ಇಂಫಾಲ(ಮಣಿಪುರ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಮಣಿಪುರಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡುತ್ತಾ, ಜನಾಂಗೀಯ ಕಲಹಪೀಡಿತ ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮಿಸಿ ಜನರಿಗೆ ಸಾಂತ್ವನ ಹೇಳಬೇಕು ಎಂದು ಒತ್ತಾಯಿಸಿದರು.
ಮಣಿಪುರದಲ್ಲಿ ಶಾಂತಿ ನೆಲೆಸುವಂತಾಗಲು ಎಲ್ಲ ರೀತಿಯ ಸಹಾಯ ನೀಡಲು ಕಾಂಗ್ರೆಸ್ ಸಿದ್ಧವಿದೆ. ಈ ನಿಟ್ಟಿನಲ್ಲಿ ಸರ್ಕಾರದ ಯಾವುದೇ ಕ್ರಮವನ್ನು ಪಕ್ಷ ಬೆಂಬಲಿಸುತ್ತದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
मणिपुर की इस भयंकर त्रासदी में, मैं प्रधानमंत्री जी से अनुरोध करता हूं कि वो यहां आएं, लोगों की बात सुनें और उन्हें सांत्वना दें।
— Rahul Gandhi (@RahulGandhi) July 8, 2024
INDIA जनबंधन ऐसे हर कदम में सहायता करने को तैयार है जिससे स्थिति में सुधार हो सके और शांति बहाल हो सके। pic.twitter.com/rTT4cxSZi0
ಕಳೆದ ವರ್ಷದ ಮೇ ತಿಂಗಳಿನಲ್ಲಿ ಹಿಂಸಾಚಾರ ಪ್ರಾರಂಭವಾದ ನಂತರ ಮಣಿಪುರಕ್ಕಿದು ನನ್ನ ಮೂರನೇ ಭೇಟಿ. ಆದರೆ, ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ. ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಹಿಂಸಾಚಾರ 200ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದಿದೆ'' ಎಂದು ತಿಳಿಸಿದರು.
ಇದಕ್ಕೂ ಮುನ್ನ ಮೂರು ಪರಿಹಾರ ಶಿಬಿರಗಳಿಗೆ ಭೇಟಿ ನೀಡಿದ ರಾಹುಲ್, ಹಿಂಸಾಚಾರದಿಂದ ನಿರಾಶ್ರಿತರಾದ ಎರಡೂ ಜನಾಂಗೀಯ ಗುಂಪುಗಳ ಸದಸ್ಯರೊಂದಿಗೆ ಸಂವಾದ ನಡೆಸಿದರು.
"ಪ್ರಧಾನಿ ಬಹಳ ಹಿಂದೆಯೇ ರಾಜ್ಯಕ್ಕೆ ಭೇಟಿ ನೀಡಬೇಕಿತ್ತು. ಅವರು ಇಲ್ಲಿಗೆ ಬರುವುದರಿಂದ ಜನರಿಗೆ ಧೈರ್ಯ ಬರುತ್ತದೆ" ಎಂದು ರಾಹುಲ್ ಗಾಂಧಿ ತಿಳಿಸಿದರು.
ಇದನ್ನೂ ಓದಿ: ಜಮ್ಮುವಿನ ಕಥುವಾದಲ್ಲಿ ಭೀಕರ ಉಗ್ರ ದಾಳಿ: ಐವರು ಯೋಧರು ಹುತಾತ್ಮ, ಹಲವರಿಗೆ ಗಾಯ - MILITANTS ATTACKED