ETV Bharat / bharat

ಭಾರೀ ವರ್ಷಧಾರೆ: ಗೋಡೆ ಕುಸಿದು 7 ಮಂದಿ ಸಾವು, ಇಬ್ಬರ ರಕ್ಷಣೆ - rain incident - RAIN INCIDENT

ಮಧ್ಯಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದೆ. ದುರಂತವೊಂದರಲ್ಲಿ ಗೋಡೆ ಕುಸಿದು 7 ಮಂದಿ ಸಾವಿಗೀಡಾಗಿದ್ದಾರೆ.

ಮಧ್ಯಪ್ರದೇಶದಲ್ಲಿ ಭಾರೀ ವರ್ಷಧಾರೆ
ಮಧ್ಯಪ್ರದೇಶದಲ್ಲಿ ಭಾರೀ ವರ್ಷಧಾರೆ (ETV Bharat)
author img

By PTI

Published : Sep 12, 2024, 10:30 PM IST

ದಾತಿಯಾ (ಮಧ್ಯಪ್ರದೇಶ): ಮಧ್ಯಪ್ರದೇಶದ ದಾತಿಯಾ ಪಟ್ಟಣದಲ್ಲಿ ಭಾರೀ ಮಳೆಗೆ ದುರಂತ ಸಂಭವಿಸಿದೆ. ಮನೆಯ ಗೋಡೆ ಕುಸಿದು ಬಿದ್ದು 7 ಮಂದಿ ಸಾವಿಗೀಡಾಗಿದ್ದಾರೆ. ಇಲ್ಲಿನ ಖಾಲ್ಕಾಪುರ ಪ್ರದೇಶದಲ್ಲಿ ಮುಂಜಾನೆ 4 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ.

ವರ್ಷಧಾರೆಯಿಂದಾಗಿ ತೇವವಾಗಿದ್ದ ಗೋಡೆ ಮನೆಯ ಮೇಲೆ ಬಿದ್ದಿದೆ. ಇದರಿಂದ ಮನೆಯಲ್ಲಿದ್ದ ಒಂಬತ್ತು ಮಂದಿ ಅವಶೇಷಗಳಡಿ ಸಿಲುಕಿದ್ದರು. ಮಾಹಿತಿ ಪಡೆದ ರಕ್ಷಣಾ ತಂಡಗಳು ಸ್ಥಳಕ್ಕೆ ಆಗಮಿಸಿ ಗೋಡೆ ತೆರವು ಕಾರ್ಯ ನಡೆಸಿ ಇಬ್ಬರನ್ನು ರಕ್ಷಿಸಲಾಗಿದೆ. ದುರಾದೃಷ್ಟವಶಾತ್​ 7 ಮಂದಿ ಮೃತಪಟ್ಟಿದ್ದಾರೆ.

ಘಟನೆಯ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್, ಸಂತ್ರಸ್ತರ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಇದನ್ನೂ ಓದಿ: ಹಳೆಯ ಮನೆ ಕೆಡವುತ್ತಿದ್ದಾಗ ದುರಂತ: ಮಂಗಳೂರಲ್ಲಿ ಲಿಂಟಲ್ ಸಹಿತ ಗೋಡೆ ಕುಸಿದು ಇಬ್ಬರು ಸಾವು - Old House Wall Collapse

ETV Bharat Logo

Copyright © 2025 Ushodaya Enterprises Pvt. Ltd., All Rights Reserved.