ನವದೆಹಲಿ: ಏಳು ಬಾರಿ ಸಂಸದರಾಗಿ ಆಯ್ಕೆಯಾದ ಭರ್ತೃಹರಿ ಮಹತಾಬ್ ಅವರು 18ನೇ ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಮಾಣ ವಚನ ಬೋಧಿಸಿದರು. ಪ್ರಮಾಣ ವಚನ ಸ್ವೀಕಾರ ಸಮಾರಂಭವು 18ನೇ ಲೋಕಸಭೆಯ ಮೊದಲ ಅಧಿವೇಶನದ ಆರಂಭಕ್ಕೆ ಮುನ್ಸೂಚನೆ ನೀಡಿತು. ಇಂದಿನ ಅಧಿವೇಶನವು ಹೊಸ ಸಂಸದರ ಪ್ರಮಾಣ ವಚನ ಸ್ವೀಕಾರದೊಂದಿಗೆ ಪ್ರಾರಂಭವಾಗಿದೆ.
#WATCH | Delhi: BJP MP Bhartruhari Mahtab takes oath as pro-tem Speaker of the 18th Lok Sabha
— ANI (@ANI) June 24, 2024
President Droupadi Murmu administers the oath pic.twitter.com/VGoL5PGEkT
ಪ್ರಧಾನಿ ಮೋದಿ, ಅಮಿತ್ ಶಾ ಸೇರಿ ಹಲವು ಸಂಸದರಿಂದ ಪ್ರಮಾಣ ವಚನ: ಈ ನಡುವೆ ಅಧಿವೇಶನದಲ್ಲಿ ಹೊಸದಾಗಿ ಆಯ್ಕೆ ಆದ ಸಂಸದರು ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅರ್ಜುನ್ ರಾಮ್ ಮೇಘವಾಲ್, ನಿತ್ಯಾನಂದ ರೈ, ಸಿ.ಆರ್. ಪಾಟೀಲ್, ಡಾ. ಜಿತೇಂದ್ರ ಸಿಂಗ್, ಜಿ. ಕಿಶನ್ ರೆಡ್ಡಿ ಮತ್ತು ಚಿರಾಗ್ ಪಾಸ್ವಾನ್, ಕಿರಣ್ ರಿಜಿಜು, ಮನ್ಸುಖ್ ಮಾಂಡವಿಯಾ ಅವರು 18 ನೇ ಲೋಕಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.
#WATCH | Prime Minister Narendra Modi takes oath as a member of the 18th Lok Sabha. pic.twitter.com/3tjFrbOCJ0
— ANI (@ANI) June 24, 2024
ಜೊತೆಗೆ ಕೇಂದ್ರ ಸಚಿವರಾದ ಹೆಚ್. ಕುಮಾರಸ್ವಾಮಿ, ಜಿತನ್ ರಾಮ್ ಮಾಂಝಿ, ಧರ್ಮೇಂದ್ರ ಪ್ರಧಾನ್, ಭೂಪೇಂದರ್ ಯಾದವ್, ಗಜೇಂದ್ರ ಸಿಂಗ್ ಶೇಖಾವತ್, ಜ್ಯೋತಿರಾದಿತ್ಯ ಸಿಂಧಿಯಾ, ಗಿರಿರಾಜ್ ಸಿಂಗ್, ಪ್ರಲ್ಹಾದ್ ಜೋಶಿ, ಸರ್ಬಾನಂದ ಸೋನೋವಾಲ್, ರಾಮ್ ಮೋಹನ್ ನಾಯ್ಡು ಕಿಂಜರಾಪು, ರಾಜೀವ್ ರಂಜನ್ ಅವರು ಸೇರಿದಂತೆ ಹಲವು ಸಂಸದರು 18ನೇ ಲೋಕಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.
#WATCH | First session of 18th Lok Sabha | Prime Minister Narendra Modi says, " in parliamentary democracy, this is a glorious day...for the first time after independence, swearing-in ceremony is taking place at our own new parliament building. it used to happen in the old… pic.twitter.com/vicGInKMob
— ANI (@ANI) June 24, 2024
ಹೊಸ ಸಂಸತ್ತಿನ ಕಟ್ಟಡದಲ್ಲಿ ಪ್ರಮಾಣ ವಚನ- ಪ್ರಧಾನಿ ಮೋದಿ: 18ನೇ ಲೋಕಸಭೆಯ ಮೊದಲ ಅಧಿವೇಶನಕ್ಕೂ ಮುನ್ನ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, "ಸಂಸದೀಯ ಪ್ರಜಾಪ್ರಭುತ್ವದಲ್ಲಿ, ಇಂದು ಅದ್ಭುತವಾದ ದಿನವಾಗಿದೆ. ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ, ನಮ್ಮ ಸ್ವಂತ ಹೊಸ ಸಂಸತ್ತಿನ ಕಟ್ಟಡದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುತ್ತಿದೆ. ಈ ಮಹತ್ವದ ದಿನದಂದು ಹೊಸದಾಗಿ ಚುನಾಯಿತರಾದ ಎಲ್ಲ ಸಂಸದರಿಗೆ ನಾನು ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತೇನೆ. ಅವರಿಗೆ ಶುಭಾಶಯಗಳನ್ನು ತಿಳಿಸುತ್ತೇನೆ'' ಎಂದು ಹೇಳಿದರು.
ಪ್ರತಿಪಕ್ಷಗಳು ಪ್ರಜಾಪ್ರಭುತ್ವದ ಘನತೆ ಕಾಪಾಡುತ್ತವೆ- ಮೋದಿ: ಇಂದಿನ 18ನೇ ಲೋಕಸಭೆಯ ಮೊದಲ ಅಧಿವೇಶನ ಪ್ರಾರಂಭವಾಗುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿಗೆ ಆಗಮಿಸಿದರು. ಈ ವೇಳೆ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ''ದೇಶದ ಜನತೆ ಪ್ರತಿಪಕ್ಷಗಳಿಂದ ಒಳ್ಳೆಯ ಹೆಜ್ಜೆಗಳನ್ನು ನಿರೀಕ್ಷೆ ಮಾಡಿದ್ದಾರೆ. ಪ್ರಜಾಪ್ರಭುತ್ವದ ಘನತೆಯನ್ನು ಕಾಪಾಡಲು ಪ್ರತಿಪಕ್ಷಗಳು ದೇಶದ ಸಾಮಾನ್ಯ ನಾಗರಿಕರ ನಿರೀಕ್ಷೆಗಳನ್ನು ಈಡೇರಿಸುತ್ತವೆ ಎಂದು ನಾನು ಭಾವಿಸುತ್ತೇನೆ. ಜನರು ನಾಟಕ ಮತ್ತು ಅವ್ಯವಸ್ಥೆ ಬಯಸುವುದಿಲ್ಲ. ಜನರು ಅಭಿವೃದ್ಧಿ ಕಾರ್ಯಗಳನ್ನು ಬಯಸುತ್ತಾರೆ, ಘೋಷಣೆಗಳಲ್ಲ. ದೇಶಕ್ಕೆ ಉತ್ತಮ ಪ್ರತಿಪಕ್ಷ, ಜವಾಬ್ದಾರಿಯುತ ಪ್ರತಿಪಕ್ಷಗಳ ಅಗತ್ಯವಿದ್ದು, ಈ 18ನೇ ಲೋಕಸಭೆಯಲ್ಲಿ ಗೆದ್ದಿರುವ ಸಂಸದರು ಸಾಮಾನ್ಯರ ಈ ನಿರೀಕ್ಷೆಗಳನ್ನು ಈಡೇರಿಸಲು ಪ್ರಯತ್ನಿಸುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ'' ಎಂದು ಪ್ರಧಾನಿ ಮೋದಿ ಹೇಳಿದರು.
''ದೇಶದ ಜನತೆ ನಮಗೆ ಮೂರನೇ ಅವಕಾಶ ನೀಡಿದ್ದಾರೆ. ಇದೊಂದು ದೊಡ್ಡ ಗೆಲುವು, ನಮ್ಮ ಜವಾಬ್ದಾರಿ ಮೂರು ಪಟ್ಟು ಹೆಚ್ಚಿದೆ. ಆದ್ದರಿಂದ, ನಮ್ಮ ಮೂರನೇ ಅವಧಿಯಲ್ಲಿ ನಾವು ಮೂರು ಪಟ್ಟು ಹೆಚ್ಚು ಶ್ರಮಿಸುತ್ತೇವೆ. ಮೂರು ಪಟ್ಟು ಅಭಿವೃದ್ಧಿಯ ಗುರಿ ಸಾಧಿಸುತ್ತೇವೆ ಎಂದು ನಾನು ದೇಶವಾಸಿಗಳಿಗೆ ಭರವಸೆ ನೀಡುತ್ತೇನೆ'' ಎಂದು ತಿಳಿಸಿದರು.
ತುರ್ತು ಪರಿಸ್ಥಿತಿ ನೆನಪಿಸಿಕೊಂಡ ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ: ''ಸರ್ಕಾರ ನಡೆಸಲು ಬಹುಮತ ಬೇಕು. ಆದರೆ, ದೇಶವನ್ನು ನಡೆಸಲು, ಒಮ್ಮತವು ಅತ್ಯಂತ ಮುಖ್ಯವಾಗಿದೆ. ಆದ್ದರಿಂದ, ಭಾರತ ಮಾತೆಯ ಸೇವೆ ಮತ್ತು 140 ಕೋಟಿ ಜನರ ಆಕಾಂಕ್ಷೆ ಮತ್ತು ಮಹತ್ವಾಕಾಂಕ್ಷೆಗಳನ್ನು ಎಲ್ಲರ ಒಪ್ಪಿಗೆಯೊಂದಿಗೆ ಮತ್ತು ಎಲ್ಲರನ್ನೂ ಕರೆದುಕೊಂಡು ಹೋಗುವ ಮೂಲಕ ನಮ್ಮ ನಿರಂತರ ಪ್ರಯತ್ನವಾಗಿದೆ. ಸಂವಿಧಾನದ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಮೂಲಕ ನಾವು ಮುನ್ನಡೆಯಲು ಬಯಸುತ್ತೇವೆ'' ಎಂದರು.
''ಜೂನ್ 25 ರಂದು, ಭಾರತದ ಪ್ರಜಾಪ್ರಭುತ್ವದ ಮೇಲಿನ ಕಳಂಕದ 50 ವರ್ಷಗಳು ಪೂರ್ಣಗೊಳ್ಳುತ್ತಿವೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಭಾರತದ ಸಂವಿಧಾನವನ್ನು ಸಂಪೂರ್ಣವಾಗಿ ನಿರಾಕರಿಸಲಾಗಿತ್ತು. ದೇಶವನ್ನು ಜೈಲಿನಂತೆ ಮಾಡಲಾಗಿತ್ತು. ಪ್ರಜಾಪ್ರಭುತ್ವವನ್ನು ಸಂಪೂರ್ಣವಾಗಿ ನಾಶಪಡಿಸಲಾಗಿತ್ತು ಎಂಬುದನ್ನು ಭಾರತದ ಹೊಸ ಪೀಳಿಗೆ ಎಂದಿಗೂ ಮರೆಯುವುದಿಲ್ಲ'' ಎಂದು ಪ್ರಧಾನಿ ಮೋದಿ ಕಿಡಿಕಾರಿದರು.
''ನಾವು ರೋಮಾಂಚಕ ಪ್ರಜಾಪ್ರಭುತ್ವಕ್ಕಾಗಿ ಪ್ರತಿಜ್ಞೆ ಮಾಡುತ್ತೇವೆ. ಭಾರತದ ಸಂವಿಧಾನದ ಸೂಚನೆಗಳ ಪ್ರಕಾರ ಸಾಮಾನ್ಯ ಜನರ ಕನಸುಗಳನ್ನು ಈಡೇರಿಸಲು ನಾವು ಪ್ರತಿಜ್ಞೆ ಮಾಡುತ್ತೇವೆ'' ಪ್ರಧಾನಿ ಮೋದಿ ಭರವಸೆ ನೀಡಿದರು. ''ವಿಶ್ವದ ಅತಿ ದೊಡ್ಡ ಚುನಾವಣೆಯನ್ನು ಅತ್ಯಂತ ಅದ್ಧೂರಿಯಾಗಿ ಮತ್ತು ವೈಭವಯುತವಾಗಿ ದೇಶದಲ್ಲಿ ನಡೆಸಲಾಯಿತು. ದೇಶದ ಜನತೆ ಸತತ ಮೂರನೇ ಬಾರಿಗೆ ಸರ್ಕಾರದ ಸೇವೆ ಮಾಡಲು ಅವಕಾಶ ನೀಡಿರುವುದರಿಂದ ಈ ಚುನಾವಣೆಯೂ ಅತ್ಯಂತ ಮಹತ್ವ ಪಡೆದುಕೊಂಡಿದೆ'' ಎಂದರು.
#WATCH | INDIA bloc leaders holding copy of Constitution protest in Parliament, Delhi pic.twitter.com/ViPaa6diOk
— ANI (@ANI) June 24, 2024
ಇಂಡಿಯಾ ಒಕ್ಕೂಟದ ನಾಯಕರಿಂದ ಪ್ರಭಟನೆ: ಅಧಿವೇಶನಕ್ಕೂ ಮುನ್ನ ಇಂಡಿಯಾ ಒಕ್ಕೂಟದ ನಾಯಕರು ದೆಹಲಿಯ ಸಂಸತ್ತು ಭವನದ ಎದುರು ಸಂವಿಧಾನದ ಪ್ರತಿ ಹಿಡಿದುಕೊಂಡು ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಇದರಲ್ಲಿ ಭಾಗವಹಿಸಿದ್ದರು.