ನವದೆಹಲಿ: ಸೇವೆಯಲ್ಲಿನ ಕೊರತೆಯಿಂದಾಗಿ ಮೃತಪಟ್ಟ ರೋಗಿಯ ಕುಟುಂಬ ಸದಸ್ಯರಿಗೆ 10 ಲಕ್ಷ ರೂ.ಗಳನ್ನು ಪಾವತಿಸುವಂತೆ ಕರ್ನಾಟಕದ ಮಣಿಪಾಲ್ ಆಸ್ಪತ್ರೆಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
2003ರಲ್ಲಿ ಶ್ವಾಸಕೋಶದ ಶಸ್ತ್ರಚಿಕಿತ್ಸೆಯ ನಂತರ ರೋಗಿ ಜೆ ಡಗ್ಲಾಸ್ ಲೂಯಿಜ್ ಎಂಬುವರು ಧ್ವನಿಯನ್ನು ಕಳೆದುಕೊಂಡಿದ್ದರು. ಖಾಸಗಿ ಕಂಪನಿಯ ಏರಿಯಾ ಸೇಲ್ಸ್ ಮ್ಯಾನೇಜರ್ ಆಗಿದ್ದ ಇವರು, 2003ರಿಂದ ಅದೇ ಹುದ್ದೆಯಲ್ಲಿ ಬಡ್ತಿ ಇಲ್ಲದೆ, 2015ರಲ್ಲಿ ನಿಧನ ಹೊಂದುವವರೆಗೂ ಮುಂದುವರೆದಿದ್ದರು. ಅಲ್ಲದೇ, ತಿಂಗಳಿಗೆ 30,000 ರೂ. ಸಂಬಳದಲ್ಲೇ ಅವರು ಕೆಲಸ ಮಾಡುತ್ತಿದ್ದರು. ಈ ಹಿಂದೆ ವಿಧವೆ ಪತ್ನಿಗೆ ಜಿಲ್ಲಾ ಗ್ರಾಹಕರ ವೇದಿಕೆಯು ಐದು ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿತ್ತು.
ಆದರೆ, ಅರ್ಜಿದಾರರ ಪರ ವಕೀಲರು 18 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕೋರಿದ್ದರು. ಇದೀಗ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರ ಪೀಠವು ಪರಿಹಾರ ಮೊತ್ತವನ್ನು ದ್ವಿಗುಣಗೊಳಿಸಿ ಆದೇಶಿಸಿದೆ.
ಇದನ್ನೂ ಓದಿ: ಚಂಡೀಗಢ ಮೇಯರ್ ಚುನಾವಣೆ ಫಲಿತಾಂಶ ವಿವಾದ: ಆಪ್ ಅಭ್ಯರ್ಥಿಯೇ ವಿಜಯಿ ಎಂದು ಘೋಷಿಸಿದ ಸುಪ್ರೀಂ ಕೋರ್ಟ್