ಶ್ರೀಶೈಲಂ (ಆಂಧ್ರಪ್ರದೇಶ) : ಶ್ರೀಶೈಲಂ ಜಲಾಶಯದಿಂದ ನೀರು ಬಿಡುಗಡೆ ಮುಂದುವರೆದಿದೆ. ಜಲಾಶಯದ ಐದು ಗೇಟ್‌ಗಳನ್ನು 10 ಅಡಿ ಎತ್ತರಿಸಿ ನೀರನ್ನು ಕೆಳಕ್ಕೆ ಬಿಡಲಾಗುತ್ತಿದೆ. ನಾಗಾರ್ಜುನ ಸಾಗರಕ್ಕೆ 1.35 ಲಕ್ಷ ಕ್ಯೂಸೆಕ್ ನೀರು ಬಿಡಲಾಗುತ್ತಿದೆ.
ಶ್ರೀಶೈಲಂ ಜಲಾಶಯದ 5 ಗೇಟ್‌ಗಳಿಂದ ನೀರು ಬಿಡುಗಡೆ : ಮೇಲ್ಭಾಗದ ಪ್ರದೇಶಗಳಲ್ಲಿ ಭಾರಿ ಮಳೆಯಿಂದಾಗಿ ಶ್ರೀಶೈಲಂ ಜಲಾಶಯವು ಭರ್ತಿಯಾಗಿದೆ. ಪ್ರವಾಹ ಹೆಚ್ಚಾಗುತ್ತಿದ್ದಂತೆ ಅಧಿಕಾರಿಗಳು ಐದು ಗೇಟ್‌ಗಳನ್ನು ಎತ್ತಿದ್ದಾರೆ. ಪ್ರತಿ ಗೇಟ್ 10 ಅಡಿ ಎತ್ತರಿಸಿ ನೀರು ಬಿಡಲಾಗುತ್ತಿದೆ.
ನಾಗಾರ್ಜುನ ಸಾಗರಕ್ಕೆ ಸ್ಪಿಲ್ ವೇ ಮೂಲಕ 1.35 ಲಕ್ಷ ನೀರು ಬಿಡಲಾಗುತ್ತಿದೆ. ಮತ್ತೊಂದೆಡೆ, ಜುರಾಳ ಮತ್ತು ಸುಂಕೇಶಲ ಅಣೆಕಟ್ಟಿನಿಂದ ಶ್ರೀಶೈಲಂ ಜಲಾಶಯಕ್ಕೆ 4.27 ಲಕ್ಷ ಕ್ಯೂಸೆಕ್ ಪ್ರವಾಹದ ನೀರು ಬರುತ್ತಿದೆ. ಈ ಸುಂದರ ದೃಶ್ಯವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ.
ತಗ್ಗು ಪ್ರದೇಶದ ಜನರು ಎಚ್ಚೆತ್ತುಕೊಳ್ಳುವಂತೆ ಸೂಚನೆ : ಶ್ರೀಶೈಲ ಜಲಾಶಯದ ಪೂರ್ಣ ಪ್ರಮಾಣದ ನೀರಿನ ಮಟ್ಟ 885 ಅಡಿಗಳಾಗಿದ್ದು, ಪ್ರಸ್ತುತ ನೀರಿನ ಮಟ್ಟ 882.7 ಅಡಿ ತಲುಪಿದೆ. ನೀರಿನ ಸಂಗ್ರಹ ಸಾಮರ್ಥ್ಯ 215.80 ಟಿಎಂಸಿ ಇದ್ದು, ಪ್ರಸ್ತುತ 202.9 ಟಿಎಂಸಿ ನೀರು ಸಂಗ್ರಹವಾಗಿದೆ.
ಒಳಹರಿವು 4.27 ಲಕ್ಷ ಕ್ಯೂಸೆಕ್ ಇದ್ದರೆ, ಹೊರಹರಿವು 2.21 ಲಕ್ಷ ಕ್ಯೂಸೆಕ್ ಇದೆ. ಬಲ ಮತ್ತು ಎಡ ಜಲವಿದ್ಯುತ್ ಕೇಂದ್ರಗಳು ವಿದ್ಯುತ್ ಅನ್ನು ತೀವ್ರವಾಗಿ ಉತ್ಪಾದಿಸುತ್ತಿವೆ. ಈ ಹಿನ್ನೆಲೆ ತಗ್ಗು ಪ್ರದೇಶದ ಜನರು ಎಚ್ಚೆತ್ತುಕೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಇದನ್ನೂ ಓದಿ : ತುಂಬಿದ ಭದ್ರಾ ಅಣೆಕಟ್ಟು; ನಾಲ್ಕು ಕ್ರಸ್ಟ್ ಗೇಟ್ ಮೂಲಕ ನೀರು ಹೊರಕ್ಕೆ - Bhadra dam water released