ETV Bharat / bharat

ಹೊಸ ಕ್ರಿಮಿನಲ್ ಕಾನೂನುಗಳ ಜಾರಿಗೆ ತಡೆ ಕೋರಿದ್ದ ಪಿಐಎಲ್​ ವಿಚಾರಣೆಗೆ ಸುಪ್ರೀಂ ಕೋರ್ಟ್​ ನಕಾರ - Indian penal codes

author img

By PTI

Published : May 20, 2024, 2:30 PM IST

ಮೂರು ಹೊಸ ಕ್ರಿಮಿನಲ್ ಕಾನೂನುಗಳ ಜಾರಿಗೆ ತಡೆ ಕೋರಿದ್ದ ಪಿಐಎಲ್​ನ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್​ ನಿರಾಕರಿಸಿದೆ.

ಹೊಸ ಕ್ರಿಮಿನಲ್ ಕಾನೂನು ಜಾರಿಗೆ ತಡೆ ಕೋರಿದ್ದ ಪಿಐಎಲ್​ ವಿಚಾರಣೆಗೆ ಸುಪ್ರೀಂ ಕೋರ್ಟ್​ ನಕಾರ
ಹೊಸ ಕ್ರಿಮಿನಲ್ ಕಾನೂನು ಜಾರಿಗೆ ತಡೆ ಕೋರಿದ್ದ ಪಿಐಎಲ್​ ವಿಚಾರಣೆಗೆ ಸುಪ್ರೀಂ ಕೋರ್ಟ್​ ನಕಾರ (ians)

ನವದೆಹಲಿ: ಭಾರತದ ದಂಡ ಸಂಹಿತೆಗಳನ್ನು ಕೂಲಂಕಷವಾಗಿ ಬದಲಾಯಿಸಿ ಆ ಜಾಗದಲ್ಲಿ ಮೂರು ಹೊಸ ಕಾನೂನುಗಳನ್ನು ಜಾರಿಗೆ ತರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ. ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಪಂಕಜ್ ಮಿಥಾಲ್ ಅವರ ರಜಾಕಾಲದ ಪೀಠವು ಅರ್ಜಿದಾರರ ವಕೀಲ ವಿಶಾಲ್ ತಿವಾರಿ ಅವರಿಗೆ ಅರ್ಜಿಯನ್ನು ಹಿಂಪಡೆಯಲು ಅವಕಾಶ ನೀಡಿತು.

ಕಳೆದ ವರ್ಷ ಡಿಸೆಂಬರ್ 21 ರಂದು ಲೋಕಸಭೆಯು ಮೂರು ಪ್ರಮುಖ ಶಾಸನಗಳಾದ- ಭಾರತೀಯ ನ್ಯಾಯ (ಎರಡನೇ) ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ (ಎರಡನೇ) ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ (ಎರಡನೇ) ಮಸೂದೆ ಇವುಗಳನ್ನು ಅಂಗೀಕರಿಸಿತ್ತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಡಿಸೆಂಬರ್ 25 ರಂದು ಈ ಮಸೂದೆಗಳಿಗೆ ಅಂಕಿತ ಹಾಕಿದರು.

ಹೊಸ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷರತಾ ಕಾಯ್ದೆ ಇವುಗಳು ಕ್ರಮವಾಗಿ ಭಾರತೀಯ ದಂಡ ಸಂಹಿತೆ (ಐಪಿಸಿ), ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ (ಸಿಆರ್ಪಿಸಿ) ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಯನ್ನು ಬದಲಾಯಿಸಲಿವೆ.

ಈ ಹೊಸ ಕಾನೂನುಗಳ ಜಾರಿಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ಆರಂಭವಾಗುತ್ತಲೇ, "ನಾವು ಇದನ್ನು (ಅರ್ಜಿ) ವಜಾಗೊಳಿಸುತ್ತಿದ್ದೇವೆ" ಎಂದು ನ್ಯಾಯಪೀಠ ಹೇಳಿತು. ಈ ಕಾನೂನುಗಳು ಇಲ್ಲಿಯವರೆಗೆ ಜಾರಿಗೆ ಬಂದಿಲ್ಲ ಎಂದು ನ್ಯಾಯಪೀಠ ಹೇಳಿತು. ಹೀಗಾಗಿ ಅರ್ಜಿದಾರ ತಿವಾರಿ ತಮ್ಮ ಅರ್ಜಿಯನ್ನು ಹಿಂಪಡೆಯಲು ಅವಕಾಶ ನೀಡಬೇಕೆಂದು ಕೇಳಿಕೊಂಡರು.

"ಅರ್ಜಿಯನ್ನು ಅತ್ಯಂತ ಉದಾಸೀನ ಮತ್ತು ಜವಾಬ್ದಾರಿ ರೀತಿಯಲ್ಲಿ ಸಲ್ಲಿಸಲಾಗಿದೆ" ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು. "ನೀವು ಹೆಚ್ಚು ವಾದಿಸಿದ್ದರೆ ನಾವು ನಿಮ್ಮ ಅರ್ಜಿಯನ್ನು ದಂಡ ವಿಧಿಸಿ ವಜಾಗೊಳಿಸುತ್ತಿದ್ದೆವು. ಆದರೆ ನೀವು ವಾದಿಸದ ಕಾರಣ ದಂಡ ವಿಧಿಸುತ್ತಿಲ್ಲ" ಎಂದು ನ್ಯಾಯಪೀಠ ತಿಳಿಸಿತು.

ಹೊಸ ಮಸೂದೆಗಳ ಮೇಲೆ ಸಂಸತ್ತಿನಲ್ಲಿ ಚರ್ಚೆ ನಡೆದಾಗ ಹೆಚ್ಚಿನ ವಿರೋಧ ಪಕ್ಷದ ಸದಸ್ಯರು ಅಮಾನತುಗೊಂಡಿದ್ದರಿಂದ ಯಾವುದೇ ಸಂಸದೀಯ ಚರ್ಚೆಯಿಲ್ಲದೆ ಇವುಗಳನ್ನು ಜಾರಿಗೆ ತರಲಾಗಿದೆ. ಹೀಗಾಗಿ ಮೂರು ಹೊಸ ಕಾನೂನುಗಳ ಜಾರಿಗೆ ತಡೆ ನೀಡುವಂತೆ ಕೋರಿ ತಿವಾರಿ ಪಿಐಎಲ್​ ಸಲ್ಲಿಸಿದ್ದರು.

"ಹೊಸ ಕ್ರಿಮಿನಲ್ ಕಾನೂನುಗಳು ಕ್ರೂರವಾಗಿವೆ ಮತ್ತು ವಾಸ್ತವದಲ್ಲಿ ಪೊಲೀಸ್ ರಾಜ್ಯವನ್ನು ಸ್ಥಾಪಿಸುತ್ತವೆ ಮತ್ತು ಭಾರತದ ಜನರ ಮೂಲಭೂತ ಹಕ್ಕುಗಳ ಪ್ರತಿಯೊಂದು ಕಾನೂನನ್ನು ಉಲ್ಲಂಘಿಸುತ್ತವೆ. ಬ್ರಿಟಿಷ್ ಕಾನೂನುಗಳನ್ನು ವಸಾಹತುಶಾಹಿ ಮತ್ತು ಕ್ರೂರವೆಂದು ಪರಿಗಣಿಸಿದರೆ, ಈ ಭಾರತೀಯ ಕಾನೂನುಗಳು ಅದಕ್ಕಿಂತ ಹೆಚ್ಚು ಕ್ರೂರವಾಗಿವೆ. ಬ್ರಿಟಿಷ್ ಅವಧಿಯಲ್ಲಿ, ನೀವು ಒಬ್ಬ ವ್ಯಕ್ತಿಯನ್ನು ಗರಿಷ್ಠ 15 ದಿನಗಳವರೆಗೆ ಪೊಲೀಸ್ ಕಸ್ಟಡಿಯಲ್ಲಿಡಬಹುದಾಗಿತ್ತು. ಆದರೆ ಹೊಸ ಕಾನೂನಿನಲ್ಲಿ ಈ ಅವಧಿಯನ್ನು 90 ದಿನ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಗೆ ವಿಸ್ತರಿಸಬಹುದಾಗಿರುವುದು ಪೊಲೀಸ್ ಚಿತ್ರಹಿಂಸೆಗೆ ಅನುವು ಮಾಡಿಕೊಡುವ ಕಾನೂನಾಗಿದೆ" ಎಂದು ಪಿಐಎಲ್​ನಲ್ಲಿ ತಿವಾರಿ ಹೇಳಿದ್ದರು.

ಇದನ್ನೂ ಓದಿ : ಮಾನಹಾನಿಕರ ಹೇಳಿಕೆ ಆರೋಪ: ಭಾರತ್ ಸೇವಾಶ್ರಮದ ಸನ್ಯಾಸಿಯಿಂದ ಸಿಎಂ ಮಮತಾಗೆ ಲೀಗಲ್ ನೋಟಿಸ್ - LEGAL NOTICE TO BENGAL CM

ETV Bharat Logo

Copyright © 2024 Ushodaya Enterprises Pvt. Ltd., All Rights Reserved.