ETV Bharat / bharat

ತಮಿಳುನಾಡಿನಲ್ಲಿ ಒಂದೇ ವರ್ಷದಲ್ಲಿ ಆನೆಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳ! - Elephant census - ELEPHANT CENSUS

ಆಂಧ್ರಪ್ರದೇಶ, ಕೇರಳ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಸೇರಿ ಸಂಯೋಜಿತ ಆನೆಗಣತಿ ನಡೆಸಿದ್ದು, ಅದರಲ್ಲಿ ತಮಿಳುನಾಡಿನಲ್ಲಿ ಆನೆಗಳ ಸಂಖ್ಯೆ ಏರಿಕೆ ಕಂಡಿದೆ.

ತಮಿಳುನಾಡಿನಲ್ಲಿ ಆನೆಗಳ ಸಂಖ್ಯೆ
ತಮಿಳುನಾಡಿನಲ್ಲಿ ಆನೆಗಳ ಸಂಖ್ಯೆ (ETV Bharat)
author img

By ETV Bharat Karnataka Team

Published : Aug 3, 2024, 6:24 PM IST

ಚೆನ್ನೈ (ತಮಿಳುನಾಡು): ಪಶ್ಚಿಮಘಟ್ಟ ಪ್ರದೇಶದಲ್ಲಿ ಬರುವ ತಮಿಳುನಾಡಿನಲ್ಲಿ ಆನೆಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಆನೆಗಳ ಸಂಖ್ಯೆ 100 ಹೆಚ್ಚಿದೆ ಎಂದು ತಮಿಳುನಾಡು ಸರ್ಕಾರ ತಿಳಿಸಿದೆ.

ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದ ಅರಣ್ಯ ಸಿಬ್ಬಂದಿ ಮೇ 23, 24 ಮತ್ತು 25 ರಂದು ಮೂರು ದಿನಗಳ ಆನೆಗಣತಿ ನಡೆಸಿದ್ದರು. ಇದರ ಸಂಯೋಜಿತ ವರದಿಯನ್ನು ಶನಿವಾರ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಬಿಡುಗಡೆ ಮಾಡಿದ್ದಾರೆ.

ವರದಿಯ ಪ್ರಕಾರ, 2023ರ ಆನೆಗಣತಿ ವರದಿಯಲ್ಲಿ ತಮಿಳುನಾಡಿನ ಅರಣ್ಯದಲ್ಲಿ 2,971 ಆನೆಗಳಿದ್ದವು. ಒಂದು ವರ್ಷದಲ್ಲಿ ಅಂದರೆ 2024ರ ವೇಳೆಗೆ ಅವು 3,063 ಕ್ಕೆ ಏರಿಕೆಯಾಗಿವೆ. ಅಂದರೆ, ಒಂದೇ ವರ್ಷದಲ್ಲಿ 102 ಆನೆಗಳು ಹೆಚ್ಚಾಗಿವೆ. ರಾಜ್ಯದ ಅರಣ್ಯ ಪ್ರದೇಶ ಆನೆಗಳ ಸಂತತಿಗೆ ಅನುಕೂಲಕರವಾಗಿದೆ ಎಂದು ಮುಖ್ಯಮಂತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಮಿಳುನಾಡಿನ 26 ಅರಣ್ಯ ವಿಭಾಗಗಳ 681 ಬ್ಲಾಕ್‌ಗಳಲ್ಲಿ ಆನೆಗಳ ಗಣತಿ ನಡೆಸಲಾಗಿದೆ. ರಾಜ್ಯದ ಅರಣ್ಯ ಇಲಾಖೆಯ ಪ್ರಕಾರ, ಮೂರು ದಿನಗಳ ಗಣತಿಯಲ್ಲಿ 8,652 ಚದರ್​ ಕಿ.ಮೀ ಅರಣ್ಯ ಭೂಮಿಯನ್ನು ಕಾಲ್ನಡಿಗೆಯಲ್ಲಿ ಕ್ರಮಿಸಲಾಗಿದೆ. ಗಣತಿಯಲ್ಲಿ ಅರಣ್ಯ ವೀಕ್ಷಕರು, ಗಾರ್ಡ್‌ಗಳು, ರೇಂಜರ್‌ಗಳು ಮತ್ತು ವನ್ಯಜೀವಿ ಎನ್‌ಜಿಒಗಳ ಸ್ವಯಂಸೇವಕರು ಸೇರಿ 2,178 ಸಿಬ್ಬಂದಿ ಭಾಗವಹಿಸಿದ್ದರು.

ಎಲ್ಲೆಲ್ಲಿ ಎಷ್ಟು ಆನೆಗಳು?: ಸತ್ಯಮಂಗಲಂ ಅರಣ್ಯ ವಿಭಾಗದಲ್ಲಿ ಅತ್ಯಧಿಕ ಅಂದರೆ, 372 ಆನೆಗಳಿವೆ. ಬಳಿಕ ಕೊಯಮತ್ತೂರು ವಿಭಾಗದಲ್ಲಿ 336 ಆನೆಗಳಿವೆ. ಉಳಿದ ವಿಭಾಗಗಳಲ್ಲಿ ನೂರಕ್ಕೂ ಅಧಿಕ ಆನೆಗಳಿವೆ. ಗಣತಿ ವರದಿಯ ಪ್ರಕಾರ, ಶೇಕಡಾ 40 ರಷ್ಟು ಆನೆಗಳು ವಯಸ್ಕವಾಗಿದ್ದರೆ, 33 ಪ್ರತಿಶತದಷ್ಟು ಅರೆ ವಯಸ್ಕವಾಗಿವೆ. ಶೇಕಡಾ 17ರಷ್ಟು ಗಜಗಳು ಚಿಕ್ಕವಯಸ್ಸಿನವಾಗಿದ್ದರೆ, ಶೇ.10ರಷ್ಟು ಆನೆಗಳು ಇನ್ನೂ ಮರಿಗಳಿವೆ.

2017 ರಲ್ಲಿ ಕರ್ನಾಟಕ, ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ನಾಲ್ಕು ರಾಜ್ಯಗಳ ಸಂಯೋಜಿತ ಆನೆಗಣತಿ ನಡೆಸಲಾಗಿತ್ತು. ಈ ವೇಳೆ ತಮಿಳುನಾಡಿನ ಅರಣ್ಯಗಳಲ್ಲಿ ಆನೆಗಳ ಸಂಖ್ಯೆ 2,761 ಎಂದು ದಾಖಲಿಸಲಾಗಿತ್ತು. ಬಳಿಕ 25 ಅರಣ್ಯ ವಿಭಾಗಗಳ 699 ಬ್ಲಾಕ್‌ಗಳಲ್ಲಿ 2,971 ಕ್ಕೆ ಏರಿಕೆ ಕಂಡಿತ್ತು.

ಇದನ್ನೂ ಓದಿ: ಮರಿಯಾನೆಗೆ ಜನ್ಮ ನೀಡಿದ ವೇದ; ಬನ್ನೇರುಘಟ್ಟ ಉದ್ಯಾನವನದಲ್ಲಿ ಹೆಚ್ಚಿದ ಸಂಭ್ರಮ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.