ನವದೆಹಲಿ: ನೂತನ ಪಂಬನ್ ಸೇತುವೆಯು 'ಆಧುನಿಕ ಎಂಜಿನಿಯರಿಂಗ್ನ ಅದ್ಭುತ' ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಬಣ್ಣಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸರಣಿ ಪೋಸ್ಟ್ ಮಾಡಿರುವ ಅವರು, ದೇಶದ ಮುಖ್ಯ ಭೂಭಾಗವನ್ನು ರಾಮೇಶ್ವರಂ ದ್ವೀಪಕ್ಕೆ ಸಂಪರ್ಕಿಸುವ ಭಾರತದ ಮೊದಲ ವರ್ಟಿಕಲ್-ಲಿಫ್ಟ್ ಸೇತುವೆ ರೈಲ್ವೆಗೆ, ಯಾಂತ್ರಿಕ ವಿಶಿಷ್ಟತೆ ಮತ್ತು ಪ್ರಕ್ಷುಬ್ಧ ಸಮುದ್ರದ ಸವಾಲಿನ ಹೊರತಾಗಿಯೂ ಎಲ್ಲರ ಗಮನ ಸೆಳೆಯುವ ಕೇಂದ್ರ ಬಿಂದುವಾಗಿದೆ. ನೂತರ ಪಂಬನ್ ಸೇತುವೆ ನವೀಕರಿಸಿದ ರಾಮೇಶ್ವರಂ ರೈಲ್ವೆ ನಿಲ್ದಾಣದೊಂದಿಗೆ (ನಿರ್ಮಾಣ ಹಂತದಲ್ಲಿದೆ) ಐತಿಹಾಸಿಕ ದ್ವೀಪಕ್ಕೆ ಪ್ರವಾಸೋದ್ಯಮ, ವ್ಯಾಪಾರವನ್ನು ಮತ್ತಷ್ಟು ವಿಸ್ತರಿಸುತ್ತದೆ ಮತ್ತು ಸಂಪರ್ಕ ಕಲ್ಪಿಸುತ್ತದೆ ಎಂದರು.
🚆The New Pamban Bridge: A modern engineering marvel!
— Ashwini Vaishnaw (@AshwiniVaishnaw) November 29, 2024
🧵Know the details 👇🏻 pic.twitter.com/SQ5jCaMisO
105 ವರ್ಷಗಳ ಕಾಲ ಸೇವೆ ನೀಡಿದ್ದ ಹಳೇ ಸೇತುವೆ: ಆಧುನಿಕ ಎಂಜಿನಿಯರಿಂಗ್‌ನೊಂದಿಗೆ ಜನರು ಮತ್ತು ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ಪಂಬನ್ ಸೇತುವೆ ಪ್ರಗತಿಯ ಸಂಕೇತವಾಗಿದೆ. 1914 ರಿಂದ ಕಾರ್ಯನಿರ್ವಹಿಸುತ್ತಿದ್ದ ಹಳೆಯ ಪಂಬನ್ ರೈಲು ಸೇತುವೆಯು ಶಿಥಿಲಾವಸ್ಥೆ ತಲುಪಿದ ಕಾರಣ ಡಿಸೆಂಬರ್ 2022 ರಲ್ಲಿ ಸ್ಥಗಿತಗೊಂಡಿದೆ. ಹಳೆಯ ಪಂಬನ್ ರೈಲು ಸೇತುವೆಯು 105 ವರ್ಷಗಳ ಕಾಲ ದೇಶದ ಮುಖ್ಯ ಭೂಭಾಗವನ್ನು ರಾಮೇಶ್ವರಂಗೆ ಸಂಪರ್ಕ ಕಲ್ಪಿಸಿತ್ತು ಎಂದು ನೆನೆದರು.
1/ 🚆India’s first vertical lift railway sea bridge!
— Ashwini Vaishnaw (@AshwiniVaishnaw) November 29, 2024
The New Pamban Bridge connects the Indian mainland to Rameswaram Island, Tamil Nadu. This state-of-the-art project is a significant upgrade, designed for speed, safety and innovation. pic.twitter.com/HVBafCM1Ne
ಹೀಗಾಗಿ ಆಧುನಿಕ ಪಂಬನ್ ಸೇತುವೆಗೆ ನಿರ್ಮಾಣಕ್ಕೆ ಇದು ದಾರಿ ಮಾಡಿಕೊಟ್ಟಿತು. ಇದು ಸಂಪರ್ಕದ ಹೊಸ ಯುಗವನ್ನು ಗುರುತಿಸುತ್ತದೆ. ನೂತನ ಸಂಪೂರ್ಣ ಸ್ವಯಂಚಾಲಿತ ವರ್ಟಿಕಲ್ ಲಿಫ್ಟ್ ಸ್ಪ್ಯಾನ್ ಸುರಕ್ಷಿತ 22 ಮೀಟರ್ ಕ್ಲಿಯರೆನ್ಸ್ ನೀಡುತ್ತದೆ. ಡಬಲ್ ಟ್ರ್ಯಾಕ್ಗಳು ವಿದ್ಯುದೀಕರಣಗೊಂಡಿವೆ ಮತ್ತು ಹೈಸ್ಪೀಡ್ ರೈಲುಗಳ ಸಂಚಾರಕ್ಕೆ ಅನುಕೂಲವಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿದರು.
2/ ⏳A journey through time
— Ashwini Vaishnaw (@AshwiniVaishnaw) November 29, 2024
🚄Built in 1914, the old Pamban Rail Bridge connected the mainland to Rameswaram for 105 years.
Decommissioned in Dec 2022 due to corrosion, it paved the way for the modern New Pamban Bridge, marking a new era of connectivity! pic.twitter.com/zL1kCOj9jH
ರೈಲ್ವೆ ಸುರಕ್ಷತಾ ಆಯುಕ್ತರು, ಇತ್ತೀಚೆಗೆ ಸೇತುವೆ ಪರಿಶೀಲಿಸಿದರು ಮತ್ತು ಪ್ರಯಾಣಿಕರು ಹಾಗೂ ಸರಕು ಸಾಗಣೆ ರೈಲುಗಳ ಕಾರ್ಯಾಚರಣೆ ಪ್ರಾರಂಭಿಸುವುದಕ್ಕೂ ಮೊದಲು ಕೆಲವು ನ್ಯೂನತೆಗಳನ್ನು ಸರಿಪಡಿಸಲು ಸೂಚಿಸಿದರು.
ರೈಲ್ವೆ ವಿಕಾಸ್ ನಿಗಮ್ ಲಿಮಿಟೆಡ್ 2.08 ಕಿ.ಮೀ ಉದ್ದದ ಹೊಸ ಪಂಪನ್ ಸೇತುವೆಯ ನಿರ್ಮಾಣ ಮಾಡುತ್ತಿದೆ. 72.5 ಮೀ ಉದ್ದ, 16 ಮೀ ಅಗಲ ಮತ್ತು 550 ಟನ್ ತೂಕದ ಲಿಫ್ಟ್ ಸ್ಪ್ಯಾನ್ ಅನ್ನು ಅಳವಡಿಸುವುದು ಸಂಸ್ಥೆಗೆ ದೊಡ್ಡ ಸವಾಲಾಗಿತ್ತು.
3/ 🔄 Century apart!
— Ashwini Vaishnaw (@AshwiniVaishnaw) November 29, 2024
How the new Pamban bridge is different from the old one.
🚆Old Bridge (1914):
➡️ Manual Scherzer rolling lift span for ship passage. 2 workers at each side to lift using levers.
➡️Air clearance: 19m above sea level.
➡️Single track
➡️Corroded structure,… pic.twitter.com/3TqsvDMs5B
"ನಾವು ಮಾರ್ಚ್ 10 ರಿಂದ ಈ ಲಿಫ್ಟ್ ಸ್ಪ್ಯಾನ್ ಅನ್ನು ಅಳವಡಿಸಲು ಪ್ರಾರಂಭಿಸಿದ್ದೇವೆ ಮತ್ತು ಇಲ್ಲಿಯವರೆಗೆ, ನಾವು 550 ಟನ್ ಲಿಫ್ಟ್ ಸ್ಪ್ಯಾನ್ ಅನ್ನು 80 ಮೀಟರ್ ಸೇತುವೆಯ ಮಧ್ಯಕ್ಕೆ ಸ್ಥಳಾಂತರಿಸಿದ್ದೇವೆ. ಸೇತುವೆಯ 2.65 ಡಿಗ್ರಿ ವಕ್ರ ಜೋಡಣೆಯು ದೊಡ್ಡ ಸವಾಲಾಗಿದೆ" ಎಂದು ಆರ್‌ವಿಎನ್‌ಎಲ್‌ನ ಹಿರಿಯ ಅಧಿಕಾರಿಯೊಬ್ಬರು ಈ ಹಿಂದೆ ಹೇಳಿದ್ದರು.
ಇದನ್ನೂ ಓದಿ: 3,500 ಕಿ.ಮೀ ದೂರ ಹಾರಬಲ್ಲ ಪರಮಾಣು ಸಾಮರ್ಥ್ಯದ ಕೆ-4 ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆ ನಡೆಸಿದ ಭಾರತ