ETV Bharat / bharat

ಶ್ರೀನಗರದ ದಾಲ್ ಸರೋವರದ ದಡದಲ್ಲಿ ಪ್ರಧಾನಿ ಮೋದಿ ಯೋಗ ಸಂಭ್ರಮ - International Day of Yoga 2024 - INTERNATIONAL DAY OF YOGA 2024

10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ನಿಮಿತ್ತ ಶ್ರೀನಗರದ ದಾಲ್ ಸರೋವರದ ದಡದಲ್ಲಿ ಪ್ರಧಾನಿ ನರೇಂದ್ರ ಮೋದಿ ಯೋಗ ಪ್ರದರ್ಶಿಸಿದರು. ಇದೇ ವೇಳೆ 7,000ಕ್ಕೂ ಹೆಚ್ಚು ಜನರು ಪಾಲ್ಗೊಂಡು ಯೋಗಾಸನ ಮಾಡಿದರು.

Prime Minister Narendra Modi  Jammu and Kashmir  International Day of Yoga  Srinagar
ಶ್ರೀನಗರದ ದಾಲ್ ಸರೋವರದ ದಡದಲ್ಲಿ ಪ್ರಧಾನಿ ಮೋದಿ ಯೋಗ ಪ್ರದರ್ಶನ ಮಾಡಿದರು (ANI)
author img

By ETV Bharat Karnataka Team

Published : Jun 21, 2024, 8:42 AM IST

Updated : Jun 21, 2024, 11:13 AM IST

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿರುವ ಶೇರ್-ಎ-ಕಾಶ್ಮೀರ್ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ (SKICC)ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಶುಕ್ರವಾರ 10ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.

ಈ ವರ್ಷದ ಯೋಗ ದಿನಾಚರಣೆಯ ಈವೆಂಟ್ ಯುವ ಮನಸ್ಸು ಮತ್ತು ದೇಹದ ಮೇಲೆ ಯೋಗದ ಆಳವಾದ ಪ್ರಭಾವವನ್ನು ಒತ್ತಿ ಹೇಳುತ್ತದೆ. ಈ ಆಚರಣೆಯು ಯೋಗದ ಅಭ್ಯಾಸದಲ್ಲಿ ಸಾವಿರಾರು ಜನರನ್ನು ಒಂದುಗೂಡಿಸುವ ಗುರಿಯನ್ನು ಹೊಂದಿದೆ. ಜಾಗತಿಕ ಮಟ್ಟದಲ್ಲಿ ಆರೋಗ್ಯ ಮತ್ತು ಕ್ಷೇಮವನ್ನು ಉತ್ತೇಜಿಸುತ್ತದೆ.

ಪ್ರಧಾನಿ ನರೇಂದ್ರ ಮೋದಿ ಮಾತು: ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ''ಈ ವರ್ಷ ಭಾರತದಲ್ಲಿ ಫ್ರಾನ್ಸ್‌ನ 101 ವರ್ಷದ ಮಹಿಳಾ ಯೋಗ ಶಿಕ್ಷಕಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರು ಭಾರತಕ್ಕೆ ಬಂದಿರಲಿಲ್ಲ. ಆದರೆ, ಯೋಗದ ಬಗ್ಗೆ ಜಾಗೃತಿ ಮೂಡಿಸಲು ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟಿದ್ದರು. ಇಂದು ಪ್ರಪಂಚದಾದ್ಯಂತದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳು ಮತ್ತು ಸಂಸ್ಥೆಗಳಲ್ಲಿ ಯೋಗದ ಕುರಿತು ಸಂಶೋಧನೆಗಳನ್ನು ಮಾಡಲಾಗುತ್ತಿದೆ. ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಲಾಗುತ್ತಿದೆ. ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆ ಪೋಷಿಸುವಲ್ಲಿ ಯೋಗವು ಮಹತ್ವದ ಪಾತ್ರವಹಿಸುತ್ತದೆ" ಎಂದು ತಿಳಿಸಿದರು.

ಜಮ್ಮು ಮತ್ತು ಕಾಶ್ಮೀರದ ಯುಟಿಯ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಆಯುಷ್ ಸಚಿವಾಲಯದ ಕೇಂದ್ರ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವ ಪ್ರತಾಪ್ರಾವ್ ಗಣಪತರಾವ್ ಜಾಧವ್ ಇತರರು ಪ್ರಧಾನಿ ನೇತೃತ್ವದ 10ನೇ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಈ ವಿಶೇಷ ಸಂದರ್ಭವನ್ನು ಗುರುತಿಸಲು ವಿವಿಧ ಕ್ಷೇತ್ರಗಳ 7,000ಕ್ಕೂ ಹೆಚ್ಚು ಜನರು ಶ್ರೀನಗರದ ದಾಲ್ ಸರೋವರದ ದಡದಲ್ಲಿ ಪ್ರಧಾನ ಮಂತ್ರಿಯೊಂದಿಗೆ ಯೋಗದ ವಿವಿಧ ಆಸನಗಳನ್ನು ಪ್ರದರ್ಶಿಸಿದರು.

2015ರಿಂದ, ದೆಹಲಿಯ ಕರ್ತವ್ಯ ಪಥ್, ಚಂಡೀಗಢ, ಡೆಹ್ರಾಡೂನ್, ರಾಂಚಿ, ಲಕ್ನೋ, ಮೈಸೂರು ಮತ್ತು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು (IDY) ಪ್ರಧಾನ ಮಂತ್ರಿಯವರು ಆಚರಿಸಿದ್ದಾರೆ.

ಈ ವರ್ಷದ ಥೀಮ್, 'ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ', ವೈಯಕ್ತಿಕ ಯೋಗಕ್ಷೇಮ ಮತ್ತು ಸಾಮಾಜಿಕ ಸಾಮರಸ್ಯ ಬೆಳೆಸುವಲ್ಲಿ ಯೋಗದ ಪ್ರಮುಖ ಪಾತ್ರವನ್ನು ಒತ್ತಿ ಹೇಳುತ್ತದೆ.

ಈ ನಡುವೆ ಕೇಂದ್ರ ಕೈಗಾರಿಕೆ ಸಚಿವ ಹೆಚ್​ಡಿ ಕುಮಾರಸ್ವಾಮಿ, ಸಚಿವರಾದ ಪ್ರಲ್ಹಾದ್​ ಜೋಶಿ, ರಿಜಿಜು ಸೇರಿದಂತೆ ನಾನಾ ಗಣ್ಯರು ಯೋಗ ದಿನದಲ್ಲಿ ಪಾಲ್ಗೊಂಡು ಯೋಗಾಸನಗಳನ್ನು ಮಾಡಿ ಗಮನ ಸೆಳೆದರು. ನಾನಾ ಗಣ್ಯರು, ಆಯಾಯ ರಾಜ್ಯಗಳಲ್ಲಿ ಸಂಭ್ರಮದ ವಿಶ್ವ ಯೋಗಾ ದಿನವನ್ನು ಆಚರಿಸಿದರು.

ಇದನ್ನೂ ಓದಿ: ಅಂತಾರಾಷ್ಟ್ರೀಯ ಯೋಗ ದಿನ: ಗಮನಸೆಳೆದ ರಾಮ್‌ದೇವ್ ಬಾಬಾ ಯೋಗ ಪ್ರದರ್ಶನ, ಹೆಚ್​​​​​​​ಡಿಕೆ, ಜೋಶಿಯಿಂದಲೂ ಯೋಗ - International Day of Yoga

Last Updated : Jun 21, 2024, 11:13 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.