಆರಿಸಿಕೊಂಡು ಜನರನ್ನು ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ.

ಮುನ್ನೆಚ್ಚರಿಕೆಗಳು..:

  1. ಕೇಂದ್ರ ಸರ್ಕಾರವು ಬ್ಯಾಂಕ್ ಖಾತೆಗಳಲ್ಲಿ ಹಣವನ್ನು ಜಮಾ ಮಾಡುತ್ತಿದೆ ಎಂಬ ಲಿಂಕ್​ಗಳ ಜಾಹೀರಾತುಗಳನ್ನು ಯಾವುದೇ ಸಂದರ್ಭದಲ್ಲೂ ನಂಬಬೇಡಿ.
  2. ಸರ್ಕಾರವು ನಗದು ನೀಡಲು ಬಯಸಿದರೆ ಅರ್ಜಿಗಳನ್ನು ಸ್ವೀಕರಿಸಿ, ಅರ್ಹರಿಗೆ ಮಾತ್ರ ಹಣ ನೀಡುತ್ತದೆ.
  3. ನಾವು ಕ್ಯೂಆರ್​ ಕೋಡ್​ ಅನ್ನು ಸ್ಕ್ಯಾನ್​ ಮಾಡಿ, ಯುಪಿಐ ಪಿನ್​ ನಮೂದಿಸಿದ್ರೆ ಬೇರೆಯವರಿಗೆ ನಾವು ಹಣ ಕಳುಹಿಸುತ್ತಿದ್ದೇವೆ ಎಂದರ್ಥ.
  4. QR ಕೋಡ್ ಅನ್ನು ಸ್ಕ್ಯಾನ್ ಮಾಡಿದ ನಂತರ, ಯುಪಿಐ ಪಿನ್​ ನಮೂದಿಸಿದ್ರೆ ಹಣ ನಿಮ್ಮ ಖಾತೆಗೆ ಜಮಾ ಆಗುವುದಿಲ್ಲ. ಹೀಗಾಗಿ ಪಿನ್​ ನಮೂದಿಸುವ ವೇಳೆ ಎಚ್ಚರ ವಹಿಸಬೇಕು.. ಅನಗತ್ಯ ಜಾಹೀರಾತುಗಳನ್ನು ನಂಬಬೇಡಿ ಎನ್ನುತ್ತಾರೆ ಪೊಲೀಸ್ ಇಲಾಖೆ.

ಓದಿ: ಉತ್ಕೃಷ್ಟ ಸ್ಮಾರ್ಟ್​ಫೋನ್​ಗಳಿಗಾಗಿ ಸ್ನ್ಯಾಪ್ ಡ್ರಾಗನ್ 8s Gen 3 ಚಿಪ್ ಬಿಡುಗಡೆ ಮಾಡಿದ ಕ್ವಾಲ್ಕಾಮ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.