ETV Bharat / bharat

ಮಹಾರಾಷ್ಟ್ರ ಡಿಜಿಪಿಯಾಗಿ ಸಂಜಯ್​ ವರ್ಮಾ ನೇಮಕ - SANJAY VERMA NEW MH DGP

ಚುನಾವಣಾ ಆಯೋಗದ ಸೂಚನೆ ಮೇರೆಗೆ ಮಹಾರಾಷ್ಟ್ರ ಸರ್ಕಾರ ರಶ್ಮಿ ಶುಕ್ಲಾ ಅವರನ್ನು ವರ್ಗಾವಣೆ ಮಾಡಿ ವರ್ಮಾ ಅವರನ್ನು ನೇಮಿಸಿದೆ.

sanjay-verma-appointed-maharashtras-director-general-of-police
ಸಂಜಯ್​ ವರ್ಮಾ (IANS)
author img

By PTI

Published : Nov 5, 2024, 3:47 PM IST

ಮುಂಬೈ: ಮಹಾರಾಷ್ಟ್ರದ ನೂತನ ಪೊಲೀಸ್​ ಮಹಾ ನಿರ್ದೇಶಕರಾಗಿ (ಡಿಜಿಪಿ) ಸಂಜಯ್​ ಕುಮಾರ್​ ವರ್ಮಾ ಅವರನ್ನು ನೇಮಕ ಮಾಡಲಾಗಿದೆ. ಚುನಾವಣಾ ಆಯೋಗದ ಸೂಚನೆ ಮೇರೆಗೆ ಮಹಾರಾಷ್ಟ್ರ ಸರ್ಕಾರ ರಶ್ಮಿ ಶುಕ್ಲಾ ಅವರ ಅಧಿಕಾರ ಅವಧಿಗೆ ಮುನ್ನವೇ ಅವರನ್ನು ಸ್ಥಾನದಿಂದ ವರ್ಗಾವಣೆ ಮಾಡಿ, ಈ ನೇಮಕಾತಿ ನಡೆಸಿದೆ.

ಕಾನೂನು ಮತ್ತು ತಾಂತ್ರಿಕತೆಯ ಮಹಾ ನಿರ್ದೇಶಕರಾಗಿ ಅವರು ಸೇವೆ ಸಲ್ಲಿಸುತ್ತಿದ್ದು, 1990 ಬ್ಯಾಚ್​ನ ಐಪಿಎಸ್​​ ಅಧಿಕಾರಿಯಾಗಿದ್ದಾರೆ. ಇವರು 2028ರ ಏಪ್ರಿಲ್​ಗೆ ನಿವೃತ್ತಿ ಹೊಂದಲಿದ್ದಾರೆ.

ನವೆಂಬರ್​ 20ಕ್ಕೆ ಚುನಾವಣೆಗೆ ಸಜ್ಜಾಗಿರುವ ಮಹಾರಾಷ್ಟ್ರದಲ್ಲಿ ವಿಪಕ್ಷಗಳು ನೀಡಿದ ದೂರಿನ ಆಧಾರದ ಮೇಲೆ ತಕ್ಷಣಕ್ಕೆ ರಾಜ್ಯ ಪೊಲೀಸ್​​ ನಿರ್ದೇಶಕರಾಗಿದ್ದ ಶುಕ್ಲಾ ಅವರನ್ನು ಹುದ್ದೆಯಿಂದ ಬದಲಾಯಿಸುವಂತೆ ಚುನಾವಣಾ ಆಯೋಗ ಸರ್ಕಾರಕ್ಕೆ ಸೂಚನೆ ನೀಡಿತ್ತು. ಮಹಾರಾಷ್ಟ್ರದ ಮೊದಲ ಮಹಿಳಾ ಡಿಜಿಪಿ ಎಂಬ ಹೆಗ್ಗಳಿಕೆಯನ್ನು ಶುಕ್ಲಾ ಹೊಂದಿದ್ದಾರೆ. ವಿಪಕ್ಷಗಳ ಫೋನ್​ ಕರೆಗಳ ಕದ್ದಾಲಿಕೆಯ ಆರೋಪ ಶುಕ್ಲಾ ಅವರ ವಿರುದ್ಧ ಕೇಳಿಬಂದಿತ್ತು. ಹೀಗಾಗಿ ಅವರನ್ನು ವರ್ಗಾವಣೆ ಮಾಡುವಂತೆ ಕಾಂಗ್ರೆಸ್​ ಚುನಾವಣಾ ಆಯೋಗಕ್ಕೆ ಮನವಿ ಮಾಡಿತ್ತು.

ಮುಂಬೈ ಪೊಲೀಸ್​ ಆಯುಕ್ತರಾದ ವಿವೇಕ್​ ಫನ್ಸಲ್ಕರ್​ ಅವರಿಂದ ವರ್ಮಾ ಹುದ್ದೆಯ ಚಾರ್ಜ್​ ಪಡೆಯಲಿದ್ದು, ಅವರಿಗೆ ಹೆಚ್ಚುವರಿಯಾಗಿ ಡಿಜಿಪಿ ಹುದ್ದೆ ನಿರ್ವಹಣೆ ಹೊಣೆಯನ್ನು ನೀಡಲಾಗಿದೆ. 2015ರಲ್ಲಿ ಕಮ್ಯೂನಿಸ್ಟ್​ ನಾಯಕ ಗೋವಿಂದ್​​ ಪನ್ಸಾರೆ ಹತ್ಯೆ ಪ್ರಕರಣದ ತನಿಖೆಗಾಗಿ ರೂಪಿಸಿದ್ದ ವಿಶೇಷ ತನಿಖಾ ತಂಡದ ನೇತೃತ್ವವನ್ನು ವರ್ಮಾ ಹೊತ್ತಿದ್ದರು.

ಶುಕ್ಲಾ ಅವರ ಹುದ್ದೆ ಜವಾಬ್ದಾರಿಯನ್ನು ಮುಂದಿನ ಹಿರಿಯ ಐಪಿಎಸ್​ ಅಧಿಕಾರಿಗೆ ನೀಡುವಂತೆ ಚುನಾವಣಾ ಆಯೋಗ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಸೂಚಿಸಿತ್ತು. ಜೊತೆಗೆ ಮಂಗಳವಾರ ಮಧ್ಯಾಹ್ನದೊಳಗೆ ಮೂವರು ಐಪಿಎಸ್​ ಅಧಿಕಾರಿಗಳ ಹೆಸರುಳ್ಳ ಪಟ್ಟಿ ನೀಡುವಂತೆ ಸೂಚಿಸಿತ್ತು. ರಾಜ್ಯ ಸರ್ಕಾರ ಅದರಂತೆ ವರ್ಮಾ ಹೆಸರನ್ನು ಡಿಜಿಪಿ ಹುದ್ದೆಗೆ ಸೂಚಿಸಿತ್ತು.

ಹಿರಿಯ ಐಪಿಎಸ್ ಅಧಿಕಾರಿ, ಡಿಜಿಪಿ ರಶ್ಮಿ ಶುಕ್ಲಾ ಆಡಳಿತಾರೂಢ ಮಹಾಯುತಿ ಮೈತ್ರಿಕೂಟದ ಕಡೆಗೆ ಪಕ್ಷಪಾತ ಧೋರಣೆ ಹೊಂದಿದ್ದಾರೆ ಮತ್ತು ಅವರು ಉನ್ನತ ಹುದ್ದೆಯಲ್ಲಿದ್ದರೆ ನ್ಯಾಯಯುತ ಚುನಾವಣೆ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನೇತೃತ್ವದ ಐಎನ್​ಡಿಐಎ ಕೂಟದ ಪಕ್ಷಗಳು ಆರೋಪಿಸಿದ್ದವು.

ಶುಕ್ಲಾ ಅವರ ಬಳಿಯಿರುವ ಉಸ್ತುವಾರಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಹಿರಿಯ ಐಪಿಎಸ್ ಅಧಿಕಾರಿಗೆ ಹಸ್ತಾಂತರಿಸುವಂತೆ ಚುನಾವಣಾ ಆಯೋಗವು ಮುಖ್ಯ ಕಾರ್ಯದರ್ಶಿ ಸುಜಾತಾ ಸೌನಿಕ್ ಅವರಿಗೆ ಸೂಚಿಸಿದೆ. ಅಲ್ಲದೆ ಮುಂದಿನ ರಾಜ್ಯ ಪೊಲೀಸ್ ಮುಖ್ಯಸ್ಥರ ಆಯ್ಕೆಗಾಗಿ ಸಮಿತಿಯೊಂದನ್ನು ರಚಿಸಲು ನಾಳೆಯೊಳಗೆ ಮೂರು ಜನರ ಹೆಸರುಗಳನ್ನು ಕಳುಹಿಸುವಂತೆ ಕೂಡ ಆಯೋಗವು ಸೌನಿಕ್ ಅವರಿಗೆ ಕೇಳಿದೆ.

ಕಾಂಗ್ರೆಸ್ ಮತ್ತು ಶಿವಸೇನೆ (ಯುಬಿಟಿ) ಸೇರಿದಂತೆ ವಿರೋಧ ಪಕ್ಷಗಳು ಶುಕ್ಲಾ ಅವರು ಪಕ್ಷಪಾತಿಯಾಗಿದ್ದಾರೆ ಎಂದು ಆರೋಪಿಸಿದ್ದವು.

"ರಾಜ್ಯ ಪೊಲೀಸ್ ಮಹಾನಿರ್ದೇಶಕಿ ರಶ್ಮಿ ಶುಕ್ಲಾ ವಿರುದ್ಧ ಗಂಭೀರ ಆರೋಪವಿದೆ. 2019ರಲ್ಲಿ ನಮ್ಮ ಸರ್ಕಾರ ರಚನೆಯಾದಾಗ, ಭಾರತೀಯ ಜನತಾ ಪಕ್ಷಕ್ಕಾಗಿ ನೇರವಾಗಿ ಕೆಲಸ ಮಾಡುತ್ತಿದ್ದ ಈ ಪೊಲೀಸ್ ಮಹಾನಿರ್ದೇಶಕರು ನಮ್ಮ ಎಲ್ಲಾ ಫೋನ್​ಗಳನ್ನು ಟ್ಯಾಪ್ ಮಾಡುತ್ತಿದ್ದರು ಮತ್ತು ನಾವು ಏನು ಮಾಡಲಿದ್ದೇವೆ ಎಂಬುದರ ಬಗ್ಗೆ ದೇವೇಂದ್ರ ಫಡ್ನವೀಸ್ ಅವರಿಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತಿದ್ದರು " ಎಂದು ರಾಜ್ಯಸಭಾ ಸಂಸದ ಮತ್ತು ಶಿವಸೇನೆ (ಯುಬಿಟಿ) ಮುಖಂಡ ಸಂಜಯ್ ರಾವತ್ ಮಾಧ್ಯಮಗಳ ಮುಂದೆ ಹೇಳಿದ್ದರು.

ಹೆಚ್ಚಿನ ಮಾಹಿತಿ ಈ ಸುದ್ದಿಯನ್ನೂ ಓದಿ: ಪಕ್ಷಪಾತ ಆರೋಪ: ಮಹಾರಾಷ್ಟ್ರ ಡಿಜಿಪಿ ರಶ್ಮಿ ಶುಕ್ಲಾ ವರ್ಗಾವಣೆಗೆ ಚುನಾವಣಾ ಆಯೋಗ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.