ETV Bharat / bharat

ಶ್ರಾವಣ ಸೋಮವಾರ: ಶಿವನ ಪೂಜೆಗೆ ತೆರಳುತ್ತಿದ್ದ ಭಕ್ತರ ಮೇಲೆ ಹರಿದ ವಾಹನ, 9 ಯಾತ್ರಿಕರು ಸಾವು - ROAD ACCIDENT

ಶ್ರಾವಣ ಸೋಮವಾರ ಶಿವಪೂಜೆ ಮಾಡುಲು ತೆರಳುತ್ತಿದ್ದ ವೇಳೆ ಪ್ರತ್ಯೇಕ ರಸ್ತೆ ಅಪಘಾತಗಳು ಸಂಭವಿಸಿದ್ದು, 9 ಭಕ್ತರು ಸಾವನ್ನಪ್ಪಿದ್ದು ಮತ್ತು 14ಕ್ಕೂ ಹೆಚ್ಚು ಯಾತ್ರಿಕರು ಗಾಯಗೊಂಡಿದ್ದಾರೆ. ಪಶ್ಚಿಮಬಂಗಾಳದ ಸಿಲಿಗುರಿ ಮತ್ತು ಬಂಕುರಾ ಜಿಲ್ಲೆಗಳಲ್ಲಿ ಈ ಅಪಘಾತಗಳು ಸಂಭವಿಸಿವೆ.

DEVOTEES DIE IN A ROAD ACCIDENT  DEVOTEES MET WITH ACCIDENT  SEPARATE ROAD ACCIDENT
ಶಿವನ ಪೂಜೆಗೆ ತೆರಳುತ್ತಿದ್ದ ಭಕ್ತರ ಮೇಲೆ ಹರಿದ ವಾಹನ (ETV Bharat)
author img

By ETV Bharat Karnataka Team

Published : Aug 12, 2024, 1:20 PM IST

ಸಿಲಿಗುರಿ/ಬಂಕುರಾ : ಶ್ರಾವಣ ಸೋಮವಾರದಂದು ಭಕ್ತರು ಪಾದಯಾತ್ರೆ ಮೂಲಕ ಶಿವನ ಪೂಜೆಗೆ ತೆರಳುತ್ತಿದ್ದ ವೇಳೆ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ 9 ಜನ ಸಾವನ್ನಪ್ಪಿದ್ದು, 14ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆಗಳು ಪಶ್ಚಿಮ ಬಂಗಾಳದ ಸಿಲಿಗುರಿ ಮತ್ತು ಬಂಕುರಾ ಜಿಲ್ಲೆಗಳಲ್ಲಿ ಸಂಭವಿಸಿವೆ.

ಸಿಲಿಗುರಿಯಲ್ಲಿ ಭೀಕರ ರಸ್ತೆ ಅಪಘಾತ: ಇಂದು ಶ್ರಾವಣ ಸೋಮವಾರವಾದ ಹಿನ್ನೆಲೆ ಭಕ್ತರು ಪಾದಯಾತ್ರೆ ಮೂಲಕ ಶಿವನ ದೇವಾಲಯಕ್ಕೆ ತೆರಳುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿದ ಕಾರೊಂದು ಭಕ್ತರ ಮೇಲೆ ಹರಿದಿದ್ದು, ಸ್ಥಳದಲ್ಲೇ ಐವರು ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮತ್ತಿಬ್ಬರು ಭಕ್ತರು ಸಾವನ್ನಪ್ಪಿದ್ದು, ಇನ್ನಿಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಈ ಅಪಘಾತ ರಾಷ್ಟ್ರೀಯ ಹೆದ್ದಾರಿ 31 ರಲ್ಲಿ ಬಾಗ್ಡೋಗ್ರಾದ ಮುನಿ ಟೀ ಎಸ್ಟೇಟ್ ಬಳಿಯ ಹೌಡಿಜೋದಲ್ಲಿ ಸೋಮವಾರ ಮುಂಜಾನೆ ಸಂಭವಿಸಿದೆ.

ಪೊಲೀಸ್ ಮೂಲಗಳ ಪ್ರಕಾರ, ಮೃತರು ನಾಗರಿಕ ಸ್ವಯಂಸೇವಕ ಪ್ರಹ್ಲಾದ್ ರಾಯ್ (28), ಬಾಗ್ಡೋಗ್ರಾದ ತರಬಂಧ ನಿವಾಸಿ ಗೋಬಿಂದ್ ಸಿಂಗ್ (22), ಗೋಕುಲ್ಜೋಟ್ ನಿವಾಸಿಗಳಾದ ಅಮಲೇಶ್ ಚೌಧರಿ (20), ಕನಕ್ ಬರ್ಮನ್ (22), ಪ್ರಣಬ್ ರಾಯ್ (28) ಮತ್ತು ಪದಕಾಂತ ರಾಯ್ ಎಂದು ಗುರುತಿಸಲಾಗಿದೆ. ಈ ಅಪಘಾತದಲ್ಲಿ ಸಿಕ್ಕಿಂ ನಿವಾಸಿಯೂ ಸಾವನ್ನಪ್ಪಿದ್ದು, ಅವರ ಹೆಸರು ಮತ್ತು ಗುರುತು ಇನ್ನೂ ತಿಳಿದುಬಂದಿಲ್ಲ.

ಭಕ್ತರು ಜಂಗ್ಲಿ ಬಾಬಾ ದೇವಸ್ಥಾನದಲ್ಲಿ ಯಾತ್ರಿಕರು ಶಿವನ ತಲೆಯ ಮೇಲೆ ನೀರು ಸುರಿಯಲು ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಗಾಯಾಳುಗಳನ್ನು ರಕ್ಷಿಸಿ ಉತ್ತರ ಬಂಗಾಳ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಇಬ್ಬರು ಸಾವನ್ನಪ್ಪಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ತುಂಬಾ ದುರಂತ ಘಟನೆ. ಏಳು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅವರಲ್ಲಿ ಒಬ್ಬರನ್ನು ಹೊರತುಪಡಿಸಿ ಎಲ್ಲರೂ ಉಪ ವಿಭಾಗದ ನಿವಾಸಿಗಳು. ಸಿಕ್ಕೀಂ ಸಂಖ್ಯೆಯ ವಾಹನ ಅವರಿಗೆ ಡಿಕ್ಕಿ ಹೊಡೆದಿದೆ. ನಾವು ಸಂತ್ರಸ್ತರ ಕುಟುಂಬಗಳೊಂದಿಗೆ ಇದ್ದೇವೆ ಎಂದು ಡಾರ್ಜಿಲಿಂಗ್ ಸಂಸದ ರಾಜು ಬಿಸ್ತಾ ವಿಷಾದ ವ್ಯಕ್ತಪಡಿಸಿದ್ದಾರೆ.

ಭಕ್ತರ ಮೇಲೆ ಹರಿದ ಲಾರಿ: ಬಂಕುರಾದ ಚಟ್ನಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು, 12 ಜನ ಗಾಯಗೊಂಡಿದ್ದಾರೆ. ಸ್ಥಳೀಯ ಮೂಲಗಳ ಪ್ರಕಾರ, ಶ್ರಾವಣ ಸೋಮವಾರ ಶಿವನ ಪೂಜೆಗಾಗಿ ಭಕ್ತರು ಶುಶುನಿಯಾದಿಂದ ಕಾಲ್ನಡಿಗೆಯ ಮೂಲಕ ಹಟಗ್ರಾಮ್‌ಗೆ ಮರಳುತ್ತಿದ್ದರು. ಅವರೆಲ್ಲರೂ ಸ್ಥಳೀಯ ಶಿವ ದೇವಾಲಯದಲ್ಲಿ ಬಾಬಾ ಶಿವನ ತಲೆಯ ಮೇಲೆ ನೀರನ್ನು ಸುರಿಯಬೇಕಿತ್ತು. ಹೀಗಾಗಿ ಹಲವಾರು ಭಕ್ತರು ಚಟ್ನಾ ಪೊಲೀಸ್ ಠಾಣೆಗೆ ಸೇರಿದ ಶುಶುನಿಯಾ ಬೆಟ್ಟಗಳಿಂದ ನೀರು ತೆಗೆದುಕೊಂಡು ಗ್ರಾಮಕ್ಕೆ ಹಿಂತಿರುಗುತ್ತಿದ್ದರು. ಈ ವೇಳೆ ಚಟ್ನಾ ಪೊಲೀಸ್ ಠಾಣೆಯ ನೀರಿನ ಟ್ಯಾಂಕ್ ಬಳಿ ರಸ್ತೆಬದಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.

ಭಕ್ತರು ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಅಜಾಗರೂಕತೆಯಿಂದ ಬಂದ ಲಾರಿ ಅಭಿಮಾನಿಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, 12 ಭಕ್ತರು ಗಾಯಗೊಂಡಿದ್ದರು. ಕೂಡಲೇ ಅವರನ್ನು ರಕ್ಷಿಸಿ ಚಟ್ನಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬಳಿಕ ಕೆಲ ಗಾಯಾಗಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಬೇರೆ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಮೃತರನ್ನು ತನುಮೋಯ್ ದತ್ತಾ (30) ಮತ್ತು ವಿಶಾಲ್ ದತ್ತಾ (21) ಎಂದು ಪೊಲೀಸರು ಗುರುತಿಸಿದ್ದಾರೆ. ಮೃತ ಇಬ್ಬರು ಯುವಕರು ಬಂಕುರಾದ ಇಂದ್‌ಪುರ ಠಾಣಾ ಪ್ರದೇಶದ ನಿವಾಸಿಗಳು ಎಂದು ಹೇಳಲಾಗಿದೆ. ಈ ಘಟನೆಯ ನಂತರ ಅವರ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ.

ಓದಿ: ಕಾರು -​​ ಲಾರಿ ಅಪಘಾತ: ಐವರು ಎಂಜಿನಿಯರಿಂಗ್​ ವಿದ್ಯಾರ್ಥಿಗಳು ಸಾವು - Five Students Killed

ETV Bharat Logo

Copyright © 2024 Ushodaya Enterprises Pvt. Ltd., All Rights Reserved.