ETV Bharat / bharat

'ತಾನು ಒಬಿಸಿ ಎನ್ನುವ ಪ್ರಧಾನಿ ಗೊಂದಲದಲ್ಲಿದ್ದಾರೆ...': ಮತ್ತೆ ಜಾತಿಗಣತಿಗೆ ಒತ್ತಾಯಿಸಿದ ರಾಹುಲ್ ಗಾಂಧಿ

ದೇಶದಲ್ಲಿ ಜಾತಿ ಗಣತಿ ನಡೆಸಬೇಕೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

prime-minister-is-confused-that-he-is-an-obc-rahul-gandhi-demands-caste-census-again

author img

By ANI

Published : Feb 6, 2024, 6:37 PM IST

ನವದೆಹಲಿ: ಜಾತಿ ಜನಗಣತಿ ನಡೆಸುವಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತೊಮ್ಮೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ತಾವೂ ಕೂಡ ಒಬಿಸಿ ಸಮುದಾಯಕ್ಕೆ ಸೇರಿದವರು ಎಂದು ಪ್ರಧಾನಿ ಮೋದಿ ಹೇಳಿಕೆಯನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆ.

ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದ ಪ್ರಧಾನಿ ಮೋದಿ, ಕಾಂಗ್ರೆಸ್ ಮತ್ತು ಯುಪಿಎ ಸರ್ಕಾರ ಹಿಂದುಳಿದ ಸಮುದಾಯಗಳಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದ್ದರು. ಕಾಂಗ್ರೆಸ್ ನಾಯಕರು ಸರ್ಕಾರ ರಚನೆಗೆ ಒಬಿಸಿಗಳನ್ನು ಅವಲಂಬಿಸಿದ್ದರೂ ಅವರು ಅತಿದೊಡ್ಡ ಒಬಿಸಿ ವ್ಯಕ್ತಿಯನ್ನು ನೋಡಲು ವಿಫಲರಾಗಿದ್ದಾರೆ ಎಂದು ಮೋದಿ ತಮ್ಮನ್ನೇ ಉಲ್ಲೇಖಿಸಿ ಹೇಳಿದ್ದರು.

ಪ್ರಧಾನಿಯ ಈ ಹೇಳಿಕೆಗೆ ರಾಹುಲ್ ಈಗ ತಿರುಗೇಟು ನೀಡಿದ್ದಾರೆ. ಭಾರತ್ ಜೋಡೋ ನ್ಯಾಯ್ ಯಾತ್ರೆಗಾಗಿ ಪ್ರಸ್ತುತ ಜಾರ್ಖಂಡ್ ಮೂಲಕ ಪ್ರಯಾಣಿಸುತ್ತಿರುವ ವಯನಾಡ್ ಸಂಸದ ರಾಹುಲ್, ಸಂಸತ್ತಿನಲ್ಲಿ ಮಾಡಿದ ಭಾಷಣ ನೋಡಿದರೆ ಪ್ರಧಾನಿ ಗೊಂದಲಕ್ಕೊಳಗಾಗಿದ್ದಾರೆ ಎಂದು ತೋರುತ್ತದೆ ಮತ್ತು ಹಿಂದುಳಿದವರಿಗೆ ಆಡಳಿತದಲ್ಲಿ ಭಾಗವಹಿಸಲು ಅವಕಾಶ ನೀಡಬೇಕಾದರೆ ಸಮುದಾಯದ ಗಣತಿ ನಡೆಸುವುದು ಅವಶ್ಯಕ ಎಂದು ಹೇಳಿದರು.

"ಈ ವಿಷಯ ಈಗ ಎಲ್ಲರ ಮುಂದಿದೆ. ಪ್ರಧಾನಿ ಒಂದು ಕಡೆ ತಮ್ಮನ್ನು ಒಬಿಸಿ ಎಂದು ಕರೆದುಕೊಳ್ಳುತ್ತಾರೆ. ಮತ್ತೆ ಕೆಲವೊಮ್ಮೆ ದೇಶದಲ್ಲಿ ಶ್ರೀಮಂತ ಮತ್ತು ಬಡವ ಎಂಬ ಎರಡೇ ಜಾತಿಗಳಿವೆ ಎನ್ನುತ್ತಾರೆ. ಮೊದಲು ಅವರು ಈ ಗೊಂದಲ ನಿವಾರಿಸಿಕೊಳ್ಳಬೇಕು. ಜಾತಿ ಜನಗಣತಿ ನಡೆಯಬೇಕೆಂದು ನಾವು ಬಯಸುತ್ತೇವೆ." ಎಂದು ರಾಹುಲ್ ನುಡಿದರು.

"ಈ ಪ್ರಶ್ನೆ ಕೇವಲ ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದಲ್ಲ, ಇದು ಸಂಪೂರ್ಣ ಭಾರತದ ಜನತೆಯದ್ದಾಗಿದೆ. ಉದಾಹರಣೆಗೆ, ದೆಹಲಿಯಲ್ಲಿ 90 ಐಎಎಸ್ ಅಧಿಕಾರಿಗಳಲ್ಲಿ ಕೇವಲ ಮೂವರು ಒಬಿಸಿ ಅಧಿಕಾರಿಗಳಿದ್ದಾರೆ. ದೇಶದ ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿ ದಲಿತರು ಮತ್ತು ಬುಡಕಟ್ಟು ಜನರು ಕಾಣಸಿಗುವುದಿಲ್ಲ. ಭಾರತದ ಅಗ್ರ 100 ಕಾರ್ಪೊರೇಟ್ ಕಂಪನಿಗಳಲ್ಲಿ ಯಾವುದಾದರೂ ಒಬ್ಬ ಒಬಿಸಿ ಮಾಲೀಕರನ್ನು ನೀವು ಹೆಸರಿಸಿ ನೋಡೋಣ. ನೀವು ಅದಾನಿ, ಟಾಟಾ ಮತ್ತು ಬಿರ್ಲಾ ಅವರ ಹೆಸರುಗಳನ್ನು ಕೇಳಿರಬಹುದು ಆದರೆ ಯಾವುದೇ ಒಬಿಸಿ ಹೆಸರು ಕೇಳಿರಲು ಸಾಧ್ಯವಿಲ್ಲ. ಯಾವ ಮಟ್ಟದ ಅನ್ಯಾಯ ಈ ದೇಶದಲ್ಲಿ ನಡೆಯುತ್ತಿದೆ?" ಎಂದು ಅವರು ಪ್ರಶ್ನಿಸಿದರು.

ಇದನ್ನೂ ಓದಿ: 'ನಾಯಿಗೆ ತಿನ್ನಿಸಲು ಮಾಲೀಕನಿಗೆ ಬಿಸ್ಕತ್ ನೀಡಿದ್ದೆ' ರಾಹುಲ್ ಗಾಂಧಿ ಸ್ಪಷ್ಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.