ETV Bharat / bharat

ಹೊಸದಾಗಿ ಗೆದ್ದ ಸಂಸದರು ಕೂಡಲೇ ಆ ಕೆಲಸ ಮಾಡಬೇಕಂತೆ!; ಏನದು ಇಂಪಾರ್ಟೆಂಟ್​​ ವರ್ಕ್​? - Lok Sabha Election Results 2024 - LOK SABHA ELECTION RESULTS 2024

Registration For New MPs : 18ನೇ ಲೋಕಸಭೆಗೆ ಹೊಸದಾಗಿ ಆಯ್ಕೆಯಾದ ಸದಸ್ಯರ ನೋಂದಣಿಗಾಗಿ ಲೋಕಸಭೆ ಸಚಿವಾಲಯವು ಕೌಂಟರ್‌ಗಳನ್ನು ಸ್ಥಾಪಿಸಿದೆ. ಈ ಕೌಂಟರ್‌ಗಳು ಸಂಸತ್ ಭವನದ ಸಂಕೀರ್ಣದಲ್ಲಿ ಜೂನ್ 5 - 14ರವರೆಗೆ ಪ್ರತಿದಿನ ಬೆಳಗ್ಗೆ 10 ರಿಂದ ರಾತ್ರಿ 8 ರವರೆಗೆ ಕಾರ್ಯನಿರ್ವಹಿಸುತ್ತವೆ.

REGISTRATION FOR NEW MPS  PARLIAMENT HOUSE  REGISTRATION COUNTERS
ಹೊಸದಾಗಿ ಗೆದ್ದ ಸಂಸದರು ಕೂಡಲೇ ಆ ಕೆಲಸ ಮಾಡಬೇಕಂತೆ (ಕೃಪೆ: Getty Images)
author img

By ETV Bharat Karnataka Team

Published : Jun 5, 2024, 9:02 AM IST

ನವದೆಹಲಿ: ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಹೊಸದಾಗಿ ಗೆದ್ದ ಸಂಸದರ ನೋಂದಣಿಗಾಗಿ ದೆಹಲಿಯ ಸಂಸತ್ ಭವನದ ಸಂಕೀರ್ಣದಲ್ಲಿ ಕೌಂಟರ್​ಗಳನ್ನು ತೆರೆಯಲಾಗಿದೆ. ಈ ನೋಂದಣಿ ಕೌಂಟರ್‌ಗಳು ಜೂನ್ 5-14 ರಿಂದ ಪ್ರತಿದಿನ ಬೆಳಗ್ಗೆ 10 ರಿಂದ ರಾತ್ರಿ 8 ರವರೆಗೆ ಕಾರ್ಯನಿರ್ವಹಿಸಲಿವೆ ಎಂದು ಲೋಕಸಭೆ ಸಚಿವಾಲಯ ತಿಳಿಸಿದೆ.

Registration For New MPs : ಕಾಗದದ ಬಳಕೆಯನ್ನು ಕಡಿಮೆ ಮಾಡಲು ಮತ್ತು ಸಂಸದರಿಗೆ ಅನುಕೂಲವಾಗುವಂತೆ ಆನ್‌ಲೈನ್ ಇಂಟಿಗ್ರೇಟೆಡ್ ಸಾಫ್ಟ್‌ವೇರ್ ಅಪ್ಲಿಕೇಶನ್ ಮೂಲಕ ನೋಂದಣಿ ಪ್ರಕ್ರಿಯೆಯನ್ನು ಮಾಡಲಾಗುತ್ತದೆ. ಹೊಸದಾಗಿ ಆಯ್ಕೆಯಾದ ಸಂಸದರು ಭೌತಿಕ ನಮೂನೆಗೆ ಸಹಿ ಮಾಡುವ ಅಗತ್ಯವಿಲ್ಲ. ಈ ಡಿಜಿಟಲೈಸ್ಡ್ ನೋಂದಣಿ ಸಮಯವನ್ನು ಉಳಿಸುತ್ತದೆ.

ಈ ಹಿಂದೆ ಹೊಸದಾಗಿ ಚುನಾಯಿತರಾದ ಸಂಸದರು ತಮ್ಮ ನೋಂದಣಿಯನ್ನು ಹಳೆಯ ಸಂಸತ್ ಕಟ್ಟಡದಲ್ಲಿ ಪೂರ್ಣಗೊಳಿಸುತ್ತಿದ್ದರು. ಈ ಹಂತದ ನೋಂದಣಿ ವ್ಯವಸ್ಥೆಗಳನ್ನು ಲೋಕಸಭೆಯ ಸಚಿವಾಲಯವು ಸಂಸತ್ ಭವನದ ಅನೆಕ್ಸ್‌ನಲ್ಲಿ ಏರ್ಪಡಿಸಿದೆ. ಚುನಾವಣಾ ಆಯೋಗವು ವೆಬ್‌ಸೈಟ್ ಪರಿಶೀಲಿಸಲು ಮತ್ತು ವಿಜೇತ ಅಭ್ಯರ್ಥಿಗಳ ವಿವರಗಳನ್ನು ಸಂಗ್ರಹಿಸಲು ತಂಡವನ್ನು ರಚಿಸಿದೆ.

ಸಾಫ್ಟ್‌ವೇರ್ ಅಪ್ಲಿಕೇಶನ್ ಮೂಲಕ, ತಂಡವು ವಿಜೇತ ಸಂಸದರು ಹೊಸದಾಗಿ ಆಯ್ಕೆಯಾಗಿದ್ದಾರೆಯೇ ಅಥವಾ ಹಿಂದಿನ ಚುನಾವಣೆಯಲ್ಲಿ ಗೆದ್ದಿದ್ದಾರೆಯೇ ಎಂದು ಪರಿಶೀಲಿಸುತ್ತದೆ. ಈ ಸಾರ್ವತ್ರಿಕ ಚುನಾವಣೆಯಲ್ಲಿ ಹೊಸದಾಗಿ ಆಯ್ಕೆಯಾದ ಸಂಸದರಿಗೆ ಅಧಿಕೃತ ನಿವಾಸಗಳನ್ನು ಮಂಜೂರು ಮಾಡುವವರೆಗೆ ಪಶ್ಚಿಮ ವಿಭಾಗದಲ್ಲಿ ವಾಸ್ತವ್ಯ ಹೂಡಲು ವ್ಯವಸ್ಥೆ ಮಾಡಲಾಗಿದೆ. ನೂತನ ಸಂಸದರ ವಸತಿ ವ್ಯವಸ್ಥೆಗೆ ಅಗತ್ಯಬಿದ್ದರೆ ರಾಜ್ಯದ ಕಟ್ಟಡಗಳನ್ನು ಮಂಜೂರು ಮಾಡುವ ಸಾಧ್ಯತೆ ಇದೆ.

NDA Vs India Alliance: ಇಂಡಿಯಾ ಮೈತ್ರಿ ಕೂಟವು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ NDAಗೆ ಕಠಿಣ ಸ್ಪರ್ಧೆ ನೀಡಿದೆ. 2019ಕ್ಕೆ ಹೋಲಿಸಿದರೆ ಎನ್‌ಡಿಎ ಸೀಟುಗಳನ್ನು ಕಡಿಮೆ ಮಾಡುವಲ್ಲಿ ಇಂಡಿಯಾ ಮೈತ್ರಿಕೂಟ ಯಶಸ್ವಿಯಾಗಿದೆ. ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿ ಸಾಕಷ್ಟು ಸ್ಥಾನಗಳನ್ನು ಕಳೆದುಕೊಂಡಿದೆ. ಈ ಎರಡೂ ರಾಜ್ಯಗಳಲ್ಲಿ ಉಂಟಾದ ಹಿನ್ನಡೆಯಿಂದಾಗಿಯೇ ಬಿಜೆಪಿ ಸ್ಪಷ್ಟಬಹುಮತ ಪಡೆಯುವಲ್ಲಿ ವಿಫಲವಾಗಿದೆ. ಆದರೂ, ಒಡಿಶಾದಲ್ಲಿ ಬಿಜೆಪಿಯು ಆಡಳಿತಾರೂಢ ಬಿಜೆಡಿಯನ್ನು ನೆಲಕ್ಕಚ್ಚುವಂತೆ ಮಾಡಿದ್ದು, ರಾಜ್ಯದಲ್ಲಿ ಹೆಚ್ಚಿನ ಸಂಸದರು ಆಯ್ಕೆ ಆಗಿ ಸಂಸತ್​​ಗೆ ತೆರಳುತ್ತಿದ್ದಾರೆ.

ದೆಹಲಿಯಲ್ಲಿ ಕಮಲ ಪಕ್ಷ ಮತ್ತೊಮ್ಮೆ ತನ್ನ ಶಕ್ತಿ ತೋರಿಸಿದೆ. ಪಂಜಾಬ್ ಹೊರತುಪಡಿಸಿ ಬೇರೆಲ್ಲೂ ಎಎಪಿ ಹೆಚ್ಚು ಪ್ರಭಾವ ಬೀರಲಿಲ್ಲ. ಅಲ್ಲದೇ, ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಗೆದ್ದಿದೆ. ಇನ್ನು ಆಂಧ್ರಪ್ರದೇಶದಲ್ಲಿ ಆಡಳಿತಾರೂಢ ವೈಸಿಪಿಗೆ ಶಾಕ್ ನೀಡುವ ಮೂಲಕ ಟಿಡಿಪಿ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದೆ. ಇತ್ತ ಕಾಂಗ್ರೆಸ್​ ಸರ್ಕಾರ ಇರುವ ಕರ್ನಾಟಕದಲ್ಲಿ ಎನ್​ಡಿಎ 19 ಸೀಟ್​ಗಳನ್ನು ತಮ್ಮದಾಗಿಸಿಕೊಂಡಿದೆ.

ಓದಿ: ಲೋಕಸಮರ: ಒಂದೇ ಕ್ಲಿಕ್​ನಲ್ಲಿ ರಾಜ್ಯದ 28 ಕ್ಷೇತ್ರಗಳ ಫಲಿತಾಂಶ - lok sabha election Results 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.