ETV Bharat / bharat

ಆರ್ಥಿಕ ಕುಸಿತದ ಪ್ರಪಾತದ ಅಂಚಿನಿಂದ ಭಾರತವನ್ನು ಮೇಲೆತ್ತಿದವರು ಪ್ರಧಾನಿ ಮೋದಿ: ನಿರ್ಮಲಾ ಸೀತಾರಾಮನ್ - Nirmala Sitaraman - NIRMALA SITARAMAN

2014 ರಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಅಧಿಕಾರ ಸ್ವೀಕರಿಸಿದಾಗ, ಭಾರತ ದಯನೀಯ ಸ್ಥಿತಿಯಲ್ಲಿತ್ತು. ಒಂದು ದಶಕದ ಉತ್ತಮ ಆಡಳಿತದ ಬಳಿಕ, ಈಗ ಭಾರತ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದ್ದು, ಅತಿ ಶೀಘ್ರದಲ್ಲೇ ಐದು ಲಕ್ಷ ಕೋಟಿ ಆರ್ಥಿಕತೆಯ ರಾಷ್ಟ್ರವಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

Etv Bharat
Etv Bharat
author img

By ETV Bharat Karnataka Team

Published : Apr 23, 2024, 8:18 AM IST

ಬೆಂಗಳೂರು: ದೀರ್ಘಾವಧಿ ಮುನ್ನೋಟದ ಪ್ರಧಾನಿ ನರೇಂದ್ರ ಮೋದಿ ಅವರ ಕ್ರಿಯಾಶೀಲ ನಡೆ, ದೂರದೃಷ್ಟಿಯ ಕ್ರಮ, ನಿಖರ ಯೋಜನೆಗಳ ಫಲವಾಗಿ ದಶಕದೊಳಗೆ ಐದು ದುರ್ಬಲ ಆರ್ಥಿಕತೆಗಳಿಂದ ಹೊರಬಂದು ಭಾರತವು ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲು ಸಾಧ್ಯವಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಪಾದಿಸಿದ್ದಾರೆ.

ನಗರದ ಕಾಸಿಯಾ ಸಭಾಂಗಣದಲ್ಲಿ, ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್‌ ಆಫ್‌ ಇಂಡಿಯಾ (ಐಸಿಎಸ್ಐ) ಮತ್ತು ಇನ್ಸ್ಟಿಟ್ಯೂಟ್ ಆಫ್ ಕಾಸ್ಟ್ ಅಂಡ್‌ ಮ್ಯಾನೇಜ್ಮೆಂಟ್ (ಐಸಿಎಂಎಐ) ಸದಸ್ಯರನ್ನುದ್ದೇಶಿಸಿ ಮಾತಮಾಡಿದ ಅವರು, 2014 ರಲ್ಲಿ ಎನ್​​ಡಿಎ ಸರ್ಕಾರ ಹಿಂದಿನ ಯುಪಿಎ ಸರ್ಕಾರದಿಂದ ಕೆಟ್ಟ ಪರಂಪರೆ ಪಡೆಯಿತು. ಆದರೆ, ಆ ಯುಪಿಎ ಸರ್ಕಾರಕ್ಕೆ ವಾಜಪೇಯಿ ಅವರು 2004 ರಲ್ಲಿ ಅಧಿಕಾರ ತೊರೆದಾಗಿನ ಅತ್ಯುತ್ತಮ ಪರಂಪರೆ ದೊರೆತಿತ್ತು. ವಾಜಪೇಯಿಯವರು ಪ್ರಧಾನಿ ಆಗಿದ್ದ ಕೊನೆಯ ಅವಧಿ 2003-2004 ರಲ್ಲಿ ದೇಶವು ಶೇಕಡ 8 ರಷ್ಟು ಪ್ರಗತಿಗೆ ಸಾಕ್ಷಿಯಾಗಿತ್ತು. ಮಾರ್ಚ್ 2004 ರವರೆಗೆ ಸರಾಸರಿ ಹಣದುಬ್ಬರ ಶೇಕಡ 4 ರಷ್ಟಿತ್ತು ಮತ್ತು ವಿದೇಶಿ ವಿನಿಮಯ ಮೀಸಲು ಆರೊಗ್ಯಕರವಾಗಿತ್ತು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಏಪ್ರಿಲ್ 2004 ರಲ್ಲಿ ಅಧಿಕಾರಕ್ಕೆ ಬಂದ ಮೇಲೆ ಇಳಿಕೆಯ ಹಾದಿ ಆರಂಭವಾಯಿತು ಎಂದರು.

‌ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಹಿಂದಿನ ಸರ್ಕಾರದ ಪ್ರಗತಿಯಿಲ್ಲದ, ಕುಂಠಿತ ಪ್ರಗತಿಯ ಸ್ಥಿತಿಯನ್ನು ಪಡೆಯಬೇಕಾಯಿತು. ಜಿಡಿಪಿ ಶೇಕಡ 5 ಕ್ಕಿಂತ ಕಡಿಮೆ ಇದ್ದು, ಎರಡಂಕಿಯ ಹಣದುಬ್ಬರದ ಸ್ಥಿತಿ ಇತ್ತು. 1991 ರ ಹಿಂದಿನ ಸ್ಥಿತಿಗೆ ತಲುಪಬೇಕಾಗಬಹುದಾದ ಅಪಾಯದಲ್ಲಿತ್ತು. ಆರ್ಥಿಕತೆಯು ಅವ್ಯವಸ್ಥೆಯ ಆಗರವಾಗಿತ್ತು. ಅದೊಂದು ಕತ್ತಲಿನ ದಶಕವಾಗಿತ್ತು, ಭಾರತವನ್ನು ಐದು ದುರ್ಬಲ ರಾಷ್ಟ್ರಗಳ ಪೈಕಿ ಒಂದು ಎಂದು ಪರಿಗಣಿಸಲಾಗಿತ್ತು. 2014 ರಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಅಧಿಕಾರ ಸ್ವೀಕರಿಸಿದಾಗ, ಭಾರತ ದಯನೀಯ ಸ್ಥಿತಿಯಲ್ಲಿತ್ತು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಒಂದು ದಶಕದ ಉತ್ತಮ ಆಡಳಿತದ ಬಳಿಕ, ಈಗ ಭಾರತ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದ್ದು, ಅತಿ ಶೀಘ್ರದಲ್ಲೇ ಐದು ಲಕ್ಷ ಕೋಟಿ ಆರ್ಥಿಕತೆಯ ರಾಷ್ಟ್ರವಾಗಲಿದೆ ಎಂದು ಹೇಳಿದರು. ಇಂತಹ ಗಮನಾರ್ಹ ಸಾಧನೆ ಸಾಧ್ಯವಾಗಿದ್ದು, ದೀರ್ಘಾವಧಿ ಮುನ್ನೋಟದ ಸೂಕ್ತ ಯೋಜನೆಯಿಂದ ಜಾರಿಗೆ ಬಂದ ಸದೃಢ, ಜನ - ಸ್ನೇಹಿ, ವ್ಯಾಪಾರ-ಸ್ನೇಹಿ ನೀತಿಗಳಿಂದಾಗಿ ಎಂದು ವಿತ್ತ ಸಚಿವರು ವಿವರಿಸಿದರು.

ಅಸಮಂಜಸ ನೀತಿ ನಿಯಮಗಳ ಶಾಪವಿಲ್ಲದ ರಾಜಕೀಯ ಸ್ಥಿರತೆ, ನವೀನ ಆರ್ಥಿಕ ನೀತಿಗಳು, ಸಂಪೂರ್ಣ ಪಾರದರ್ಶಕತೆ ಮತ ಸುಲಲಿತ ವ್ಯಾಪಾರ ಪರಿಸರಗಳೇ ಈ ಆರ್ಥಿಕ ಚೇತರಿಕೆಗೆ ಪ್ರಮುಖ ಕಾರಣ ಎಂದು ಹೇಳಿದ ಅವರು, ಅಭಿವೃದ್ಧಿಯು ತನ್ನಿಂದ ತಾನೇ ಆಗಿವುದಿಲ್ಲ, ಕ್ರಿಯಾಶೀಲ ಪ್ರಯತ್ನಗಳಿಲ್ಲದೇ ಆಗುವುದಿಲ್ಲ ಎಂಬುದನ್ನು ಪ್ರಧಾನಿ ಚೆನ್ನಾಗಿ ಅರಿತಿದ್ದರು ಎಂದರು.

ಇದನ್ನೂ ಓದಿ: ಟಾಟಾ ಕರ್ವ್ ಎಲೆಕ್ಟ್ರಿಕ್ ಕಾರ್ ಶೀಘ್ರದಲ್ಲೇ ಬಿಡುಗಡೆ: ಒಂದು ಬಾರಿ ಚಾರ್ಜ್ ಮಾಡಿದರೆ 500 ಕಿ.ಮೀ. ಮೈಲೇಜ್​; ಬೆಲೆ ಎಷ್ಟು ಅಂತೀರಾ? - Tata Curvv EV car

ಬಳಿಕ ಸಂವಾದದಲ್ಲಿ ಉತ್ತರಿಸಿದ ಅವರು, ವ್ಯವಸ್ಥೆಯು ಸರಳವಾಗಿರಬೇಕು ಮತ್ತು ಕಡ್ಡಾಯ ಪಾಲನೆಗಳನ್ನು ಇನ್ನಷ್ಟು ಸುಲಭ ಮಾಡಬೇಕು ಎಂಬುದು ಬಿಜೆಪಿ ನೇತೃತ್ವದ ಎನ್​​ಡಿಎ ಸರ್ಕಾರದ ಗುರಿಯಾಗಿದೆ. ತಮ್ಮ ಸರ್ಕಾರ ತನ್ನ ಕ್ರಾಂತಿಕಾರಕ ಪ್ರಕ್ರಿಯೆಯ ಭಾಗವಾಗಿ ಆರ್ಥಿಕತೆ ಮತ್ತು ಕಾರ್ಪೊರೇಟ್ ವಲಯಗಳಲ್ಲಿನ 1,500 ಚಾಲ್ತಿಯಲ್ಲಿಲ್ಲದ ನಿಯಮಗಳನ್ನು ತೆಗೆದು ಹಾಕಿದೆ ಎಂದು ತಿಳಿಸಿದರು.

ಇದನ್ನೂ ಓದಿ: ನೀವು ನಿವೃತ್ತಿ ಬಗ್ಗೆ ಯೋಚಿಸುತ್ತಿದ್ದೀರಾ?: ಈ ಸಲಹೆಗಳನ್ನು ಪಾಲಿಸಿದರೆ ಹೆಚ್ಚುವರಿ ಪಿಂಚಣಿ ಗ್ಯಾರಂಟಿ - EPFO PENSION RULES

ಭಾರತ ಮತ್ತು ಚೀನಾ ದೇಶಗಳ ಆರ್ಥಿಕತೆ ನಡುವಿನ ಹೋಲಿಕೆ ಬಗೆಗಿನ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಚೀನಾ ದೇಶದ ಆರ್ಥಿಕ ನಿಧಾನಗತಿಯು ಜಾಗತಿಕ ಸನ್ನಿವೇಶದಲ್ಲಿ ಭಾರತಕ್ಕೆ ಅವಕಾಶ ಕೊಡಬಹುದು. ಆದರೆ ಮಾನವ ಸಂಪನ್ಮೂಲ ನೀತಿಯ ವಿಷಯವಾಗಲೀ ಅಥವಾ ಆರ್ಥಿಕ ಉಪಕ್ರಮಗಳ ವಿಚಾರವಾಗಲೀ ಅಥವಾ ವಿದೇಶೀ ವಿನಿಮಯ ನೀತಿಗಳ ವಿಷಯವೇ ಆಗಲಿ, ಭಾರತ ಈಗಾಗಲೇ ಉತ್ತುಂಗ ಸ್ಥಿತಿ ತಲುಪಿದೆ ಎಂದರು.

ಇದನ್ನೂ ಓದಿ: ಅಮಿತ್ ಶಾ ಯಾವ್ಯಾವ ಷೇರುಗಳಲ್ಲಿ ಹೂಡಿಕೆ ಮಾಡಿದ್ದಾರೆ ಗೊತ್ತಾ?; ಚು. ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್​​ನಲ್ಲಿ ಇಂಟ್ರೆಸ್ಟಿಂಗ್​​​ ಮಾಹಿತಿ - Shah investing and trading

ETV Bharat Logo

Copyright © 2025 Ushodaya Enterprises Pvt. Ltd., All Rights Reserved.