ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಹಿಂದಿನ ವರ್ಷಗಳಂತೆಯೇ 2024-25ರ ಸಂಪೂರ್ಣ ಬಜೆಟ್ ಅನ್ನು ಕಾಗದರಹಿತ ರೂಪದಲ್ಲೇ ಮಂಡಿಸುತ್ತಿದ್ದಾರೆ. ಇದಕ್ಕೂ ಮುನ್ನ, ಇಂದು ಸಾಂಪ್ರದಾಯಿಕ 'ಬಹಿ-ಖಾತಾ' ಶೈಲಿಯ ಪೌಚ್‌ನಲ್ಲಿ ಸುತ್ತಿರುವ ಡಿಜಿಟಲ್ ಟ್ಯಾಬ್ಲೆಟ್‌ನೊಂದಿಗೆ ಅವರು ಸಂಸತ್ತಿಗೆ ಆಗಮಿಸಿದರು.
ಬಿಳಿ ರೇಷ್ಮೆ ಸೀರೆ ಧರಿಸಿರುವ ಸಚಿವೆ ನಿರ್ಮಲಾ: ನಿರ್ಮಲಾ ಸೀತಾರಾಮನ್ ಮೆಜೆಂಟಾ ಬಾರ್ಡರ್ ಹೊಂದಿರುವ ಬಿಳಿ ರೇಷ್ಮೆ ಸೀರೆ ಧರಿಸಿದ್ದಾರೆ. ರಾಷ್ಟ್ರಪತಿ ಭೇಟಿಗೂ ಮುನ್ನ ತಮ್ಮ ಅಧಿಕಾರಿಗಳ ತಂಡದೊಂದಿಗೆ ತಮ್ಮ ಕಚೇರಿಯ ಹೊರಗೆ ಡಿಜಿಟಲ್ ಟ್ಯಾಬ್ಲೆಟ್ ಹಿಡಿದುಕೊಂಡು ಫೋಟೋಗೆ ಪೋಸ್ ಕೊಟ್ಟರು. ನಂತರ, ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಸಂಸತ್‌ಗೆ ಆಗಮಿಸಿದರು.
ನಿರ್ಮಲಾ ಸೀತಾರಾಮನ್ ಭಾರತದ ಮೊದಲ ಮಹಿಳಾ ಹಣಕಾಸು ಸಚಿವೆ. ಜುಲೈ 2019ರಲ್ಲಿ ಬಜೆಟ್ ಪೇಪರ್‌ಗಳನ್ನು ಸಾಗಿಸಲು ಬ್ರೀಫ್‌ಕೇಸ್‌ನ ಪರಂಪರೆಯನ್ನು ತ್ಯಜಿಸಿದ್ದರು. ಇದರ ಬದಲು ಸಾಂಪ್ರದಾಯಿಕ 'ಬಹಿ-ಖಾತಾ' ಶೈಲಿಯ ಪೌಚ್‌ನಲ್ಲಿ ಸುತ್ತಿರುವ ಡಿಜಿಟಲ್ ಟ್ಯಾಬ್ಲೆಟ್ ಆಯ್ಕೆ ಮಾಡಿಕೊಂಡರು. ಈ ಸಂಪ್ರದಾಯ ಪ್ರಸ್ತಕ ಸಾಲಿನ ಕೇಂದ್ರ ಬಜೆಟ್ಗೂ ಮುಂದುವರಿದಿದೆ.
ಈವರೆಗೆ ಮೋದಿ ಸರ್ಕಾರ 13 ಬಾರಿ ಬಜೆಟ್ ಮಂಡಿಸಿದೆ. (2019 ಮತ್ತು 2024ರಲ್ಲಿ ಸಾರ್ವತ್ರಿಕ ಚುನಾವಣೆಗಳಿಗೆ ಮುಂಚಿತವಾಗಿ ಮಂಡಿಸಲಾದ ಎರಡು ಮಧ್ಯಂತರ ಬಜೆಟ್‌ಗಳು ಇದರಲ್ಲಿ ಸೇರಿವೆ).
ಇದನ್ನೂ ಓದಿ: ಕೇಂದ್ರ ಬಜೆಟ್‌ನತ್ತ ಇಡೀ ದೇಶದ ಚಿತ್ತ: ಜನರ ನಿರೀಕ್ಷೆಗಳೇನು? ಬಜೆಟ್ ಭಾಷಣ ಹೀಗೆ ವೀಕ್ಷಿಸಿ - Union Budget 2024