ETV Bharat / bharat

ದೀಪಾವಳಿ ದಿನದಂದು ಬೆಳ್ಳಿ ನಾಣ್ಯಗಳ ವಿತರಣೆ : ಭಾಗ್ಯಲಕ್ಷ್ಮಿ ದೇವಸ್ಥಾನಕ್ಕೆ ಭಕ್ತರ ದಂಡು

ಹೈದರಾಬಾದ್​​ನ ಚಾರ್ಮಿನಾರ್ ಬಳಿಯ ಭಾಗ್ಯಲಕ್ಷ್ಮಿ ದೇವಸ್ಥಾನದಲ್ಲಿ ಅದ್ಧೂರಿ ದೀಪಾವಳಿ - ದೇವಿಗೆ ವಿಶೇಷ ಪೂಜೆ ಸಲ್ಲಿಕೆ - ದೇವಸ್ಥಾನದ ಟ್ರಸ್ಟಿ ನೇತೃತ್ವದಲ್ಲಿ ಭಕ್ತರಿಗೆ ಬೆಳ್ಳಿ ನಾಣ್ಯಗಳ ವಿತರಣೆ

silver-coins-distribution-to-devotees-in-charminar-bhagyalakshmi-temple-at-patabasti
ದೀಪಾವಳಿ ದಿನದಂದು ಬೆಳ್ಳಿ ನಾಣ್ಯಗಳ ವಿತರಣೆ : ಭಾಗ್ಯಲಕ್ಷ್ಮಿ ದೇವಸ್ಥಾನಕ್ಕೆ ಭಕ್ತರ ದಂಡು (ETV Bharat)
author img

By ETV Bharat Karnataka Team

Published : Nov 1, 2024, 7:49 AM IST

ಹೈದರಾಬಾದ್, ತೆಲಂಗಾಣ: Silver Coins Distribution in Bhagyalakshmi Temple ರಾಜ್ಯಾದ್ಯಂತ ದೀಪಾವಳಿ ಆಚರಣೆ ಅದ್ದೂರಿಯಾಗಿ ನಡೆಯುತ್ತಿದೆ. ನಿನ್ನೆಯಿಂದ ಆರಂಭವಾಗಿರುವ ಹಬ್ಬ ಇನ್ನೂ ಎರಡ್ಮೂರು ದಿನಗಳವರೆಗೆ ಆಚರಣೆ ಮಾಡಲಾಗುತ್ತದೆ. ಹಬ್ಬದ ನಿಮಿತ್ತ ಎಲ್ಲರ ಮನೆಗಳನ್ನು ಹೂವಿನ ಮಾಲೆಗಳು ಮತ್ತು ಮಾವಿನ ಕೊಂಬೆಗಳಿಂದ ಸುಂದರವಾಗಿ ಅಲಂಕರಿಸಲಾಗಿದೆ. ರಾತ್ರಿ ದೀಪಾಲಂಕಾರ, ಮಕ್ಕಳ ಕುಣಿತ, ಹೀಗೆ ಇಡೀ ಊರಿಗೆ ಊರೇ ಸಡಗರದಿಂದ ಹಬ್ಬ ಆಚರಿಸಿ ಸಂಭ್ರಮ ಪಡುತ್ತಿದೆ. ಅಂಗಡಿಗಳು ದೀಪಗಳ ಬೆಳಕಿನಲ್ಲಿ ಮಿನುಗುತ್ತಿವೆ. ಜನರು ಲಕ್ಷ್ಮಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಲಾಗುತ್ತಿದೆ.

ದೊಡ್ಡಪೇಟೆಯಲ್ಲಿ ಅದ್ಧೂರಿ ದೀಪಾವಳಿ ಆಚರಣೆ: ಹೈದರಾಬಾದ್​ ಸೇರಿದಂತೆ ರಾಜ್ಯದ ಹಲವೆಡೆ ಯುವಕರು, ಹಿರಿಯರು ಎನ್ನದೇ ಎಲ್ಲರೂ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಯುವಕರು ರಸ್ತೆಗಿಳಿದು ಪಟಾಕಿಗಳನ್ನು ಹೊಡೆದು ಸಂಭ್ರಮದಿಂದ ಹಬ್ಬವನ್ನು ಸವಿದರು. ದೀಪಾವಳಿ ಹಿನ್ನೆಲೆ ನಗರವು ಪಟಾಕಿಗಳ ಸದ್ದಿನೊಂದಿಗೆ ಪುಳಕಿತಗೊಂಡಿತ್ತು, ನಾನಾ ಸೆಲೆಬ್ರಿಟಿಗಳೂ ದೀಪಾವಳಿ ಹಬ್ಬವನ್ನು ಆಚರಿಸಿ ಖುಷಿ ಪಟ್ಟರು.

Silver Coins Distribution
ಚಾರ್​ಮೀನಾರದಲ್ಲಿರುವ ಭಾಗ್ಯಲಕ್ಷ್ಮಿ ಅಮ್ಮ( ETV Bharat)

ಭಕ್ತರಿಂದ ಕಿಕ್ಕಿರಿದು ತುಂಬಿದ ದೇವಾಲಯಗಳು: ದೀಪಾವಳಿ ಸಂದರ್ಭದಲ್ಲಿ ಎಲ್ಲ ದೇವಾಲಯಗಳು ಆಧ್ಯಾತ್ಮಿಕ ವೈಭವ ಪಡೆದುಕೊಳ್ಳುತ್ತವೆ. ಪ್ರಸಿದ್ಧ ದೇವಾಲಯಗಳು ಭಕ್ತರಿಂದ ತುಂಬಿ ತುಳುಕುತ್ತಿವೆ. ಸಿದ್ದಿಪೇಟೆ ಜಿಲ್ಲೆಯ ದುಬ್ಬಾಕದಲ್ಲಿ ವ್ಯಾಪಾರಿಗಳು ವೇದ ಮಂತ್ರ ಪಠಣದ ನಡುವೆ ಲಕ್ಷ್ಮಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ದೀಪಾವಳಿ ನಿಮಿತ್ತ ಯಾದಾದ್ರಿ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ಅರ್ಚಕರು ಧನಲಕ್ಷ್ಮಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಕರೀಂನಗರದ ಎಲ್ಲ ಪ್ರಸಿದ್ಧ ದೇವಾಲಯಗಳು ಭಕ್ತರಿಂದ ತುಂಬಿ ತುಳುಕುತ್ತಿವೆ. ಮಹಾಶಕ್ತಿ ದೇವಸ್ಥಾನದ ಮೂರು ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಭಾಗ್ಯಲಕ್ಷ್ಮಿ ದೇವಸ್ಥಾನದಲ್ಲಿ ಬೆಳ್ಳಿ ನಾಣ್ಯಗಳ ವಿತರಣೆ: ವಿಶೇಷವಾಗಿ ಹೈದರಾಬಾದ್‌ನ ಹಳೆಯ ಬಸ್ತಿ ಪ್ರದೇಶದಲ್ಲಿರುವ ಚಾರ್ಮಿನಾರ್ ಭಾಗ್ಯಲಕ್ಷ್ಮಿ ಅಮ್ಮನ ದೇವಸ್ಥಾನದಲ್ಲಿ ದೀಪಾವಳಿ ಆಚರಣೆಯನ್ನು ವೈಭವದಿಂದ ನೆರವೇರಿಸಲಾಯಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು. ದೀಪಾವಳಿ ನಿಮಿತ್ತ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ನಂತರ ದೇವಸ್ಥಾನದ ಧರ್ಮದರ್ಶಿ ನೇತೃತ್ವದಲ್ಲಿ ಭಕ್ತರಿಗೆ ಬೆಳ್ಳಿ ನಾಣ್ಯಗಳನ್ನು ವಿತರಿಸಲಾಯಿತು. ಭಾಗ್ಯಲಕ್ಷ್ಮಿ ದೇವಸ್ಥಾನದಲ್ಲಿ ದೀಪಾವಳಿಯ ದಿನದಂದು ವರ್ಷವಿಡೀ ಭಕ್ತರು ದೇವಿಗೆ ಅರ್ಪಿಸುವ ಬೆಳ್ಳಿಯ ಕಾಣಿಕೆಯಿಂದ ಮಾಡಿದ ನಾಣ್ಯಗಳನ್ನು ನೀಡುವುದು ವಾಡಿಕೆ. ಬೆಳ್ಳಿ ನಾಣ್ಯಗಳಿಗಾಗಿ ಭಕ್ತರ ದಂಡು ಹರಿದು ಬಂತು. ಇದರಿಂದಾಗಿ ಇಡೀ ಪ್ರದೇಶವೇ ಕಿಕ್ಕಿರಿದು ತುಂಬಿತ್ತು.

ಇದನ್ನು ಓದಿ:IRCTCಯಿಂದ 'ಮಧ್ಯ ಪ್ರದೇಶ ಮಹಾದರ್ಶನ್ ಟೂರ್': ಜ್ಯೋತಿರ್ಲಿಂಗಗಳ ದರ್ಶನಕ್ಕೆ ಅಪೂರ್ವ ಅವಕಾಶ; ಪ್ಯಾಕೇಜ್‌ನ ಕಂಪ್ಲೀಟ್ ಮಾಹಿತಿ

500 ವರ್ಷಗಳ ನಂತರ ರಾಮಭಕ್ತರ ಅಸಂಖ್ಯಾತ ತ್ಯಾಗ, ತಪಸ್ಸಿನೊಂದಿಗೆ ಬಂದಿರುವ ಮಂಗಳಕರ ಕ್ಷಣ: ಪಿಎಂ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.