ಲೂಧಿಯಾನ (ಪಂಜಾಬ್): ನಿವೃತ್ತ ಡಿಎಸ್ಪಿ ಬರ್ಜಿಂದರ್ ಸಿಂಗ್ ಭುಲ್ಲರ್ ಅವರು ಲೂಧಿಯಾನದ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗುತ್ತಿದೆ.
ನಿವೃತ್ತ ಡಿಎಸ್ಪಿ ಆತ್ಮಹತ್ಯೆ: ಡಿಎಸ್ಪಿ ಬರ್ಜಿಂದರ್ ಸಿಂಗ್ ಭುಲ್ಲಾರ್ ಒಂದು ವರ್ಷದ ಹಿಂದೆ ನಿವೃತ್ತರಾಗಿದ್ದಾರೆ ಮತ್ತು ಮಾನಸಿಕ ಅಸ್ವಸ್ಥವಾಗಿದ್ದರು ಎಂದು ಹೇಳಲಾಗಿದೆ. ಮಾಜಿ ಡಿಎಸ್ಪಿ ಅವರು ತಮ್ಮ ಪೋಷಕರೊಂದಿಗೆ ತಮ್ಮ ಮನೆಯಲ್ಲಿ ವಾಸಿಸುತ್ತಿದ್ದರು. ಆದರೆ ಅವರ ಪತ್ನಿ ಮತ್ತು ಮಕ್ಕಳು ವಿದೇಶದಲ್ಲಿ ವಾಸಿಸುತ್ತಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದ ಸರಭನಗರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ನೋಡಿದಾಗ ಡಿಎಸ್ಪಿ ಕೊಠಡಿಯಲ್ಲಿದ್ದ ಕುರ್ಚಿಯ ಮೇಲೆ ಶವವಾಗಿ ಪತ್ತೆಯಾಗಿದ್ದರು. ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಸಿವಿಲ್ ಆಸ್ಪತ್ರೆಗೆ ರವಾನಿಸಿದ್ದಾರೆ.
ವಿದೇಶದಲ್ಲಿ ಪತ್ನಿ, ಮಕ್ಕಳು: ಈ ಬಗ್ಗೆ ಬಂದಿರುವ ಮಾಹಿತಿ ಪ್ರಕಾರ ಬರ್ಜಿಂದರ್ ಸಿಂಗ್ ಭುಲ್ಲಾರ್ ಅವರು ಸುಮಾರು 1 ವರ್ಷದ ಹಿಂದೆ ನಿವೃತ್ತರಾಗಿದ್ದರು. ಅವರು ನಿವೃತ್ತರಾದಾಗ, ಅವರ ಕೊನೆಯ ಪೋಸ್ಟಿಂಗ್ IRB ಅಲ್ಲಿ ಆಗಿತ್ತು. ಮೃತ ಡಿಎಸ್ಪಿ ಸರಭನಗರ ಪ್ರದೇಶದ ಗ್ರೀನ್ ಅವೆನ್ಯೂದಲ್ಲಿ ತನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದರೆ, ಅವರ ಪತ್ನಿ ತಮ್ಮ ಮಕ್ಕಳೊಂದಿಗೆ ವಿದೇಶದಲ್ಲಿ ನೆಲೆಸಿದ್ದಾರೆ.
ಮಾನಸಿಕವಾಗಿ ನೊಂದಿದ್ದ ಡಿಎಸ್‌ಪಿ: ಬರ್ಜಿಂದರ್ ಸಿಂಗ್ ಕೆಲಕಾಲ ಮಾನಸಿಕವಾಗಿ ನೊಂದಿದ್ದರು ಎಂದು ತಿಳಿದುಬಂದಿದೆ. ಆಗಾಗ ಮನೆಯಲ್ಲಿ ಒಬ್ಬರೇ ಕೋಣೆಯಲ್ಲಿ ಕೂರುತ್ತಿದ್ದರು. ನಿನ್ನೆ, ಕೋಣೆಯಲ್ಲಿ ಕುರ್ಚಿಯ ಮೇಲೆ ಕುಳಿತಾಗ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಗುಂಡಿನ ಸದ್ದು ಕೇಳಿದ ಪೋಷಕರು ಕೊಠಡಿಯನ್ನು ತಲುಪಿದಾಗ ಬರ್ಜಿಂದರ್ ಅವರ ದೇಹವು ಅವರ ಮುಂದೆ ಬಿದ್ದಿದ್ದು, ಈ ವೇಳೆ ಸ್ಥಳದಲ್ಲಿ ಪಿಸ್ತೂಲ್ ಸಹ ಪತ್ತೆಯಾಗಿದೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಓದಿ: ನಂದಿಬೆಟ್ಟಕ್ಕೆ ಬೈಕ್ನಲ್ಲಿ ತೆರಳುತ್ತಿದ್ದ ದಂಪತಿ ಮೇಲೆ ಹರಿದ ಟಿಪ್ಪರ್: ಹೆಂಡತಿ ಸಾವು, ಗಂಡ ಪಾರು