ಜಮ್ಮು ಕಾಶ್ಮೀರ: ಕಣಿವೆ ನಾಡಿನಲ್ಲಿ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತಯಾರಿ ಆರಂಭಿಸಿದೆ. ಇತ್ತೀಚಿಗಷ್ಟೇ ಎನ್‌ಸಿಪಿ ಜೊತೆಗಿನ ಮೈತ್ರಿ ಬಳಿಕ ಕೈ ಪಕ್ಷ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿತ್ತು. ಇದೀಗ ಅಧಿಕೃತ ಪ್ರಚಾರ ಕಾರ್ಯಕ್ಕೆ ಮುಂದಾಗಿದೆ. ಇಂದು ರಾಹುಲ್ ಗಾಂಧಿ ಎರಡು ಕಡೆ ಪ್ರಚಾರ ಸಭೆ ನಡೆಸಲಿದ್ದಾರೆ.
ಮೂರು ಹಂತದಲ್ಲಿ ನಡೆಯಲಿರುವ ಚುನಾವಣೆಯ ಮೊದಲ ಹಂತದ ಕ್ಷೇತ್ರದಲ್ಲಿ ರಾಹುಲ್ ಸಮಾವೇಶ ನಡೆಸಲಿದ್ದಾರೆ. ಇದಕ್ಕಾಗಿ ಅವರು ವಿಶೇಷ ವಿಮಾನದ ಜಮ್ಮು ಮತ್ತು ಕಾಶ್ಮೀರ ವಿಮಾನ ನಿಲ್ದಾಣಕ್ಕೆ ಬಂದಿಳಿಯುವರು. ಬಳಿಕ ಹೆಲಿಕಾಪ್ಟರ್ ಮೂಲಕ ರಾಂಬನ್ ಜಿಲ್ಲೆಯ ಸಂಗಲ್ದನ್‌ಗೆ ತೆರಳುವರು. ಅಲ್ಲಿ ಪಕ್ಷದ ಅಭ್ಯರ್ಥಿ ವಿಕರ್ ರಸೂಲ್ ವಾನಿ ಪರ ಮತಯಾಚಿಸಲಿದ್ದಾರೆ. ಸಂಗಲ್ದನ್ ಜಮ್ಮು ವಿಭಾಗದ ರಾಂಬನ್ ಜಿಲ್ಲೆಯ ಬನಿಹಾಲ್ ವಿಧಾನಸಭಾ ಕ್ಷೇತ್ರದ ಭಾಗವಾಗಿದೆ.
ಪ್ರಸಕ್ತ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಜೊತೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್, ಬನಿಹಾಲ್ ಕ್ಷೇತ್ರದ ಸೀಟು ಹಂಚಿಕೆಯಲ್ಲಿ ಎನ್‌ಸಿ ಜೊತೆ ಒಮ್ಮತದ ಒಪ್ಪಂದಕ್ಕೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಎನ್‌ಸಿ ಎರಡೂ ಪಕ್ಷದಿಂದಲೂ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ.
ಇಂದು 11 ಗಂಟೆಗೆ ರಾಂಬನ್ ಕ್ಷೇತ್ರದಲ್ಲಿ ಪ್ರಚಾರ ನಡೆಲಿರುವ ರಾಹುಲ್, ಬಳಿಕ 12.30ರ ಸುಮಾರಿಗೆ ಸಂಗಲ್ದನ್‌ನಿಂದ ಅನಂತನಾಗ್ ಜಿಲ್ಲೆಯ ದೂರು ವಿಧಾನಸಭಾ ಕ್ಷೇತ್ರದಲ್ಲಿ ಜಿ.ಎ.ಮಿರ್ ಪರ ಕ್ಯಾಂಪೇನ್ ಮಾಡುವರು.
ಮುಂರುವ ದಿನಗಳಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ವರಿಷ್ಠ ನಾಯಕಿ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಲವು ನಾಯಕರು ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ.
ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಕಾಶ್ಮೀರದಲ್ಲಿ ಮೂರು ಹಂತದಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತಕ್ಕೆ ಸೆಪ್ಟೆಂಬರ್ 18ರಂದು ಮತದಾನ ನಡೆಯಲಿದೆ.
ಚುನಾವಣಾಪೂರ್ವ ಮೈತ್ರಿಯ ಪ್ರಕಾರ, ಎನ್‌ಸಿ 52 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ 31 ಸ್ಥಾನದಲ್ಲಿ ಸ್ಪರ್ಧಿಸಲಿದೆ. ಇನ್ನುಳಿದಂತೆ, ಇಂಡಿಯಾ ಕೂಟದಿಂದ ಎರಡು ಸ್ಥಾನ, ಸಿಪಿಐ(ಎಂ) ಮತ್ತು ಪ್ಯಾಂಥರ್ಸ್ ಪಕ್ಷಕ್ಕೆ ಒಂದು ಸ್ಥಾನ ಬಿಟ್ಟುಕೊಡಲಾಗಿದೆ.(ಐಎಎನ್ಎಸ್)
ಇದನ್ನೂ ಓದಿ: ಕಾಶ್ಮೀರ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗೆ 5 ತಿಂಗಳ ಜೈಲು ಶಿಕ್ಷೆ, ಪಕ್ಷಕ್ಕೆ ತೀವ್ರ ಮುಜುಗರ