ETV Bharat / bharat

ಕಮಲ್​ನಾಥ್​ ಬಿಜೆಪಿ ಸೇರ್ಪಡೆಗೆ ಪುಷ್ಟಿ: ಕಮಲ ಪಕ್ಷ ಸೇರಿದ ಮಾಜಿ ಸಿಎಂ ಕ್ಷೇತ್ರದ ಕಾಂಗ್ರೆಸ್ಸಿಗರು - ಮಧ್ಯಪ್ರದೇಶ ರಾಜಕೀಯ

ಕಾಂಗ್ರೆಸ್​ನ ಹಿರಿಯ ನಾಯಕ ಕಮಲ್​ನಾಥ್​ ಅವರು ಬಿಜೆಪಿ ಸೇರಲಿದ್ದಾರೆ ಎಂಬ ಊಹಾಪೋಹಕ್ಕೆ ಪುಷ್ಟಿ ನೀಡುವಂತ ವಿದ್ಯಮಾನ ನಡೆದಿದೆ. ಅವರ ಹಿಡಿತದಲ್ಲಿರುವ ಕ್ಷೇತ್ರದ ಕಾಂಗ್ರೆಸ್​ ಮುಖಂಡರು ಕಮಲ ಪಕ್ಷ ಸೇರಿದ್ದಾರೆ.

ಕಮಲ್​ನಾಥ್​ ಬಿಜೆಪಿ ಸೇರ್ಪಡೆ
ಕಮಲ್​ನಾಥ್​ ಬಿಜೆಪಿ ಸೇರ್ಪಡೆ
author img

By ETV Bharat Karnataka Team

Published : Feb 22, 2024, 8:28 AM IST

ಛಿಂದ್ವಾರಾ (ಮಧ್ಯಪ್ರದೇಶ) : ಕಾಂಗ್ರೆಸ್​ ಹಿರಿಯ ನಾಯಕ, ಮಾಜಿ ಸಿಎಂ ಕಮಲ್​ನಾಥ್​ ಅವರು ಬಿಜೆಪಿ ಸೇರಲಿದ್ದಾರೆ ಎಂಬ ಊಹಾಪೋಹ ಮತ್ತೆ ಜೋರಾಗಿದೆ. ಅವರ ಬಿಗಿ ಹಿಡಿತದಲ್ಲಿರುವ ಛಿಂದ್ವಾರಾ ಕ್ಷೇತ್ರದ ಕಾಂಗ್ರೆಸ್​ ಮುಖಂಡರು, ಕಾರ್ಯಕರ್ತರು ಬುಧವಾರ ಬಿಜೆಪಿ ಸೇರಿದ್ದಾರೆ. ಇದು ಮಾಜಿ ಸಿಎಂ ಆಗಮನಕ್ಕೆ ಹಾಕಿದ ಶ್ರೀಕಾರ ಎಂದು ವಿಶ್ಲೇಷಿಸಲಾಗಿದೆ.

ಕಾಂಗ್ರೆಸ್ ಹಿರಿಯ ನಾಯಕ ಕಮಲ್ ನಾಥ್ ಅವರ ಮುಂದಿನ ರಾಜಕೀಯ ನಡೆಯ ಬಗ್ಗೆ ಸಸ್ಪೆನ್ಸ್ ಮುಂದುವರಿದಿರುವ ನಡುವೆ, ಅವರ ಬಿಗಿ ಹಿಡಿತದಲ್ಲಿರುವ ಮತ್ತು ಪಕ್ಷದ ಭದ್ರಕೋಟೆಯಾದ ಛಿಂದ್ವಾರಾ ಜಿಲ್ಲೆಯ ಹಲವಾರು ಸ್ಥಳೀಯ ಮುಖಂಡರು, ಕೌನ್ಸಿಲರ್‌ಗಳು, ಸರಪಂಚ್‌ಗಳು, ಜನಪದ್​ ಸದಸ್ಯರು, ಕಾರ್ಯಕರ್ತರು ಮತ್ತು ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಉಜ್ವಲ್ ಸಿಂಗ್ ಚೌಹಾಣ್ ಅವರು ಕಮಲ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಮುಖ್ಯಮಂತ್ರಿ ಮೋಹನ್​ ಯಾದವ್​ ಅವರ ನೇತೃತ್ವದಲ್ಲಿ ಎಲ್ಲ ನಾಯಕರು ಕಮಲ ಬಾವುಟ ಹಿಡಿದರು. ಪಕ್ಷಕ್ಕೆ ಸ್ವಾಗತಿಸಿದ ಯಾದವ್ ಅವರು, ಕಾಂಗ್ರೆಸ್​ ಪಕ್ಷದಲ್ಲಿನ ಅನೇಕರು ಬಿಜೆಪಿ ಸೇರಲು ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಪಕ್ಷಕ್ಕೆ ಬರಲಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.

ಕೈ ಮುಷ್ಟಿಯಲ್ಲಿ ಛಿಂದ್ವಾರಾ: ಛಿಂದ್ವಾರಾ ಕ್ಷೇತ್ರವು ರಾಜಕೀಯವಾಗಿ ಕಾಂಗ್ರೆಸ್​ಗೆ ಅತಿ ಮಹತ್ವದ ಕ್ಷೇತ್ರವಾಗಿದೆ. ಮಾಜಿ ಸಿಎಂ ಆಗಿರುವ ಕಮಲ್​ನಾಥ್​ ಅವರು ಇಲ್ಲಿಂದಲೇ 9 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈಗ ಅವರ ಪುತ್ರ ನಕುಲ್​ನಾಥ್ ಅವರು ಪ್ರತಿನಿಧಿಸುತ್ತಿದ್ದಾರೆ. 2019 ರ ಲೋಕಸಭೆ ಚುನಾವಣೆಯಲ್ಲಿ ಕಮಲ ಪಕ್ಷವು ರಾಜ್ಯದ 29ರ ಪೈಕಿ 28 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ, ಛಿಂದ್ವಾರಾದ ಮತದಾರರು ಮಾತ್ರ ಕಾಂಗ್ರೆಸ್​ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದರು.

ದಶಕಗಳಿಂದ ಕಾಂಗ್ರೆಸ್​ನ ಹಿಡಿತದಲ್ಲಿರುವ ಕ್ಷೇತ್ರದಲ್ಲಿ ಇತ್ತೀಚೆಗೆ ಹಲವು ಮಹತ್ವದ ತಿರುವುಗಳು ಕಂಡುಬಂದಿವೆ. ಹೊಸದಾಗಿ ರಚಿಸಲಾದ ಪಾಂಡುರ್ನಾ ಜಿಲ್ಲೆಯಿಂದ 700 ಕ್ಕೂ ಹೆಚ್ಚು ಕಾಂಗ್ರೆಸ್ಸಿಗರು ಸೇರಿದಂತೆ 1,500 ಕಾಂಗ್ರೆಸ್ಸಿಗರು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಬಿಜೆಪಿಗೆ ಸೇರಿದವರಲ್ಲಿ ನಗರ ಪಾಲಿಕೆ ಅಧ್ಯಕ್ಷ, ನಗರ ಪಾಲಿಕೆ ಕೌನ್ಸಿಲರ್‌ಗಳು, ಜನಪದ್​ ಸದಸ್ಯರು, 16 ಸರಪಂಚ್‌ಗಳೂ ಇದ್ದಾರೆ.

ಕೆಲ ದಿನಗಳ ಹಿಂದೆ ಕಮಲ್ ನಾಥ್ ಮತ್ತು ಅವರ ಪುತ್ರ ನಕುಲ್ ನಾಥ್ ಅವರ ಅವರಿಗೆ ನಿಷ್ಠರಾಗಿರುವ ಮಧ್ಯಪ್ರದೇಶದ ಸುಮಾರು ಅರ್ಧ ಡಜನ್ ಶಾಸಕರು ದೆಹಲಿಗೆ ಬಂದಿದ್ದರು. ಇದೇ ವೇಳೆ, ಮಾಜಿ ಸಿಎಂ ಕೂಡ ರಾಷ್ಟ್ರ ರಾಜಧಾನಿಗೆ ಭೇಟಿ ನೀಡಿದ್ದರು. ಇದು ಭಾರಿ ಕುತೂಹಲ ಮೂಡಿಸಿತ್ತು.

ಮಾಜಿ ಸಿಎಂ ಪಕ್ಷ ಬಿಡಲ್ಲ: ಆದರೆ, ಕಮಲ್​ನಾಥ್ ಅವರು ಬಿಜೆಪಿಗೆ ಸೇರುತ್ತಾರೆ ಎಂಬ ಊಹಾಪೋಹಗಳು ನಿಜವಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭನ್ವರ್ ಜಿತೇಂದ್ರ ಸಿಂಗ್ ಹೇಳಿದ್ದಾರೆ. ಅಂತಹ ಮಾತುಕತೆಗಳು ಮಾಧ್ಯಮಗಳು ಮತ್ತು ಕಮಲ ಪಕ್ಷದ ಸೃಷ್ಟಿ ಎಂದು ಆರೋಪಿಸಿದ್ದಾರೆ.

ಮಾರ್ಚ್ 2 ರಂದು ಮಧ್ಯಪ್ರದೇಶಕ್ಕೆ ಪ್ರವೇಶಿಸುವ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಕಮಲ್​ ಅವರು ಭಾಗವಹಿಸಲಿದ್ದಾರೆ ಎಂದು ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ. ಗಮನಾರ್ಹ ಸಂಗತಿಯೆಂದರೆ, ಕಮಲ್​ನಾಥ್ ಮತ್ತಿತರ ನಾಯಕರು ಯಾತ್ರೆಯ ಸಿದ್ಧತಾ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ಬಿಜೆಪಿ ಸೇರ್ಪಡೆ ಊಹಾಪೋಹ: ಕಮಲ್​ನಾಥ್​ ನಿಷ್ಠ ಶಾಸಕರು ದೆಹಲಿಗೆ ಆಗಮನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.