ETV Bharat / bharat

ಒಂದು ವಾರದ ಬಿಡುವಿನ ನಂತರ ಭಾರತ್ ಜೋಡೋ ನ್ಯಾಯ್ ಯಾತ್ರೆ ಶುರು: ಮಧ್ಯಪ್ರದೇಶಕ್ಕೆ ಪ್ರವೇಶ - ಭಾರತ್ ಜೋಡೋ ನ್ಯಾಯ್ ಯಾತ್ರೆ

7 ದಿನಗಳ ವಿರಾಮದ ನಂತರ ಭಾರತ್ ಜೋಡೋ ನ್ಯಾಯ ಯಾತ್ರೆ ಶನಿವಾರ ರಾಜಸ್ಥಾನದ ಧೋಲ್ಪುರದಿಂದ ಪುನಾರಂಭಗೊಂಡಿದೆ. ಸುಮಾರು 3 ಕಿಲೋಮೀಟರ್ ರೋಡ್ ಶೋ ನಂತರ ಯಾತ್ರೆ ಮಧ್ಯಪ್ರದೇಶ ಪ್ರವೇಶಿಸಿದೆ.

rahul-gandhis-bharat-jodo-nyay-yatra-leaves-
ಒಂದು ವಾರದ ಬಿಡುವಿನ ನಂತರ ಭಾರತ್ ಜೋಡೋ ನ್ಯಾಯ್ ಯಾತ್ರೆ ಶುರು: ಮಧ್ಯಪ್ರದೇಶಕ್ಕೆ ಪ್ರವೇಶ
author img

By ETV Bharat Karnataka Team

Published : Mar 2, 2024, 6:45 PM IST

ಧೋಲ್ಪುರ್, ರಾಜಸ್ಥಾನ: ಒಂದು ವಾರಗಳ ವಿರಾಮದ ಬಳಿಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ್ ಯಾತ್ರೆ ಶನಿವಾರ ಮಧ್ಯಾಹ್ನದಿಂದ ಪುನಾರಂಭಗೊಂಡಿದೆ. ಮಧ್ಯಾಹ್ನ ರಾಹುಲ್ ಗಾಂಧಿ ದೆಹಲಿಯಿಂದ ನೇರವಾಗಿ ಹೆಲಿಕಾಪ್ಟರ್ ಮೂಲಕ ಧೋಲ್ಪುರ ತಲುಪಿದ ರಾಹುಲ್​ ಗಾಂಧಿ ಯಾತ್ರೆಯನ್ನು ಆರಂಭಿಸಿದರು. ರಾಜಖೇಡ ಬೈಪಾಸ್‌ನಿಂದ ತೆರೆದ ವಾಹನದಲ್ಲಿ ಕಾಂಗ್ರೆಸ್​​​​​ ನೇತಾರ ರಾಹುಲ್​ ಗಾಂಧಿ ರೋಡ್ ಶೋ ಆರಂಭಿಸಿದರು. ರಾಹುಲ್ ಗಾಂಧಿ ಧೋಲ್ಪುರದಲ್ಲಿ ಸುಮಾರು 3 ಕಿಲೋಮೀಟರ್ ರೋಡ್ ಶೋ ನಡೆಸಿ, ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದರು. ದೋಲ್ಪುರದಿಂದ ಯಾತ್ರೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಗಡಿ ಪ್ರವೇಶಿಸಿದೆ.

ಕಾಂಗ್ರೆಸ್ ಹಿರಿಯ ನಾಯಕ ಮತ್ತು ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಪಾಲ್ಗೊಳ್ಳಲು ಶನಿವಾರ ಧೋಲ್ಪುರಕ್ಕೆ ತಲುಪಿದ್ದರು. ಈ ವೇಳೆ, ಅವರು ಅಲ್ಲಿನ ಸರ್ಕ್ಯೂಟ್ ಹೌಸ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಆದರೆ, ಮಧ್ಯಾಹ್ನದ ನಂತರ, ರಾಹುಲ್ ಗಾಂಧಿ ಅವರೊಂದಿಗೆ ಕಾಣಿಸಿಕೊಳ್ಳಲಿಲ್ಲ.

ಆದರೆ, ರಾಹುಲ್ ಗಾಂಧಿ ಅವರೊಂದಿಗೆ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಪಿಸಿಸಿ ಮುಖ್ಯಸ್ಥ ಗೋವಿಂದ್ ಸಿಂಗ್ ದೋಟಸಾರಾ, ಸುಖವಿಂದರ್ ಸಿಂಗ್ ರಾಂಧವಾ, ರಾಜಖೇಡಾ ಶಾಸಕ ರೋಹಿತ್ ಬೋಹ್ರಾ, ಧೋಲ್‌ಪುರ ಶಾಸಕ ಶೋಭಾರಾಣಿ ಕುಶ್ವಾಹಾ ಮತ್ತು ಬಸೇರಿ ಶಾಸಕ ಸಂಜಯ್ ಜಾತವ್ ರೋಡ್ ಶೋನಲ್ಲಿ ಭಾಗಿಯಾದರು. ಸಚಿನ್ ಪೈಲಟ್ ಮೊರೆನಾಗೆ ತೆರಳಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ. ಮೊರೆನಾದಲ್ಲಿ ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ್ ಯಾತ್ರೆಯ ರೋಡ್ ಶೋ ನಡೆಯಲಿದೆ.

ರಾಹುಲ್ ಗಾಂಧಿ ನೋಡಲು ಜನಸಾಗರ: ರಾಹುಲ್ ಗಾಂಧಿ ಅವರ ರೋಡ್ ಶೋ ಧೋಲ್ಪುರ ನಗರದ ರಾಜಖೇಡಾ ಬೈಪಾಸ್ ನಿಂದ ಸಾಗರ್ ಪಾದ ಚೆಕ್ ಪೋಸ್ಟ್ ವರೆಗೆ ನಡೆಯಿತು. ಈ ವೇಳೆ ರಾಹುಲ್ ಗಾಂಧಿ ಅವರನ್ನು ನೋಡಲು ನಗರದ ನಿವಾಸಿಗಳು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಸರ್ವೀಸ್ ರಸ್ತೆಯಲ್ಲಿ ರೋಡ್ ಶೋ ನಡೆದರೂ ಆಗ್ರಾ - ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.

ರಾಹುಲ್​ ಗಾಂಧಿ ಅವರನ್ನು ನೋಡಲು ಮಹಿಳೆಯರು, ಪುರುಷರು ಮತ್ತು ಮಕ್ಕಳು ಸಹ ಛಾವಣಿ ಮೇಲೆ ಹತ್ತಿದರು. ಇದಲ್ಲದೇ ಹೆದ್ದಾರಿಯಲ್ಲೂ ಜನಸಾಗರ ಕಂಡು ಬಂತು. ಜನಸಂದಣಿ ನಿಯಂತ್ರಿಸಲು ಪೊಲೀಸರು ಮತ್ತು ಆಡಳಿತ ಮಂಡಳಿ ಹರಸಾಹಸ ಪಟ್ಟರು. ಧೋಲ್ಪುರದಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ರೋಡ್ ಶೋ ಆಯೋಜಿಸಲಾಗಿತ್ತು. ಇದಾದ ಬಳಿಕ ಭಾರತ್ ಜೋಡೋ ನ್ಯಾಯ್ ಯಾತ್ರೆ ಮಧ್ಯಪ್ರದೇಶಕ್ಕೆ ಎಂಟ್ರಿ ಕೊಟ್ಟಿದೆ.

ಇದನ್ನು ಓದಿ: ಬಿಆರ್​ಎಸ್​ ತಿರಸ್ಕರಿಸಿದ್ದ ಕೇಂದ್ರದ ಬೆಳೆ ವಿಮೆ ಯೋಜನೆಗೆ ಮರು ಸೇರ್ಪಡೆಗೊಂಡ ತೆಲಂಗಾಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.