ETV Bharat / bharat

'ಹೈಸ್ಕೂಲ್​ ಬಳಿಕವೇ ಲಾ ಪ್ರಾಕ್ಟಿಸ್​ ಶುರು ಮಾಡಿ': ಕಾನೂನು ಕೋರ್ಸ್ ಅವಧಿ ಇಳಿಕೆ ಕೋರಿ ಸಲ್ಲಿಸಿರುವ ಅರ್ಜಿಗೆ ಸುಪ್ರೀಂ ಗರಂ - Law Course - LAW COURSE

Supreme Court on LLB PIL: ಕಾನೂನು ಕೋರ್ಸ್ ಅನ್ನು ಮೂರು ವರ್ಷಕ್ಕಿಳಿಸಲು ಕೋರಿ ಸಲ್ಲಿಸಿದ್ದ ಅರ್ಜಿ ವಿರುದ್ಧ ಸುಪ್ರೀಂ ಕೋರ್ಟ್ ಬೇಸರ ವ್ಯಕ್ತಪಡಿಸಿತು. ಯಾಕೆ? ಹೈಸ್ಕೂಲ್ ಮುಗಿಸಿದ ನಂತರವೇ ಪ್ರಾಕ್ಟಿಸ್​ ಶುರು ಮಾಡಿ ಎಂದು ಅರ್ಜಿದಾರರ ಮೇಲೆ ಅಸಮಾಧಾನ ವ್ಯಕ್ತಪಡಿಸಿತು.

SC REFUSES TO ENTERTAIN PIL  LAW COURSE  SUPREME COURT
ಕಾನೂನು ಕೋರ್ಸ್ ಅವಧಿ ಇಳಿಕೆ ಬಗ್ಗೆ ಸುಪ್ರೀಂ ಆಕ್ರೋಶ
author img

By PTI

Published : Apr 22, 2024, 8:09 PM IST

ನವದೆಹಲಿ: ಇಂಟರ್​ಮೀಡಿಯಟ್​ ಅಥವಾ 12ನೇ ತರಗತಿಯ ನಂತರ ನೇರವಾಗಿ ಮೂರು ವರ್ಷಗಳ ಕಾನೂನು ಕೋರ್ಸ್ (ಎಲ್‌ಎಲ್‌ಬಿ) ಮುಂದುವರಿಸುವ ಆಯ್ಕೆ ಕೋರಿ ಸಲ್ಲಿಸಲಾದ ಅರ್ಜಿ ಬಗ್ಗೆ ಸುಪ್ರೀಂ ಕೋರ್ಟ್ ಇಂದು ಅಸಮಾಧಾನ ವ್ಯಕ್ತಪಡಿಸಿದೆ. ಪ್ರಸ್ತುತ ಇರುವ ಕೋರ್ಸ್ ಸರಿಯಾಗಿದೆ ಎಂದು ಅಭಿಪ್ರಾಯಪಟ್ಟು ಪಿಐಎಲ್​ ತಿರಸ್ಕರಿಸಿತು.

ಅಸ್ತಿತ್ವದಲ್ಲಿರುವ 5 ವರ್ಷಗಳ ಎಲ್‌ಎಲ್‌ಬಿ ಕೋರ್ಸ್‌ಗೆ ಬದಲಾಗಿ 12ನೇ ತರಗತಿಯ ನಂತರ 3 ವರ್ಷಗಳ ಎಲ್‌ಎಲ್‌ಬಿ ಕೋರ್ಸ್ ನಡೆಸುವ ಸಾಧ್ಯತೆಯನ್ನು ಅನ್ವೇಷಿಸಲು ತಜ್ಞರ ಸಮಿತಿ ರಚಿಸುವಂತೆ ಕೇಂದ್ರ ಮತ್ತು ಬಾರ್ ಕೌನ್ಸಿಲ್ ಆಫ್ ಇಂಡಿಯಾವನ್ನು ಕೇಳುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸಲು ಕೋರ್ಟ್ ನಿರಾಕರಿಸಿದೆ. ಇದೇ ವೇಳೆ, ವಕೀಲ ವೃತ್ತಿಗೆ ಪ್ರಬುದ್ಧ ವ್ಯಕ್ತಿಗಳ ಅಗತ್ಯವಿದೆ ಎಂದಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಅವರಿದ್ದ ಪೀಠ, ಐದು ವರ್ಷಗಳ ಎಲ್​ಎಲ್​ಬಿ (ಬ್ಯಾಚುಲರ್ ಆಫ್ ಲಾ) ಕೋರ್ಸ್ "ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ" ಮತ್ತು ಅದರಲ್ಲಿ ಗೊಂದಲವಿಲ್ಲ ಎಂದಿತು. "ಮೂರು ವರ್ಷಗಳ ಕೋರ್ಸ್ ಏಕೆ? ಅವರು ಪ್ರೌಢಶಾಲೆಯ ನಂತರ ಪ್ರಾಕ್ಟಿಸ್​ (ಕಾನೂನು) ಪ್ರಾರಂಭಿಸಬಹುದು. ನನ್ನ ಪ್ರಕಾರ 5 ವರ್ಷ ತುಂಬಾ ಕಡಿಮೆ. ನಮಗೆ ಪ್ರಬುದ್ಧ ಜನರು ವೃತ್ತಿಗೆ ಬರಬೇಕು. ಈ 5 ವರ್ಷಗಳ ಕೋರ್ಸ್ ತುಂಬಾ ಪ್ರಯೋಜನಕಾರಿಯಾಗಿದೆ" ಎಂದು ಪೀಠ ಹೇಳಿದೆ.

ವಕೀಲ-ಅರ್ಜಿದಾರರಾದ ಅಶ್ವಿನಿ ಉಪಾಧ್ಯಾಯ ಪರ ಹಿರಿಯ ವಕೀಲ ವಿಕಾಸ್ ಸಿಂಗ್ ವಾದ ಮಂಡಿಸಿದರು. ಬ್ರಿಟನ್‌ನಲ್ಲಿ ಕಾನೂನು ಕೋರ್ಸ್ ಮೂರು ವರ್ಷಗಳದ್ದಾಗಿದೆ. ನಮ್ಮಲ್ಲಿ ಐದು ವರ್ಷಗಳ ಕಾಲ ಇರುವ ಎಲ್‌ಎಲ್‌ಬಿ ಕೋರ್ಸ್ ಬಡವರಿಗೆ, ವಿಶೇಷವಾಗಿ ಯುವತಿಯರಿಗೆ ನಿರಾಶಾದಾಯಕವಾಗಿದೆ ಎಂದು ವಕೀಲರು ವಾದ ಮಂಡಿಸಿದರು.

ಈ ವಾದಗಳನ್ನು ಒಪ್ಪದ ಸಿಜೆಐ, ಈ ಬಾರಿ ಶೇ.70ರಷ್ಟು ಮಹಿಳೆಯರು ಜಿಲ್ಲಾ ನ್ಯಾಯಾಧೀಕರಣಕ್ಕೆ ಬಂದಿದ್ದು, ಈಗ ಕಾನೂನು ಕ್ಷೇತ್ರಕ್ಕೆ ಹೆಣ್ಣು ಮಕ್ಕಳು ಹೆಚ್ಚು ಬರುತ್ತಿದ್ದಾರೆ ಎಂದರು. ಈ ಸಂಬಂಧ ಬಿಸಿಐಗೆ ಪ್ರಾತಿನಿಧ್ಯ ನೀಡಲು ಅನುಮತಿಯೊಂದಿಗೆ ಪಿಐಎಲ್ ಹಿಂಪಡೆಯಲು ಸಿಂಗ್ ಅನುಮತಿ ಕೋರಿದರು. ಇದನ್ನು ತಿರಸ್ಕರಿಸಿದ ಪೀಠ, ಪಿಐಎಲ್ ಹಿಂಪಡೆಯುವಂತೆ ಸೂಚಿಸಿತು.

ಪ್ರಸ್ತುತ, ವಿದ್ಯಾರ್ಥಿಗಳು 12ನೇ ತರಗತಿಯ ನಂತರ ಐದು ವರ್ಷಗಳ ಸಮಗ್ರ ಕಾನೂನು ಕೋರ್ಸ್ ಮಾಡಬಹುದು. ಇದಕ್ಕಾಗಿ ಪ್ರಧಾನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು (NLU) ಅಳವಡಿಸಿಕೊಂಡ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (CLAT) ಬರೆಯಬೇಕಾಗುತ್ತದೆ. ಯಾವುದೇ ವಿಷಯದಲ್ಲಿ ಪದವಿ ಪಡೆದ ನಂತರ ವಿದ್ಯಾರ್ಥಿಗಳು ಮೂರು ವರ್ಷಗಳ ಎಲ್‌ಎಲ್‌ಬಿ ಕೋರ್ಸ್ ಸಹ ಮುಂದುವರಿಸಬಹುದು.

ಇದನ್ನೂ ಓದಿ: ಏ.29ರೊಳಗೆ ಕರ್ನಾಟಕದ ಬರ ಪರಿಹಾರ ಹಣ ಬಿಡುಗಡೆಗೆ ಕ್ರಮ: ಸುಪ್ರೀಂ ಕೋರ್ಟ್​ಗೆ ಕೇಂದ್ರ ಸರ್ಕಾರದ ಭರವಸೆ - Drought Relief Fund

ETV Bharat Logo

Copyright © 2025 Ushodaya Enterprises Pvt. Ltd., All Rights Reserved.