ನವದೆಹಲಿ: ರಾಷ್ಟ್ರ ರಾಜಧಾನಿ ಭಾರೀ ಚಳಿಯಿಂದ ನಡುಗುತ್ತಿದೆ. ದೆಹಲಿಯಲ್ಲಿ ಗುರುವಾರ ಕನಿಷ್ಠ ತಾಪಮಾನ 4.5 ಡಿಗ್ರಿ ಸೆಲ್ಸಿಯಸ್ಗೆ ಕುಸಿದಿದ್ದು, ಗರಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಐಎಂಡಿ ತಿಳಿಸಿದೆ. ದೆಹಲಿಯಲ್ಲಿ ಶೀತ ಪರಿಸ್ಥಿತಿಯ ಜೊತೆಗೆ ಶುಭ್ರ ಆಕಾಶ ಇದ್ದು, ಇಂದು ಸಂಜೆ ವೇಳೆಗೆ ಹೊಗೆ ಕಡಿಮೆಯಾಗುವ ಸಾಧ್ಯತೆಗಳಿವೆ. ಗಾಳಿಯು ವಾಯುವ್ಯದೆಡೆಗೆ ಗಂಟೆಗೆ 8 ಕಿಮೀ ವೇಗದಲ್ಲಿ ಬೀಸಲಿದ್ದು, ಮಧ್ಯಾಹ್ನದ ಹೊತ್ತಿಗೆ ಗಂಟೆಗೆ 16 ಕಿ.ಮೀ ವೇಗ ಪಡೆದುಕೊಳ್ಳಲಿದೆ.
ಸಫ್ಧರ್ಗಂಜ್ನಲ್ಲಿ ಕನಿಷ್ಠ ತಾಪಮಾನ 4.5 ಡಿಗ್ರಿ ಸೆಲ್ಸಿಸ್ ದಾಖಲಾದರೆ, ಪಾಲಂನಲ್ಲಿ ಕನಿಷ್ಟ 6.0 ಮತ್ತು ಗರಿಷ್ಠ 20 ಡಿಗ್ರಿ ಸೆಲ್ಸಿಯಸ್ ಇದೆ. ಲೋದಿ ರಸ್ತೆಯಲ್ಲಿ ಕನಿಷ್ಠ 5 ಡಿಗ್ರಿ ಸೆ, ಗರಿಷ್ಠ 23 ಡಿಗ್ರಿ ಸೆ, ಅಯನಗರ್ನಲ್ಲಿ ಕನಿಷ್ಠ 3.8 ಡಿಗ್ರಿ ಸೆ ಮತ್ತು ಗರಿಷ್ಠ 22.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ನಗರದೆಲ್ಲೆಡೆಗೆ ಸಣ್ಣ ಮಂಜಿನ ಹೊದಿಕೆ ಕಂಡು ಬಂದಿದೆ. ದೆಹಲಿಯನ್ನು ಸಂಪೂರ್ಣವಾಗಿ ಈ ಮಂಜಿನ ಹೊದಿಕೆ ಆವರಿಸಿದ್ದು, ಕನಿಷ್ಟ 4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಐಎಂಡಿ ತಿಳಿಸಿದೆ.
ಶೀತದಿಂದ ರಕ್ಷಿಸಿಕೊಳ್ಳಲು ಬೆಚ್ಚಗಿನ ವಸ್ತುಗಳ ಮೊರೆ ಹೋದ ಜನರು: ದೆಹಲಿಯಲ್ಲಿ ತಾಪಮಾನ ಇಳಿಕೆ ಕಾಣುತ್ತಿದ್ದಂತೆ ಜನರು ಬೆಚ್ಚಗಿನ ಆಶ್ರಯಕ್ಕೆ ಮುಂದಾಗಿದ್ದಾರೆ. ಉತ್ತರ ಭಾರತದೆಲ್ಲೆಡೆ ಶೀತದ ಅಲೆ ಹೆಚ್ಚಲಿದ್ದು, ಡಿಸೆಂಬರ್ 12 ರಿಂದ 16 ರವರೆಗೆ ರಾಜಸ್ಥಾನ, ಪಂಜಾಬ್, ಹರಿಯಾಣ, ಚಂಡೀಗಢ, ಉತ್ತರ ಪ್ರದೇಶ, ಮಧ್ಯಪ್ರದೇಶ, ಸೌರಾಷ್ಟ್ರ ಮತ್ತು ಕಚ್, ದೆಹಲಿಯಾದ್ಯಂತ ಶೀತದ ಅಲೆಗಳ ಪರಿಸ್ಥಿತಿಗಳನ್ನು ಊಹಿಸಲಾಗಿದೆ.
ಇನ್ನು ಮುಂಬೈನಲ್ಲಿ ಹಲವಾರು ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟದಲ್ಲಿ ಮಂಜಿನ ಹೊಂದಿಕೆ ಕಂಡು ಬಂದಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ. ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ, ಬಿಹಾರ, ಅಸ್ಸಾಂ ಮತ್ತು ಮೇಘಾಲಯ ಮತ್ತು ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರದಲ್ಲಿ ಕೂಡ ರಾತ್ರಿ ಮತ್ತು ಬೆಳಗ್ಗೆ ದಟ್ಟವಾದ ಮಂಜು ಕವಿದ ವಾತಾವರಣ ಕಂಡು ಬಂದಿದೆ.
ಕಾಶ್ಮೀರ ಕಣಿವೆಯಲ್ಲಿ ಥರಗುಟ್ಟುವ ಚಳಿ ಇದ್ದು, ಕಣಿವೆ ರಾಜ್ಯದೆಲ್ಲೆಡೆ ಈ ವಾತಾವರಣ ಮುಂದುವರೆದಿದ್ದು, ಜನರ ಸಾಮಾನ್ಯ ಚಟುವಟಿಕೆ ಮೇಲೆ ಪರಿಣಾಮ ಬೀರಿದೆ. ಬುಧವಾರ ಶ್ರೀನಗರದಲ್ಲಿ ಕನಿಷ್ಠ ತಾಪಮಾನ -3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಉತ್ತರ ಭಾರತದಲ್ಲೆಡೆ ಶೀತದ ಅಲೆ ಮುಂದುವರೆದಿದ್ದು, ಶಿಮ್ಲಾ ಮತ್ತು ಸುತ್ತಮುತ್ತ ಪ್ರದೇಶದಲ್ಲಿ ಹಿಮಪಾತ ಕಂಡಿದೆ. ಹಿಮದಿಂದಾಗಿ ನಿವಾಸಿಗಳಿಗೆ ದೈನಂದಿನ ಚಟುವಟಿಕೆ ಕಷ್ಟವಾಗಿದೆ.
ಇದನ್ನೂ ಓದಿ: ರೈಲು ಪ್ರಯಾಣಿಕರಿಗಾಗಿ ಬಂದಿದೆ ಸೂಪರ್ ಅಪ್ಲಿಕೇಶನ್: ಟಿಕೆಟ್ ಬುಕಿಂಗ್ ಈಗ ತುಂಬಾ ಸುಲಭ