ETV Bharat / bharat

ಯಾವಾಗಲೂ ಬಿಳಿ ಟಿ ಶರ್ಟ್ ಧರಿಸುವುದೇಕೆ? ರಾಹುಲ್​ ಗಾಂಧಿ ಉತ್ತರ ಇದು - Rahul Gandhi

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 'ಭಾರತ್ ಜೋಡೋ ಯಾತ್ರೆ' ಕೈಗೊಂಡಾಗಿನಿಂದಲೂ ರಾಹುಲ್ ಗಾಂಧಿ ಬಿಳಿ ಟಿ ಶರ್ಟ್‌ಗಳನ್ನೇ ಧರಿಸುತ್ತಿದ್ದಾರೆ. ಇದಕ್ಕೇನು ಕಾರಣ?.

ರಾಹುಲ್​ ಗಾಂಧಿ
ರಾಹುಲ್​ ಗಾಂಧಿ (ANI)
author img

By PTI

Published : May 6, 2024, 8:20 AM IST

ನವದೆಹಲಿ: ರಾಹುಲ್ ಗಾಂಧಿ ಯಾವಾಗಲೂ ಏಕೆ ಬಿಳಿ ಟಿ ಶರ್ಟ್ ಧರಿಸುತ್ತಾರೆ?, ಇದಕ್ಕೆ ಕಾಂಗ್ರೆಸ್ ನಾಯಕನಿಗೆ ಒಂದಲ್ಲ ಎರಡು ಕಾರಣಗಳಿವೆಯಂತೆ. ಅವರೇ ಹೇಳಿರುವಂತೆ ಒಂದನೇ ಕಾರಣ ಪಾರದರ್ಶಕತೆ ಮತ್ತು ಎರಡನೇ ಕಾರಣ ಸರಳತೆ. ಕಾಂಗ್ರೆಸ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿರುವ ಎರಡು ನಿಮಿಷಗಳ ವಿಡಿಯೋದಲ್ಲಿ ರಾಹುಲ್ ಗಾಂಧಿ ಇಂತಹ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿ ರಾಜಕೀಯದಲ್ಲಿ ಸಿದ್ಧಾಂತದ ಪ್ರಾಮುಖ್ಯತೆಯ ಬಗ್ಗೆ ಮಾತನಾಡುತ್ತಾ, "ನನ್ನ ದೃಷ್ಟಿಯಲ್ಲಿ ಸಿದ್ಧಾಂತದ ಸ್ಪಷ್ಟ ತಿಳುವಳಿಕೆಯಿಲ್ಲದೆ ನೀವು ಅಧಿಕಾರದ ಕಡೆಗೆ ದೊಡ್ಡ ಸಂಘಟನೆಯಾಗಿ ಹೋಗಲು ಸಾಧ್ಯವಿಲ್ಲ. ಬಡವರ ಪರ, ಮಹಿಳೆಯರ ಪರ, ಬಹುವಚನ ಬಳಕೆ, ಎಲ್ಲರನ್ನೂ ಸಮಾನವಾಗಿ ಪರಿಗಣಿಸುವ ನಮ್ಮ ಸಿದ್ಧಾಂತವನ್ನು ನಾವು ಜನರಿಗೆ ಮನವರಿಕೆ ಮಾಡಬೇಕು. ಆದ್ದರಿಂದ ನಮ್ಮ ಹೋರಾಟ ಸಾಂಸ್ಥಿಕ ಮಟ್ಟದಲ್ಲಿ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಯಾವಾಗಲೂ ಸಿದ್ಧಾಂತಕ್ಕೆ ಸಂಬಂಧಿಸಿದೆ" ಎಂದು ವಿವರಿಸಿದರು.

ಭಾರತ್ ಜೋಡೋ ಯಾತ್ರೆಯ ನಂತರ ಬಿಳಿ ಟಿ ಶರ್ಟ್ ರಾಹುಲ್ ಗಾಂಧಿ 'ಟ್ರೇಡ್‌ಮಾರ್ಕ್' ಆಗಿದೆ. ಇದಕ್ಕೇನು ಕಾರಣ ಎಂದು ಕೇಳಿದ್ದಕ್ಕೆ, "ಬಿಳಿ ಟಿ ಶರ್ಟ್​ ಪಾರದರ್ಶಕತೆ ಹಾಗು ಸರಳತೆಯನ್ನು ತಿಳಿಸುತ್ತದೆ. ನಾನು ಬಟ್ಟೆಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ. ಆದಷ್ಟು ಸರಳವಾಗಿರಲು ಇಷ್ಟಪಡುತ್ತೇನೆ" ಎಂದರು.

ವಿಡಿಯೋದಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರಿಗೆ, ''ಮತ ಪ್ರಚಾರದಲ್ಲಿ ನೀವೇನು ಇಷ್ಟಪಡುತ್ತೀರಿ ಹಾಗು ಏನು ಇಷ್ಟಪಡುವುದಿಲ್ಲ?'' ಎಂದು ಕೇಳುತ್ತಾರೆ. ಇದಕ್ಕೆ ಖರ್ಗೆ ಪ್ರತಿಕ್ರಿಯಿಸಿ, "ಯಾವುದೇ ಕೆಟ್ಟದ್ದನ್ನು ಇಷ್ಟಪಡುವುದಿಲ್ಲ. ದೇಶವನ್ನು ಹಾಳು ಮಾಡುವವರನ್ನು ತಡೆಯುವ ಕೆಲಸ ಮಾಡಿದಾಗ ನಮಗೆ ಒಳ್ಳೆಯದಾಗುತ್ತದೆ. ಕನಿಷ್ಠ ದೇಶಕ್ಕಾಗಿ ಏನಾದರೂ ಮಾಡುತ್ತಿದ್ದೇವೆ ಎಂಬುದನ್ನು ಯೋಚಿಸಬೇಕಿದೆ" ಎಂದರು.

ಇದೇ ವಿಡಿಯೋದಲ್ಲಿ ರಾಜಕೀಯ ಸಿದ್ಧಾಂತದ ಮಹತ್ವದ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ''ನೀವು ಪಕ್ಷದ ಸಿದ್ಧಾಂತವನ್ನು ಜನರ ಮುಂದಿಡಬೇಕು. ಆಗ ಮಾತ್ರ ಜನರು ನಮ್ಮ ನಿಲುವನ್ನು ಖಂಡಿತವಾಗಿಯೂ ಮೆಚ್ಚುತ್ತಾರೆ'' ಎಂದು ತಿಳಿಸಿದ್ದಾರೆ.

''ಅಧಿಕಾರ ಬರುತ್ತದೆ, ಹೋಗುತ್ತದೆ. ಆದರೆ ಸಿದ್ಧಾಂತಕ್ಕೆ ಬದ್ಧರಾಗಿ ಉಳಿಯುವುದು ದೊಡ್ಡ ವಿಷಯ. ಅದಕ್ಕಾಗಿ ನಮ್ಮ ನಾಯಕರು ತ್ಯಾಗ ಮಾಡಿದ್ದಾರೆ'' ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಇದನ್ನೂ ಓದಿ: 140 ಕೋಟಿ ಜನರ ಮನಸ್ಸಿನಲ್ಲಿ ನಂಬಿಕೆ, ವಿಶ್ವಾಸ ಮರುಸ್ಥಾಪಿಸಿರುವುದು ನಮ್ಮ ಸಾಧನೆ: ಪ್ರಧಾನಿ ಮೋದಿ - PM Modi Interview

ETV Bharat Logo

Copyright © 2024 Ushodaya Enterprises Pvt. Ltd., All Rights Reserved.