ಹೈದರಾಬಾದ್: ತರಂಗ್ ಶಕ್ತಿ 2024 ವೈಮಾನಿಕ ಪ್ರದರ್ಶನದದಲ್ಲಿ ಭಾರತೀಯ ವಾಯುಪಡೆಯ ಸೂರ್ಯ ಕಿರಣ್ ಮತ್ತು ಸಾರಂಗ್ ತಂಡಗಳ ವೈಮಾನಿಕ ಸಾಹಸಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಾಕ್ಷಿಯಾದರು. 27 ದೇಶಗಳ ಪ್ರತಿನಿಧಿಗಳು ಭಾಗಿಯಾಗಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೇಂದ್ರ ರಕ್ಷಣಾ ಸಚಿವರು, ನಿಮ್ಮೊಂದಿಗೆ ಒಟ್ಟಾಗಿ ಕೆಲಸ ಮಾಡಲು ಭಾರತ ಸಿದ್ಧವಿದೆ. ನಮ್ಮ ಸಹಕಾರವು ಕೇವಲ ರಾಜಕೀಯ ಅಥವಾ ತಾಂತ್ರಿಕತೆಗೆ ಸೀಮಿತವಾಗಿಲ್ಲ. ಉನ್ನತ ಸಹಕಾರಕ್ಕೆ ಬದಲಾಗಬೇಕು ಎಂದರು.
‘Tarang Shakti’ is aimed at enhancing operational coordination among Friendly Countries. Speaking at the event in Jodhpur. https://t.co/UPK6g2N44E
— Rajnath Singh (@rajnathsingh) September 12, 2024
ಒಗ್ಗಟ್ಟಿನ ನಡಿಗೆ: ಇಂದಿನ ಕಾಲಘಟ್ಟದಲ್ಲಿ ಒಬ್ಬರನ್ನೊಬ್ಬರು ಮೀರಿಸುವ ಪೈಪೋಟಿಯೇ ಹೆಚ್ಚಿದೆ. ಅನೇಕ ಸ್ಥಳಗಳಲ್ಲಿ, ವಿವಿಧ ದೇಶಗಳ ನಡುವೆ ನಿರಂತರವಾಗಿ ಯುದ್ಧಗಳು ನಡೆಯುತ್ತಿವೆ. ಈ ಕಷ್ಟದ ಸಂದರ್ಭಗಳಲ್ಲಿ ಪರಸ್ಪರರ ಕೈ ಹಿಡಿದು ಸಾಗುವ ಗುರಿಯನ್ನು ಭಾರತ ಹೊಂದಿದೆ. ಪ್ರಪಂಚದಾದ್ಯಂತ ನಡೆಯುತ್ತಿರುವ ಬದಲಾವಣೆ, ಸವಾಲುಗಳ ನಡುವೆ ನಾವು ನಮ್ಮ ಪಾಲುದಾರಿಕೆ ಮತ್ತು ಸಹಯೋಗವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬೇಕಾಗಿದೆ. ರಕ್ಷಣಾ ವಲಯದಲ್ಲಿನ ಉತ್ಪಾದನೆಯಲ್ಲಿ ಭಾರತದ ಪ್ರಗತಿ ಕಾಣುತ್ತಿದ್ದು, ಭಾರತ ಸಹಭಾಗಿತ್ವ ಹೆಚ್ಚಿಸಲಿದೆ ಎಂದರು.
ರಕ್ಷಣಾ ವಲಯದ ಬೆಳೆವಣಿಗೆ: ಹಲವು ವರ್ಷಗಳ ಹಿಂದೆ ಭಾರತ ಶಸಾಸ್ತ್ರಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದು. ಆದರೆ, ಇಂದು ಪರಿಸ್ಥಿತಿ ಬದಲಾಗಿದ್ದು, 90 ದೇಶಗಳಿಗೆ ಯುದ್ದ ಸಾಮಗ್ರಿಗಳನ್ನು ರಫ್ತು ಮಾಡುತ್ತಿದೆ. ನಮ್ಮ ವಾಯು ಸೇನೆ ಮತ್ತು ರಕ್ಷಣಾ ವಲಯದ ಬೆಳವಣಿಗೆಯ ಅನೇಕ ಸುವರ್ಣ ಕಥೆಗಳು ಕಾಣಬಹುದಾಗಿದೆ. ತರಂಗ್ ಶಕ್ತಿ ಸಂಘಟನೆ ಕುರಿತು ಮಾತನಾಡುವುದಾದರೆ, ಇದು ಭಾರತೀಯ ವಾಯು ಸೇನೆಯ ದೊಡ್ಡ ಶಕ್ತಿಯಾಗಿದೆ. ಇದು ಭಾರತೀಯ ವಾಯುಪಡೆಯ ದೊಡ್ಡ ಯಶಸ್ಸು ಎಂದು ಹೇಳಿದರು. ಇದೊಂದು ತಂಡದ ಪ್ರಯತ್ನ. ಇದರಲ್ಲಿ ಭಾಗಿಯಾದ ಜನರಿಗೆ ಶುಭ ಕೋರಿದರು.
ವೈಮಾನಿಕ ಹಾರಾಟದಲ್ಲಿ, ಸ್ವದೇಶಿ ನಿರ್ಮಿತ ಹೆಲಿಕಾಪ್ಟರ್‌ಗಳಾದ ಪ್ರಚಂಡ ಮತ್ತು ತೇಜಸ್ ತಮ್ಮ ಸಾಮರ್ಥ್ಯವನ್ನು ತೋರಿಸಿದವು. ಅಗ್ನಿವೀರ್ ಮಹಿಳೆಯರ ಸಾಹಸ ಪ್ರದರ್ಶದೊಂದಿಗೆ ಒಂದು ಗಂಟೆಯ ಕಾರ್ಯಕ್ರಮ ಆರಂಭವಾಯಿತು. ಈ ಕಾರ್ಯಕ್ರಮದಲ್ಲಿ ದೇಶದ ಮೂರು ಸೇನೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಡಿಆರ್‌ಡಿಒ ಮುಖ್ಯಸ್ಥ, ಜೋಧ್‌ಪುರದ ಮಾಜಿ ಮಹಾರಾಜ ಗಜ್ ಸಿಂಗ್ ಮತ್ತು ಇತರರು ಉಪಸ್ಥಿತರಿದ್ದರು.
ಈ ಜಂಟಿ ಮಿಲಿಟರಿ ಕಸರತ್ತಿನಲ್ಲಿ ಅಮೆರಿಕ, ಆಸ್ಟ್ರೇಲಿಯಾ, ಜಪಾನ್, ಸಿಂಗಾಪುರ್, ಯುಎಇ, ಗ್ರೀಸ್ ಮತ್ತು ಶ್ರೀಲಂಕಾ ವಾಯುಪಡೆಗಳು ಭಾಗವಹಿಸಿದ್ದವು. ಸೆಪ್ಟೆಂಬರ್ 7ರಿಂದ ಸೆಪ್ಟೆಂಬರ್ 14 ರವರೆಗೆ ಜೋದ್ಫುರದ ಭಾರತೀಯ ವಾಯು ವಿಮಾನ ನಿಲ್ದಾಣದಲ್ಲಿ ಈ ವೈಮಾನಿಕ ಹಾರಾಟ ಪ್ರದರ್ಶನ ಸಾಗಿದೆ. ಈ ವೇಳೆ, ಅನೇಕ ಯುದ್ದ ವಿಮಾನ, ಹೆಲಿಕಾಪ್ಟರ್‌ಗಳು ಮತ್ತು ಗ್ಲೋಬ್‌ಮಾಸ್ಟರ್ ವೈಮಾನಿಕ ಪ್ರದರ್ಶನ ನಡೆಸಿದವು.
ಇದನ್ನೂ ಓದಿ: ಸಿಎಂ ಶಿಂಧೆ ನಿವಾಸದಲ್ಲಿ ಅದ್ಧೂರಿ ಗಣೇಶ ಆರತಿ; ಹಲವು ವಿದೇಶಿ ರಾಯಭಾರಿ, ಅಧಿಕಾರಿಗಳು ಭಾಗಿ