ETV Bharat / bharat

ದಾಖಲೆ ಇಲ್ಲದೇ ಹಣ ಸಾಗಾಟ.. 11 ಕೋಟಿ ರೂ. ಮೌಲ್ಯದ ನಗದು, ಚಿನ್ನ, ಬೆಳ್ಳಿ ವಶ - AT Atmakuru bus stand

ಆಂಧ್ರದ ವಿವಿಧೆಡೆ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ 11 ಕೋಟಿ ರೂ. ಮೌಲ್ಯದ ನಗದು, ಚಿನ್ನ, ಬೆಳ್ಳಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದಾಖಲೆಯಿಲ್ಲದೆ ಹಣ ಸಾಗಾಟ
ದಾಖಲೆಯಿಲ್ಲದೆ ಹಣ ಸಾಗಾಟ
author img

By ETV Bharat Karnataka Team

Published : Feb 2, 2024, 6:46 PM IST

ಕರ್ನೂಲು (ಆಂಧ್ರಪ್ರದೇಶ) : ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಆಂಧ್ರದಾದ್ಯಂತ ಪೊಲೀಸರು ತಪಾಸಣೆ ನಡೆಸುತ್ತಿದ್ದು, ವಿವಿಧೆಡೆ ದಾಖಲೆಗಳಿಲ್ಲದೇ ಅಕ್ರಮವಾಗಿ ಸಾಗಿಸುತ್ತಿದ್ದ 11 ಕೋಟಿ ರೂ. ಮೌಲ್ಯದ ನಗದು, ಚಿನ್ನ, ಬೆಳ್ಳಿಯನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಎಟಿ ಆತ್ಮಕೂರು ಬಸ್ ನಿಲ್ದಾಣ : ಗುರುವಾರ ತೆಲ್ಲಾವರಿ ನವಾಬುಪೇಟೆಯ ನೆಲ್ಲೂರು ಇನ್ಸ್​ಪೆಕ್ಟರ್ ಎಂ. ಬಾಬಿ ಅವರು ತಮ್ಮ ಸಿಬ್ಬಂದಿಯೊಂದಿಗೆ ಆತ್ಮಕೂರು ಬಸ್ ನಿಲ್ದಾಣದ ಬಳಿ ತಪಾಸಣೆ ನಡೆಸುತ್ತಿದ್ದರು. ಈ ವೇಳೆ, ರಾಜಾಜಿನಗರದ ಎಲ್. ಅಪ್ಪಾರಾವ್, ಬಿ. ಪವನ್, ಎಸ್. ದುರ್ಗಾಪ್ರಸಾದ್ ರೆಡ್ಡಿ, ಬಿ. ಸಾಯಿರಾಮಕೃಷ್ಣ, ಕಾಕಿನಾಡ ಮೂಲದ ಪಿ. ತಾತಾರಾವ್, ಟಿ. ರಮೇಶ್, ಟಿ. ಸತ್ಯವೇಣಿ ಮತ್ತು ಪಿ. ಮಣಿಕಂಠ ಅನುಮಾನಾಸ್ಪದವಾಗಿ ಕಂಡು ಬಂದಿದ್ದಾರೆ. ನಂತರ ಅವರನ್ನು ವಶಕ್ಕೆ ಪಡೆದು ಬ್ಯಾಗ್ ಪರಿಶೀಲಿಸಲಾಗಿದೆ. ಇವರೆಲ್ಲರೂ ಚಿನ್ನದ ವ್ಯಾಪಾರಿಗಳಾಗಿದ್ದು, ಅವರ ಬಳಿ ಚಿನ್ನ ಖರೀದಿಸಲು ರೂ. 4,38,50,000 ನಗದು ಇದ್ದಿದ್ದನ್ನು ಸಿಬ್ಬಂದಿ ಪತ್ತೆ ಮಾಡಿ ವಶಪಡಿಸಿಕೊಂಡಿದ್ದಾರೆ.

ನೆಲ್ಲೂರು ರೈಲು ನಿಲ್ದಾಣದಲ್ಲಿ ನಗದು ವಶ : ನೆಲ್ಲೂರು ರೈಲು ನಿಲ್ದಾಣದ ಪ್ರದೇಶದಲ್ಲಿ ರೈಲಿನಿಂದ ಇಳಿದ ರಾಜಾಜಿನಗರದ ನಾಲ್ವರ ಬ್ಯಾಗ್‌ಗಳನ್ನು ಅಧಿಕಾರಿಗಳು ಪರಿಶೀಲಿಸಿದಾಗ 1,44,50,000 ರೂ. ಪತ್ತೆಯಾಗಿದೆ. ಈ ಘಟನೆಯಲ್ಲಿ ನಾಲ್ವರು ಆರೋಪಿಗಳಾದ ಕೆ. ವಿಕಾಸ್, ಬಿ. ನರಸಿಂಹಂ, ವಿ. ಸತ್ಯನಾರಾಯಣ ಮತ್ತು ಪಿ. ಅರವಿಂದ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಹಾಗೂ ನಗದನ್ನು ಸಹ ವಶಪಡಿಸಿಕೊಂಡಿದ್ದಾರೆ.

ವೆಂಕಟಾಚಲಂ ಟೋಲ್ ಪ್ಲಾಜಾದಲ್ಲಿ ನಗದು ಪತ್ತೆ : ಗುರುವಾರ ಬೆಳಗ್ಗೆ ವೆಂಕಟಾಚಲಂ ಟೋಲ್ ಪ್ಲಾಜಾ ಪ್ರದೇಶದಲ್ಲಿ ಇನ್ಸ್​ಪೆಕ್ಟರ್​ ಅಂಕಮಾ ರಾವ್ ತಮ್ಮ ಸಿಬ್ಬಂದಿಯೊಂದಿಗೆ ತಪಾಸಣೆ ನಡೆಸುತ್ತಿದ್ದರು. ಈ ವೇಳೆ, ವಿಜಯವಾಡದಿಂದ ಪುದುಚೇರಿಗೆ ಹೋಗುತ್ತಿದ್ದ ಖಾಸಗಿ ಟ್ರಾವೆಲ್ ಬಸ್​ನಲ್ಲಿ ಪಲ್ನಾಡು ಜಿಲ್ಲೆಯ ನರಸಾರಾವ್ ಪೇಟೆಯ ಜಿಲಾನಿ, ದಾವೂದ್ ಮತ್ತು ಅರ್ಷದ್ ಎಂಬುವರ ಬ್ಯಾಗ್​​ಗಳನ್ನು ತಪಾಸಣೆ ನಡೆಸಿ, ದಾಖಲೆ ರಹಿತ ರೂ.1,44,50,000 ನಗದು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಒಟ್ಟು ₹ 7,27,50,000 ನಗದನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುತ್ತಿದೆ ಎಂದು ಡಿಎಸ್​ಪಿ ಅವರು ತಿಳಿಸಿದ್ದಾರೆ.

ಕರ್ನೂಲ್ ಜಿಲ್ಲೆಯಲ್ಲಿ 4 ಕೋಟಿ ವಶ : ಚುನಾವಣೆ ಸಮೀಪಿಸುತ್ತಿದ್ದಂತೆ ಕರ್ನೂಲ್ ಜಿಲ್ಲೆಯಲ್ಲಿ 4 ಕೋಟಿ 59 ಲಕ್ಷ ಮೌಲ್ಯದ ನಗದು, ಚಿನ್ನ, ಬೆಳ್ಳಿ ವಶಪಡಿಸಿಕೊಳ್ಳಲಾಗಿದೆ. ಗುರುವಾರ ರಾತ್ರಿ ಕೃಷ್ಣಗಿರಿ ಮಂಡಲದ ಅಮಕಾಡು ಟೋಲ್ ಪ್ಲಾಜಾದಲ್ಲಿ ಕರ್ನೂಲ್ ವಿಶೇಷ ದಳದ ಪೊಲೀಸರು ವಾಹನ ತಪಾಸಣೆ ನಡೆಸಿದರು. ಈ ವೇಳೆ, ಹೈದರಾಬಾದ್​ನಿಂದ ಕೊಯಮತ್ತೂರಿಗೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಎಸಿ ಟ್ರಾವೆಲ್ಸ್ ಬಸ್​ನಲ್ಲಿ ತಪಾಸಣೆ ನಡೆಸಲಾಯಿತು. 4 ಮಂದಿಯಿಂದ ಚಿನ್ನ, ಬೆಳ್ಳಿ ಸೇರಿದಂತೆ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂಬುದು ತಿಳಿದು ಬಂದಿದೆ.

ನಂದ್ಯಾಲದ ಅಮರ್ ಪ್ರತಾಪ್ ಪವರ್ ಬಳಿ 1 ಕೋಟಿ 20 ಲಕ್ಷ 80 ಸಾವಿರ ನಗದು, ಕೊಯಮತ್ತೂರಿನ ವೆಂಕಟೇಶ್ ರಾಹುಲ್ ಬಳಿ 3 ಕೆಜಿ 195 ಗ್ರಾಂ ಚಿನ್ನ, 19 ಲಕ್ಷ 23 ಸಾವಿರದ 500 ನಗದು, 44 ಲಕ್ಷ 50 ಸಾವಿರ ನಗದು, 1 ಕೆಜಿ 37 ಗ್ರಾಂ ಚಿನ್ನ ಕೊಯಮತ್ತೂರಿನ ಸೆಂಥಿಲ್ ಕುಮಾರ್ ಹಾಗೂ ಸೇಲಂನ ಶಬರಿ ರಾಜನ್ ಅವರಿಂದ 5 ಕೆಜಿ ಬೆಳ್ಳಿ ಬಿಸ್ಕತ್ ವಶಪಡಿಸಿಕೊಳ್ಳಲಾಗಿದೆ. ಅವರ ಬಳಿ ಯಾವುದೇ ದಾಖಲೆಗಳಿಲ್ಲದ ಕಾರಣ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇವುಗಳ ಮೌಲ್ಯ 4 ಕೋಟಿ 59 ಲಕ್ಷ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ : ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ರೈಡ್: ಪರಿಶೀಲನೆ ಲಕ್ಷಾಂತರ ನಗದು, ಕೋಟ್ಯಂತರ ರೂ. ಮೌಲ್ಯದ ಆಸ್ತಿ ಪತ್ತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.