ETV Bharat / bharat

ಕೋರ್ಟ್‌ ಹಾಲ್‌ ಒಳಗೆ ಅಳಿಯನನ್ನೇ ಗುಂಡಿಕ್ಕಿ ಕೊಂದ ಮಾವ! - AIG father in law shot son in law - AIG FATHER IN LAW SHOT SON IN LAW

ಕೌಟುಂಬಿಕ ಕಲಹದ ಹಿನ್ನೆಲೆ ವ್ಯಕ್ತಿಯೊಬ್ಬರು ನ್ಯಾಯಾಲಯದ ಹಾಲ್​ನಲ್ಲಿಯೇ ತನ್ನ ಅಳಿಯನಿಗೆ ಗುಂಡಿಕ್ಕಿ ಕೊಲೆ ಮಾಡಿದ್ದಾರೆ.

Shot inside Chandigarh court complex, IRS officer killed
ಸಾಂದರ್ಭಿಕ ಚಿತ್ರ (File)
author img

By ETV Bharat Karnataka Team

Published : Aug 3, 2024, 8:31 PM IST

ಚಂಡೀಗಢ: ಕೌಟುಂಬಿಕ ಕಲಹದ ಹಿನ್ನೆಲೆ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಕೋರ್ಟ್‌ ಹಾಲ್‌ ಒಳಗಡೆಯೇ ತನ್ನ ಅಳಿಯನಿಗೆ ಗುಂಡಿಕ್ಕಿ ಕೊಲೆಗೈದಿರುವ ಘಟನೆ ಇಲ್ಲಿನ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ಹರ್‌ಪ್ರೀತ್ ಸಿಂಗ್‌ ಕೊಲೆಗೀಡಾದ ವ್ಯಕ್ತಿ. ಮಾಲ್ವಿಂದರ್‌ ಸಿಂಗ್‌ ಸಿಧು ಕೊಲೆ ಮಾಡಿದ ಆರೋಪಿ ಮಾವ.

ಎರಡೂ ಕುಟುಂಬ ಸದಸ್ಯರು ಚಂಡೀಗಢ ಕೌಟುಂಬಿಕ ನ್ಯಾಯಾಲಯಕ್ಕೆ ಕಲಹದ ವಿಚಾರವಾಗಿ ಹಾಜರಾಗಿದ್ದರು. ಫ್ಯಾಮಿಲಿ ಕೋರ್ಟ್​ನಲ್ಲಿ ಸಂಧಾನ ಮಾತುಕತೆ ನಡೆಯುತ್ತಿದ್ದ ಸಂದರ್ಭದಲ್ಲಿ ಅಳಿಯನ ಎದೆಗೆ ಮಾವ ಸಿಧು ಗುಂಡು ಹಾರಿಸಿದ್ದಾರೆ. ಇದರಿಂದ ರಕ್ತದ ಮಡುವಿನಲ್ಲಿ ಬಿದ್ದಿದ್ದ ಹರ್‌ಪ್ರೀತ್ ಸಿಂಗ್​ನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆಯೇ ಮೃತಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ.

Shot inside Chandigarh court complex, IRS officer killed
ಕೋರ್ಟ್‌ ಹಾಲ್‌ (ETV Bharat)

ನ್ಯಾಯಾಲಯದಲ್ಲಿ ಗುಂಡಿನ ಸದ್ದು ಕೇಳುತ್ತಿದ್ದಂತೆ ಅಲ್ಲಿದ್ದವರೆಲ್ಲ ಭಯದಲ್ಲಿ ಓಡಾಡಿದರು. ಕೆಲವು ನಿಮಿಷದ ಬಳಿಕ ವ್ಯಕ್ತಿಯ ಕೃತ್ಯವೆಂದು ಗೊತ್ತಾಗುತ್ತಿದ್ದಂತೆ ಸ್ಥಳೀಯರೇ ಸೇರಿಕೊಂಡು ಆರೋಪಿ ಸಿಧುನನ್ನು ಹಿಡಿದು ಕೊಠಡಿಯಲ್ಲಿ ಕೂಡಿ ಹಾಕಿದರು. ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬಂದ ಪೊಲೀಸರು, ಸಿಧು ಅವರನ್ನು ಬಂಧಿಸಿ ಬಂದೂಕನ್ನು ವಶಪಡಿಸಿಕೊಂಡರು.

ನಾಲ್ಕು ಸುತ್ತು ಗುಂಡು ಹಾರಿಸಲಾಗಿದ್ದು, ಎರಡು ಗುಂಡುಗಳು ಹರ್‌ಪ್ರೀತ್‌ನ ಹೊಟ್ಟೆ ಹೊಕ್ಕರೆ, ಮತ್ತೆರಡು ಗೋಡೆಗೆ ತಾಗಿವೆ. ಗುಂಡು ಹಾರಿಸಿದಾಗ ಹರ್‌ಪ್ರೀತ್ ಮತ್ತು ಅವರ ಪೋಷಕರು ಅಲ್ಲಿದ್ದರು. ಗುಂಡಿನ ದಾಳಿಯಿಂದ ಹರ್‌ಪ್ರೀತ್ ನೆಲದ ಮೇಲೆ ಕುಸಿದು ಬಿದ್ದಿದ್ದು, ಕೋರ್ಟ್‌ ರೂಂನಲ್ಲಿದ್ದ ಕುಟುಂಬ ಸದಸ್ಯರು ಸಹಾಯಕ್ಕಾಗಿ ಮೊರೆ ಇಡುತ್ತಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ತಕ್ಷಣ ಆಸ್ಪತ್ರೆಗೆ ಹರ್‌ಪ್ರೀತ್​ನನ್ನು ಕೊಂಡೊಯ್ಯಲಾಯಿತಾದರೂ ದಾರಿ ನಡುವೆ ಕೊನೆಯುಸಿರೆಳೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮೃತ ಹರ್‌ ಪ್ರೀತ್‌ ಸಿಂಗ್‌ ನೀರಾವರಿ ಇಲಾಖೆಯಲ್ಲಿ ಐಆರ್​ಎಸ್​ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಾಲ್ವಿಂದರ್‌ ಸಿಂಗ್‌ ಪಂಜಾಬ್ ಪೊಲೀಸ್‌ ಇಲಾಖೆಯ ಎಐಜಿ ಆಗಿ ನಿವೃತ್ತಿ ಹೊಂದಿದ್ದರು.

ಇದನ್ನೂ ಓದಿ: ಕೇವಲ 20 ಸಾವಿರ ರೂ. ಸಾಲ ತೀರಿಸದ್ದಕ್ಕೆ ಮಹಿಳೆ ಹತ್ಯೆ - Murder case in Hyderabad

ETV Bharat Logo

Copyright © 2024 Ushodaya Enterprises Pvt. Ltd., All Rights Reserved.