ನವದೆಹಲಿ: ಮೂರನೇ ಬಾರಿ ಪ್ರಧಾನಿ ಮಂತ್ರಿಯಾದ ಬಳಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೊದಲ ಬಾರಿಗೆ ನಾಳೆ ಕಾಶಿಗೆ ಭೇಟಿ ನೀಡಲಿದ್ದಾರೆ. ಸತತ ಮೂರನೇ ಬಾರಿ ಈ ಕ್ಷೇತ್ರದಿಂದ ಅವರು ಗೆಲುವು ಸಾಧಿಸಿದ್ದಾರೆ. ಪ್ರಧಾನಿ ಆಗಮನದ ಹಿನ್ನೆಲೆ ದೇಗುಲದ ಆಡಳಿತ ಮಂಡಳಿ ಎಲ್ಲಾ ರೀತಿಯ ಸಿದ್ಧತೆ ನಡೆಸಿದ್ದು, ಈ ದೊಡ್ಡ ಘಟನೆ ಸರಾಗವಾಗಿ ನಡೆಸಲು ಯೋಜಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆ ದೇಗುಲವನ್ನು ಹೂವುಗಳಿಂದ ಅಲಂಕರಿಸಲಾಗಿದೆ. ಪ್ರಧಾನಿ ಆಗಮನ ಹಿನ್ನೆಲೆ ಪ್ರೊಟೋಕಾಲ್ ಅನ್ನು ಪಡೆಯಲಾಗಿದೆ ಎಂದು ಕಾಶಿ ವಿಶ್ವನಾಥ ಟ್ರಸ್ಟ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶ್ವ ಭೂಷಣ್ ಮಿಶ್ರಾ ತಿಳಿಸಿದ್ದಾರೆ.
ಕಳೆದ ಬಾರಿ ಪ್ರಧಾನಿ ಮಂತ್ರಿ ಗಂಗಾ ಸಪ್ತಮಿಯ ವಿಶೇಷ ಸಂದರ್ಭದಲ್ಲಿ ಕಾಶಿಗೆ ಆಗಮಿಸಿದ್ದರು. ಇದೀಗ ಅವರು ಮೂರು ದಿನಗಳ ಗಂಗಾ ದಸರಾ ಸಂಭ್ರಮದ ಬಳಿಕ ಭೇಟಿ ನೀಡುತ್ತಿದ್ದು, ಇಲ್ಲಿ 25 ನಿಮಿಷ ಸಮಯ ಕಳೆಯಲಿದ್ದಾರೆ.
ಯಾವುದೇ ಪ್ರಮುಖ ವ್ಯಕ್ತಿಗಳು ದೇಗುಲಕ್ಕೆ ಭೇಟಿನೀಡಿದಾಗ ದೇಗುಲದಿಂದ ಡಮರುಗ ಮತ್ತು ಶಂಖನಾದ ಹಾಗೂ ಮಂತ್ರಗಳ ಪಠಣೆ ಮೂಲಕ ಅವರನ್ನು ಸ್ವಾಗತಿಸಲಾಗುವುದು. ಬಳಿಕ ಕಾಶಿ ವಿಶ್ವನಾಥನಿಗೆ ಪ್ರಾರ್ಥನೆ ಸಲ್ಲಿಸಲಾಗುವುದು. ಈ ನಿಟ್ಟಿನಲ್ಲಿ ನಾವು ಸಜ್ಜಾಗಿದ್ದು, ಅವರನ್ನು ಸಂಪ್ರದಾಯದ ಅನುಸಾರ ಸ್ವಾಗತಿಸಲಾಗುವುದು. ಇದೇ ವೇಳೆ ಭಕ್ತರಿಗೆ ದರ್ಶನಕ್ಕೆ ಯಾವುದೇ ಅನಾನುಕೂಲತೆ ಆಗದಂತೆ ಕ್ರಮ ವಹಿಸಲಾಗಿದೆ ಎಂದು ಸಿಇಒ ತಿಳಿಸಿದ್ದಾರೆ.
ಕಾಶಿ ವಿಶ್ವನಾಥನ ದರ್ಶನಕ್ಕೆ ಮುನ್ನ ನರೇಂದ್ರ ಮೋದಿ ಅವರು, ಕಿಸಾನ್ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ. ಕಿಸಾನ್ ಸಮ್ಮಾನ್ ನಿಧಿಯ 17ನೇ ಕಂತಿನ ಹಣ ಬಿಡುಗಡೆ ಮಾಡಲಿದ್ದಾರೆ. ಇದರಿಂದ ಕಾಶಿಯ 2,67,665 ರೈತರಿಗೆ ಪ್ರಯೋಜನ ಸಿಗಲಿದೆ. ಇದೇ ವೇಳೆ 21 ರೈತರನ್ನು ಭೇಟಿಯಾಗಿ ಅವರ ಉತ್ಪನ್ನಗಳ ಕುರಿತು ಪ್ರಧಾನಿ ಮಾಹಿತಿ ಪಡೆಯಲಿದ್ದಾರೆ.
ರೈತರ ಭೇಟಿ ಬಳಿಕ ಕಾಶಿ ವಿಶ್ವನಾಥ ದೇಗುಲಕ್ಕೆ ಭೇಟಿ ನೀಡಿ, ದಶಶ್ವಮೇದ ಘಾಟ್ನಲ್ಲಿ ಗಂಗಾ ಆರತಿಯಲ್ಲಿ ಭಾಗಿಯಾಲಿದ್ದಾರೆ.
ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಾರಾಣಸಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರಾಯ್ ಅವರನ್ನು 1,52,513 ಮತಗಳಿಂದ ಸೋಲಿಸಿದ್ದರು. (ಐಎಎನ್ಎಸ್)
ಇದನ್ನೂ ಓದಿ: ಬಜೆಟ್ಗೆ ಭರ್ಜರಿ ತಯಾರಿ: ಹಣಕಾಸು ಸಚಿವರಿಂದ ಕೈಗಾರಿಕಾ ಚೇಂಬರ್ಸ್ ಜೊತೆಗೆ ಬಜೆಟ್ ಪೂರ್ವ ಸಭೆ ಜೂನ್ 20ಕ್ಕೆ