ETV Bharat / bharat

ಅಧಿಕಾರ ದುರ್ಬಳಕೆ ಆರೋಪ: ಪ್ರೊಬೇಷನರಿ ಅವಧಿಯಲ್ಲೇ ಐಎಎಸ್​ ಅಧಿಕಾರಿ ಎತ್ತಂಗಡಿ! - Pune trainee IAS officer - PUNE TRAINEE IAS OFFICER

ಅಧಿಕಾರ ವ್ಯಾಪ್ತಿ ಮತ್ತು ನಿಯಮಾವಳಿಗಳನ್ನು ಮೀರಿದ ಪ್ರೊಬೇಷನರಿ ಅವಧಿಯಲ್ಲಿರುವ ಐಎಎಸ್​ ಅಧಿಕಾರಿಯನ್ನು ಮಹಾರಾಷ್ಟ್ರ ಸರ್ಕಾರ ಎತ್ತಂಗಡಿ ಮಾಡಿದೆ. ಪೂರ್ಣ ಅಧಿಕಾರಿ ಪಡೆಯುವ ಮುನ್ನವೇ ಅವರು ಮೊದಲ ವರ್ಗ ಶಿಕ್ಷೆಗೆ ಒಳಗಾಗಿದ್ದಾರೆ.

ಪ್ರೊಬೇಷನರಿ  ಅವಧಿಯಲ್ಲೇ ಐಎಎಸ್​ ಅಧಿಕಾರಿ ಎತ್ತಂಗಡಿ
ಪ್ರೊಬೇಷನರಿ ಅವಧಿಯಲ್ಲೇ ಐಎಎಸ್​ ಅಧಿಕಾರಿ ಎತ್ತಂಗಡಿ (ANI)
author img

By ETV Bharat Karnataka Team

Published : Jul 11, 2024, 4:30 PM IST

ಪುಣೆ (ಮಹಾರಾಷ್ಟ್ರ): ಪ್ರೊಬೇಷನರಿ ಅವಧಿಯಲ್ಲಿರುವ ಐಎಎಸ್​ ಅಧಿಕಾರಿ ಮೇಲೆ ಅಧಿಕಾರ ದುರ್ಬಳಕೆ ಆರೋಪ ಕೇಳಿ ಬಂದಿದೆ. ಇದರಿಂದ ಅವರನ್ನು ಸದ್ಯ ನಿಯೋಜಿಸಲಾಗಿರುವ ಇಲಾಖೆಯಿಂದ ಮತ್ತೊಂದು ಇಲಾಖೆಗೆ ವರ್ಗ ಮಾಡಲಾಗಿದೆ. ಪೂರ್ಣಾವಧಿ ಅಧಿಕಾರ ವಹಿಸಿಕೊಳ್ಳುವ ಮುನ್ನವೇ ಎತ್ತಂಗಡಿ ಶಿಕ್ಷೆ ಅನುಭವಿಸಿದ್ದಾರೆ.

ಕೇಂದ್ರ ಸೇವಾ ಆಯೋಗದ ಪರೀಕ್ಷೆಯಲ್ಲಿ (ಯುಪಿಎಸ್​ಸಿ) 821ನೇ ರ್ಯಾಂಕ್​ ಪಡೆದಿದ್ದ ಪೂಜಾ ಖೇಡ್ಕರ್​ ವರ್ಗವಾದ ಮಹಿಳಾ ಅಧಿಕಾರಿ. ಪುಣೆಯ ಸಹಾಯಕ ಜಿಲ್ಲಾಧಿಕಾರಿಯಾಗಿದ್ದ ಪೂಜಾ ಅವರು ತಮ್ಮ ಖಾಸಗಿ ಕಾರಿನಲ್ಲಿ ಮೇಲೆ ಐಎಎಸ್​ ಅಧಿಕಾರಿಗಳಿಗೆ ಸಿಗುವ ಕೆಂಪು ನೀಲಿ ಬಣ್ಣದ ದೀಪವನ್ನು ಅಳವಡಿಸಿಕೊಂಡಿದ್ದರು. ಜೊತೆಗೆ ಕಾರಿನ ನಂಬರ್ ಪ್ಲೇಟ್​ ಮೇಲೆ 'ಮಹಾರಾಷ್ಟ್ರ ಸರ್ಕಾರ' ಎಂದು ಬರೆಸಿಕೊಂಡಿದ್ದರು. ಇದ್ಯಾವುದೂ ಪ್ರೊಬೇಷನರಿ ಅವಧಿಯಲ್ಲಿರುವ ಅಧಿಕಾರಿಗಳಿಗೆ ಸಿಗುವ ಸೌಲಭ್ಯಗಳಲ್ಲ. ಆದಾಗ್ಯೂ ಪೂಜಾ ಅವರು ಈ ಎಲ್ಲ ನಿಯಮಗಳನ್ನು ಮೀರಿದ್ದರು.

ಜೊತೆಗೆ, ಅನುಮತಿಯಿಲ್ಲದೇ ಹೆಚ್ಚುವರಿ ಜಿಲ್ಲಾಧಿಕಾರಿ ಅಜಯ್ ಮೋರ್ ಅವರ ಕಚೇರಿಯನ್ನು ತಮ್ಮ ವಶಕ್ಕೆ ಪಡೆದಿದ್ದರು. ಒಪ್ಪಿಗೆಯಿಲ್ಲದೆ ಕಚೇರಿ ಪೀಠೋಪಕರಣಗಳನ್ನು ಅಲ್ಲಿಂದ ಸಾಗಿಸಿ, ಇತರ ಸೌಲಭ್ಯಗಳುಳ್ಳ ವಸ್ತುಗಳಿಗೆ ಬೇಡಿಕೆ ಇಟ್ಟಿದ್ದರು.

ಈ ಬಗ್ಗೆ ಪುಣೆ ಜಿಲ್ಲಾಧಿಕಾರಿ ಸುಹಾಸ್ ದಿವಾಸೆ ಅವರು ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ಪ್ರೊಬೇಷನರಿ ಐಎಎಸ್​ ಅಧಿಕಾರಿ ಪೂಜಾ ಖೇಡ್ಕರ್ ಅವರು ನಿಯಮಬಾಹಿರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದರು. ತಕ್ಷಣವೇ ಸರ್ಕಾರ, ಪೂಜಾರನ್ನು ಪುಣೆಯಿಂದ ವಾಶಿಮ್ ಜಿಲ್ಲೆಗೆ ವರ್ಗಾಯಿಸಲಾಗಿದೆ. ಅವರಿಗೆ ಸೂಪರ್ ನ್ಯೂಮರರಿ ಸಹಾಯಕ ಜಿಲ್ಲಾಧಿಕಾರಿ ಆಗಿ ನಿಯೋಜಿಸಲಾಗಿದೆ.

ಮಗಳಿಗೆ ನಿವೃತ್ತ ಅಧಿಕಾರಿ ತಂದೆ ಬೆಂಬಲ: ಪೂಜಾ ಖೇಡ್ಕರ್​ ಅವರ ತಂದೆ ನಿವೃತ್ತ ಅಧಿಕಾರಿಯಾಗಿದ್ದಾರೆ. ಅವರು ಇತ್ತೀಚೆಗೆ ಮುಗಿದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಪೂಜಾ ಅವರ ಬೇಡಿಕೆಗಳನ್ನು ಪೂರೈಸುವಂತೆ ಪುಣೆ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗೆ ಒತ್ತಡ ಹಾಕಿದ್ದರು ಎಂಬ ಆರೋಪವೂ ಕೇಳಿ ಬಂದಿದೆ.

ಅಲ್ಲದೇ, ಪೂಜಾ ಅವರು ನೇಮಕದ ವೇಳೆ ಸಲ್ಲಿಸಿದ ದಾಖಲೆಗಳು ತಪ್ಪಾಗಿವೆ. ಹಿಂದುಳಿದ ಮೀಸಲಾತಿ ಕೋಟಾದಲ್ಲಿ ಅವರು ಹುದ್ದೆ ಪಡೆದಿದ್ದಾರೆ. ಆದರೆ, ಅವರ ತಂದೆ ಚುನಾವಣೆ ಅಫಿಡವಿಟ್​ನಲ್ಲಿ 40 ಕೋಟಿ ರೂಪಾಯಿ ಆದಾಯ ಘೋಷಿಸಿದ್ದಾರೆ. ಇದು ಸರ್ಕಾರಿ ಕೋಟಾಗೆ ವಿರುದ್ಧವಾಗಿದೆ ಈ ಬಗ್ಗೆಯೂ ತನಿಖೆ ನಡೆಯಬೇಕು ಎಂದು ಸಾಮಾಜಿಕ ಕಾರ್ಯಕರ್ತ ಹೋರಾಟಗಾರರೊಬ್ಬರು ಮಹಾರಾಷ್ಟ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ; ಸಬ್​​ಇನ್ಸ್​ಪೆಕ್ಟರ್​ ಆಗಿ ಆಯ್ಕೆಯಾದ ತೃತೀಯಲಿಂಗಿ: ದೇಶದಲ್ಲೇ ಇದು ಮೊದಲು - Manvi Madhu

ETV Bharat Logo

Copyright © 2025 Ushodaya Enterprises Pvt. Ltd., All Rights Reserved.