ETV Bharat / bharat

ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ, ಶ್ರೀನಗರ ಕೆಂಪುವಲಯವಾಗಿ ಘೋಷಣೆ; ಡ್ರೋನ್​ ಕೂಡ ಹಾರಿಸುವಂತಿಲ್ಲ! - srinagar

author img

By ETV Bharat Karnataka Team

Published : Jun 19, 2024, 9:53 AM IST

ಜಮ್ಮು ಕಾಶ್ಮೀರ ಶ್ರೀನಗರದಲ್ಲಿ 10ನೇ ವರ್ಷದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿದ್ದು, ನಗರವನ್ನು ತಾತ್ಕಾಲಿಕ ಕೆಂಪುವಲಯವನ್ನಾಗಿ ಘೋಷಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಶ್ರೀನಗರ ಕೆಂಪುವಲಯವಾಗಿ ಘೋಷಣೆ
ಶ್ರೀನಗರ ಕೆಂಪುವಲಯವಾಗಿ ಘೋಷಣೆ (ETV Bharat)

ಶ್ರೀನಗರ (ಜಮ್ಮು- ಕಾಶ್ಮೀರ): ಭಯೋತ್ಪಾದನೆಯಿಂದಲೇ ಕುಖ್ಯಾತಿಗೆ ಒಳಗಾಗಿರುವ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ 10ನೇ ವರ್ಷದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಯೋಜನೆಯಾಗಿದೆ. ಜೂನ್​ 21 ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದು, ಇಡೀ ಶ್ರೀನಗರವನ್ನು 'ತಾತ್ಕಾಲಿಕ ಕೆಂಪುವಲಯ' ಎಂದು ಘೋಷಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡ ಬಳಿಕದ ಮೊದಲ ಭೇಟಿ ಇದಾಗಿದ್ದು, ಸುರಕ್ಷತೆ ಕ್ರಮದ ಹಿನ್ನೆಲೆ ಶ್ರೀನಗರವನ್ನು 'ನೋಫ್ಲೈಯಿಂಗ್​ ಝೋನ್​' (ಹಾರಾಟ ನಿಷೇಧ ವಲಯ) ಎಂದೂ ಗುರುತಿಸಲಾಗಿದೆ. ಅಂದರೆ, ಅಂದಿನ ಮಟ್ಟಿಗೆ ಡ್ರೋನ್​ ಹಾರಾಟ ಸೇರಿದಂತೆ ಯಾವುದೇ ಉಪಕರಣಗಳನ್ನು ಹಾರಿಸುವಂತಿಲ್ಲ ಎಂದು ಜಮ್ಮು ಕಾಶ್ಮೀರ ಪೊಲೀಸರು ಆದೇಶ ಹೊರಡಿಸಿದ್ದಾರೆ.

ಡ್ರೋನ್​ ಹಾರಿಸುವಂತಿಲ್ಲ: ಸುರಕ್ಷತಾ ದೃಷ್ಟಿಯಿಂದ ಶ್ರೀನಗರದಲ್ಲಿ ಡ್ರೋನ್​ ಹಾರಾಟವನ್ನೂ ನಿಷೇಧಿಸಲಾಗಿದೆ. ಹೀಗಾಗಿ ಸ್ಥಳೀಯರು ನಿಯಮಗಳನ್ನು ಪಾಲಿಸಬೇಕು. ಇಲ್ಲವಾದಲ್ಲಿ ಡ್ರೋನ್​ ನಿಯಮಗಳು 2021 ರ ನಿಬಂಧನೆಯಂತೆ ದಂಡನೆಗೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ (ಜೂನ್​ 20) ಶ್ರೀನಗರಕ್ಕೆ ಆಗಮಿಸುತ್ತಾರೆ. ಶುಕ್ರವಾರ (ಜೂನ್​ 21) ಬೆಳಗ್ಗೆ ಎಸ್​​ಕೆಐಸಿಸಿಯಲ್ಲಿ ಹಮ್ಮಿಕೊಂಡಿರುವ ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ನಗರವನ್ನು 'ತಾತ್ಕಾಲಿಕ ರೆಡ್ ಝೋನ್' ಎಂದು ಘೋಷಿಸಲಾಗಿದೆ. ಈ ನಿಯಮ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಶ್ರೀನಗರ ಪೊಲೀಸರು ಎಕ್ಸ್‌ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ.

ಗಣ್ಯರು ಭಾಗವಹಿಸುವ ನಿರೀಕ್ಷೆ: 10ನೇ ವರ್ಷದ ಅಂತಾರಾಷ್ಟ್ರೀಯ ಯೋಗ ದಿನ ಹಿನ್ನೆಲೆ ನಡೆಯುವ ದೊಡ್ಡ ಕಾರ್ಯಕ್ರಮದ ಸಕಲ ವ್ಯವಸ್ಥೆಗಳನ್ನು ಸಿದ್ಧ ಮಾಡಲಾಗಿದೆ. ಕ್ರೀಡಾಪಟುಗಳು, ಸೆಲೆಬ್ರಿಟಿಗಳು, ನೂರಾರು ಜನರು ಇದರಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಆಯೋಜಕರು ಅಂದಾಜಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಭಾಗವಹಿಸುವಿಕೆಯ ಬಗ್ಗೆ ಜೂನ್​ 18 ರಂದು ಆಯುಷ್​ ಇಲಾಖೆ ಮಾಹಿತಿ ಹಂಚಿಕೊಂಡಿತ್ತು. ಎಸ್​​ಕೆಐಸಿಸಿಯಲ್ಲಿ ಯೋಗ ದಿನ ನಡೆಯಲಿದ್ದು, ಪ್ರಧಾನಿ ಭಾಗವಹಿಸಲಿದ್ದಾರೆ. 'ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ' ಘೋಷವಾಕ್ಯದೊಂದಿಗೆ ಈ ವರ್ಷ ಯೋಗ ದಿನವನ್ನು ಆಚರಿಸಲಾಗುತ್ತಿದೆ.

ಇದಕ್ಕೂ ಮೊದಲು ಪ್ರಧಾನಿ ಮೋದಿ ಅವರು ಪ್ರತಿ ಗ್ರಾಮದ ಮುಖ್ಯಸ್ಥರಿಗೆ ಪತ್ರ ಬರೆದು, ಜನರು ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಲು ಕೋರಿದ್ದರು. ಅದರಂತೆ ಪ್ರತಿ ಜಿಲ್ಲೆ, ತಾಲೂಕಿನಲ್ಲಿ ಯೋಗ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

2014 ರಲ್ಲಿ ಯೋಗವನ್ನು ಅಂತಾರಾಷ್ಟ್ರೀಯ ಆಚರಣೆಯನ್ನಾಗಿ ವಿಶ್ವಸಂಸ್ಥೆ ಅಂಗೀಕರಿಸಿತು, ಇದಾದ ಬಳಿಕ 2015 ರಿಂದ ಪ್ರತಿ ವರ್ಷ ಜೂನ್​ 21 ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸುತ್ತಾ ಬರಲಾಗುತ್ತಿದೆ.

ಇದನ್ನೂ ಓದಿ: ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನ: ಪ್ರಧಾನಿ ಮೋದಿ ಭಾಗಿ - INTERNATIONAL YOGA DAY

ETV Bharat Logo

Copyright © 2024 Ushodaya Enterprises Pvt. Ltd., All Rights Reserved.