ETV Bharat / bharat

ದೇಶ ವಿಭಜಿಸುವ ಶಕ್ತಿ I.N.D.I.Aವನ್ನು ಸೋಲಿಸಲಾಗದು: ರಾಹುಲ್​ ಗಾಂಧಿ

'ಭಾರತ್ ಜೋಡೋ ನ್ಯಾಯ ಯಾತ್ರೆ' ಕೊನೆಗೊಂಡಿದ್ದು, ರಾಹುಲ್​ ಗಾಂಧಿ ಬಿಜೆಪಿ ವಿರುದ್ಧ ಎಕ್ಸ್​ ಪೋಸ್ಟ್​ನಲ್ಲಿ ಟೀಕಾಸಮರ ನಡೆಸಿದ್ದಾರೆ.

'ಭಾರತ್ ಜೋಡೋ ನ್ಯಾಯ ಯಾತ್ರೆ
'ಭಾರತ್ ಜೋಡೋ ನ್ಯಾಯ ಯಾತ್ರೆ
author img

By ANI

Published : Mar 18, 2024, 8:19 AM IST

ಮುಂಬೈ(ಮಹಾರಾಷ್ಟ್ರ): ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನೇತೃತ್ವದ 'ಭಾರತ್ ಜೋಡೋ ನ್ಯಾಯ ಯಾತ್ರೆ' ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಭಾನುವಾರ ಮುಕ್ತಾಯಗೊಂಡಿತು. ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ರಾಹುಲ್​ ಗಾಂಧಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಕಾರ್ಯಕ್ರಮದ ಬಳಿಕವೂ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ನ್ಯಾಯ ಯಾತ್ರೆ ಕೊನೆಯ ಕಾರ್ಯಕ್ರಮದ ಫೋಟೋ ಪೋಸ್ಟ್ ಮಾಡಿ, ದೇಶ ವಿಭಜಿಸುವ ಉದ್ದೇಶ ಹೊಂದಿರುವ ಶಕ್ತಿಯು I.N.D.I.A ಶಕ್ತಿಯನ್ನು ಎಂದಿಗೂ ಸೋಲಿಸಲು ಸಾಧ್ಯವಿಲ್ಲ ಎಂದು ಬರೆದಿದ್ದಾರೆ. ಮುಂಬೈನಿಂದ ವಾಯ್ಸ್​ ಆಫ್​​ ಹಿಂದೂಸ್ತಾನ್​ ಹೊರಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನಕಾರಾತ್ಮಕ ಶಕ್ತಿಯ ಮುಖವಾಡ ಧರಿಸಿದ್ದಾರೆ ಎಂದು ಟೀಕಿಸಿದ್ದಾರೆ.

ಮೋದಿ ಭಾರತದ ಸಂಸ್ಥೆಗಳು, ರೈತರು, ಕಾರ್ಮಿಕರು, ಯುವಕರು, ಮಹಿಳೆಯರು, ಬಡವರು ಮತ್ತು ಸಣ್ಣ ಕೈಗಾರಿಕೆಗಳನ್ನು ಗುಲಾಮರನ್ನಾಗಿ ಮಾಡಿದ್ದಾರೆ. ಇಂದು ದೇಶದಲ್ಲಿ ಭ್ರಷ್ಟಾಚಾರ ಏಕಸ್ವಾಮ್ಯ ಸಾಧಿಸುತ್ತಿದೆ. ದೇಶದಲ್ಲಿ ಕೆಲವೇ ಕೋಟ್ಯಧಿಪತಿ ಸ್ನೇಹಿತರಿಗೆ ಎಲ್ಲವನ್ನೂ ನೀಡಲಾಗುತ್ತಿದೆ ಎಂದಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇಂಥ ನಕಾರಾತ್ಮಕ ಶಕ್ತಿಗಳಿಗೆ ತಕ್ಕ ಪ್ರತ್ಯುತ್ತರ ನೀಡುವ ಸಮಯ ಬಂದಿದೆ. ಇದು ನಮ್ಮ, ನಿಮ್ಮ ಮತ್ತು ಪ್ರತಿಯೊಬ್ಬರ ಜವಾಬ್ದಾರಿ. ಈ ಪ್ರೀತಿಯ ದೇಶದಲ್ಲಿ ದ್ವೇಷ ಸೋಲುತ್ತದೆ, ಭಾರತ ಗೆಲ್ಲುತ್ತದೆ ಎಂದು ತಿಳಿಸಿದ್ದಾರೆ.

ರಾಹುಲ್​ ಗಾಂಧಿ ದೇಶದ ಯುವಕರಿಗೆ ಮತ್ತಷ್ಟು ಭರವಸೆಗಳನ್ನು ನೀಡಿದ್ದಾರೆ. ಈ ಕುರಿತು ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ. 'ದೇಶದ ಯುವಕರೇ, ಕಾಂಗ್ರೆಸ್ ಪಕ್ಷ ನಿಮಗಾಗಿ ಐದು ಭರವಸೆಗಳನ್ನು ನೀಡುತ್ತಿದೆ. ಆ ಭರವಸೆ ನಿಮ್ಮ ಭವಿಷ್ಯ ಬದಲಾಯಿಸುತ್ತದೆ' ಎಂದಿದ್ದಾರೆ.

ರಾಹುಲ್ ಭರವಸೆಗಳು:

1. ನೇಮಕಾತಿ ಟ್ರಸ್ಟ್: 30 ಲಕ್ಷ ಸರ್ಕಾರಿ ಹುದ್ದೆಗಳಿಗೆ ಖಾಯಂ ನೇಮಕಾತಿ ಗ್ಯಾರಂಟಿ.

2. ಮೊದಲ ಉದ್ಯೋಗ ಖಾತ್ರಿ: ಪ್ರತೀ ಪದವೀಧರ ಮತ್ತು ಡಿಪ್ಲೊಮಾ ಶಿಕ್ಷಣ ಪಡೆಯುವವರಿಗೆ ವರ್ಷಕ್ಕೆ 1 ಲಕ್ಷ ರೂ ಸ್ಟೈಫಂಡ್‌ನೊಂದಿಗೆ ಅಪ್ರೆಂಟಿಸ್‌ಶಿಪ್.

3. ಪರೀಕ್ಷೆ ಪತ್ರಿಕೆ ಸೋರಿಕೆಯಿಂದ ಮುಕ್ತಿ: ಪರೀಕ್ಷಾ ಪತ್ರಿಕೆಗಳ ಸೋರಿಕೆ ತಡೆಯಲು ಹೊಸ ಕಾನೂನು.

4. ಗಿಗ್ (GIG) ಆರ್ಥಿಕತೆಯಲ್ಲಿ ಸಾಮಾಜಿಕ ಭದ್ರತೆ: GIG ಎಕಾನಮಿಯಲ್ಲಿ ಉತ್ತಮ ಕೆಲಸದ ಪರಿಸ್ಥಿತಿಗಳು, ಪಿಂಚಣಿ ಮತ್ತು ಸಾಮಾಜಿಕ ಭದ್ರತೆಯ ಖಾತರಿ.

5. ಯುವ ರೋಶನಿ: ₹5,000 ಕೋಟಿ ರಾಷ್ಟ್ರೀಯ ನಿಧಿಯಿಂದ ಜಿಲ್ಲಾ ಮಟ್ಟದಲ್ಲಿ ಸ್ಟಾರ್ಟ್‌ಅಪ್ ನಿಧಿಗಳನ್ನು ನೀಡುವ ಮೂಲಕ ಯುವ ಉದ್ಯಮಿಗಳನ್ನಾಗಿ ಮಾಡುವುದು.

ಇದನ್ನೂ ಓದಿ: ಆಂಧ್ರದಲ್ಲಿ 'ಭ್ರಷ್ಟ' ವೈಎಸ್‌ಆರ್‌ಸಿಪಿ ಆಡಳಿತಕ್ಕೆ ವಿದಾಯ ಹೇಳಿ: ಜನತೆಗೆ ಪ್ರಧಾನಿ ಮೋದಿ ಕರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.