ETV Bharat / bharat

ಬಿಹಾರದ ಮೂಲಕ ಲೋಕ ಪ್ರಚಾರಕ್ಕೆ ಮೋದಿ ಚಾಲನೆ; ವೇದಿಕೆ ಹಂಚಿಕೊಳ್ಳಲಿರುವ ಸಿಎಂ ನಿತೀಶ್​​

author img

By ETV Bharat Karnataka Team

Published : Jan 29, 2024, 4:54 PM IST

PM Modi meeting in Bettiah: ಬಿಹಾರದ ಕಾರ್ಯಕ್ರಮದ ಮೂಲಕ ಹಲವು ವರ್ಷಗಳ ಬಳಿಕ ಪ್ರಧಾನಿ ಮೋದಿ ಮತ್ತು ನಿತೀಶ್​ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ.

pm-modi-meeting-in-bettiah-on-4th-february

ರಾಂಚಿ: ಲೋಕಸಭಾ ಚುನಾವಣೆಗೆ ಸಜ್ಜಾಗಿರುವ ಬಿಜೆಪಿ ತನ್ನ ಮೊದಲ ಲೋಕಸಭಾ ಚುನಾವಣಾ ಪ್ರಚಾರ ಸಮಾವೇಶವನ್ನು ಬಿಹಾರದ ಬೆಟ್ಟಿಯಾದಿಂದ ಆರಂಭಿಸಲು ಸಜ್ಜಾಗಿದೆ. ಜಿಲ್ಲೆಯ ಪಶ್ಚಿಮ ಚಂಪಾರಣ್​ನ ಬೆಟ್ಟಿಯಾದಲ್ಲಿ ಆಯೋಜಿಸಲಾಗಿರುವ ಬಿಜೆಪಿ ಬೃಹತ್​ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ. ಫೆಬ್ರವರಿ 4ರಂದು ನಡೆಯಲಿರುವ ಈ ಸಮಾವೇಶದಲ್ಲಿ ಸಿಎಂ ನೀತಿಶ್​​ ಕುಮಾರ್​ ಕೂಡ ವೇದಿಕೆ ಹಂಚಿಕೊಳ್ಳಲಿದ್ದಾರೆ.

ವೇದಿಕೆ ಮೇಲೆ ಶಕ್ತಿ ಪ್ರದರ್ಶನ; ರಾಜ್ಯದಲ್ಲಿ ಎನ್​ಡಿಎ ಸರ್ಕಾರ ಮತ್ತೊಮ್ಮೆ ರಚನೆಯಾದ ಬಳಿಕ ಪ್ರಧಾನಿ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದಾರೆ. ಮಹಾಘಟಬಂಧನ್​ ತೊರೆದು ಎನ್​ಡಿಎ ಬೆಂಬಲ ಪಡೆದು 9ನೇ ಬಾರಿಗೆ ಸಿಎಂ ಆಗಿರುವ ನಿತೀಶ್​​ ಕುಮಾರ್​ ಕೂಡ ಈ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಈ ಮೂಲಕ ಎನ್​ಡಿಎ ಸೇರಿದ ಬಳಿಕ ಪ್ರಧಾನಿ ಮೋದಿ ಜೊತೆಗೆ ಮೊದಲ ಬಾರಿಗೆ ಅವರು ಕಾಣಿಸಿಕೊಳ್ಳಲಿದ್ದಾರೆ.

ಸಮಾವೇಶದಲ್ಲಿ ಪ್ರಧಾನ ಮಂತ್ರಿ ಅನೇಕ ಸರ್ಕಾರಿ ಯೋಜನೆಗೆ ಶಂಕು ಸ್ಥಾಪನೆ ಮಾಡಲಿದ್ದು, ಸುಮಾರು 19 ಸಾವಿರ ಕೋಟಿ ರೂ. ಯೋಜನೆ ಘೋಷಣೆ ಮಾಡಲಿದ್ದಾರೆ. ಜಾರ್ಖಂಡ್​​​ ಸಿಂದ್ರಿಯಲ್ಲಿ ರಸಗೊಬ್ಬರ ಫ್ಯಾಕ್ಟರಿ ಉದ್ಘಾಟಿಸಲಿರುವ ಅವರು, ಮಧ್ಯಾಹ್ನ 1.30ಕ್ಕೆ ಬಿಹಾರದ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

ಕಾರ್ಯಕ್ರಮದ ಭರದ ಸಿದ್ಧತೆಯಲ್ಲಿ ಬಿಜೆಪಿ: ಜನವರಿ 22ರಂದು ಅಯೋಧ್ಯೆಯಲ್ಲಿ ಬಾಲರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಬಿಹಾರಕ್ಕೆ ಭೇಟಿ ನೀಡುತ್ತಿದ್ದಾರೆ. ಪ್ರಾಣ ಪ್ರತಿಷ್ಠಾಪನೆ ಬಳಿಕ ಅವರು ಇಲ್ಲಿಗೆ ಬರುತ್ತಿರುವುದು ಸಂತಸದ ವಿಚಾರವಾಗಿದೆ. ಫೆಬ್ರವರಿ 4 ಜಿಲ್ಲೆಗೆ ಐತಿಹಾಸಿಕ ದಿನವಾಗಿರಲಿದೆ. ಇಡೀ ಉತ್ತರ ಬಿಹಾರವೂ 19 ಸಾವಿರ ಕೋಟಿ ರೂ.ಗಳ ಉಡುಗೊರೆಯನ್ನು ಪಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಜೊತೆಗೆ ಸಿಎಂ ನಿತೀಶ್​ ಕುಮಾರ್​ ಕೂಡ ವೇದಿಕೆ ಹಂಚಿಕೊಳ್ಳಲಿದ್ದು, ಉಪ ಮುಖ್ಯಮಂತ್ರಿ ಸಮರ್ಥ್​ ಚೌಧರಿ ಮತ್ತು ವಿಜಯ್​ ಕುಮಾರ್​ ಸಿನ್ಹಾ ಕೂಡ ಭಾಗಿಯಾಗಲಿದ್ದಾರೆ ಎಂದು ಬಿಜೆಪಿ ಸಂಸದ ಡಾ ಸಂಜಯ್​ ಜೈಸ್ವಾಲ್​ ತಿಳಿಸಿದ್ದಾರೆ.

ಎನ್​ಡಿಎ ಸರ್ಕಾರ ರಚನೆ ಬಳಿಕ ಪ್ರಧಾನಿ ಮೊದಲ ಕಾರ್ಯಕ್ರಮ: ಬಿಜೆಪಿ ಲೋಕಸಭಾ ಚುನಾವಣೆಗೆ ಸಜ್ಜಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಅನೇಕ ಸಮಾವೇಶಗಳು ನಿಗದಿಯಾಗಿವೆ. ಈ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್​ ಶಾ, ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಭಾಗಿಯಾಗಲಿದ್ದಾರೆ. ಈ ಸಮಾವೇಶದ ಸಿದ್ಧತೆಯನ್ನು ಪಕ್ಷ ನಡೆಸಿದೆ. ಬಿಹಾರ ಸಮಾವೇಶದ ಮೂಲಕ ಬಿಜೆಪಿಯ ಲೋಕಸಭಾ ಚುನಾವಣೆ ಪ್ರಚಾರ ಆರಂಭವಾಗಲಿದೆ.

ಪ್ರಧಾನಿ ಭಾಗಿಯಾಗುವ ಹಿನ್ನೆಲೆ ಬೆಟ್ಟಿಯಾ ಜಿಲ್ಲಾ​ ಮ್ಯಾಜಿಸ್ಟ್ರೇಟ್​​ ದಿನೇಶ್​​ ಕುಮಾರ್​ ರೈ, ಎಸ್​ಪಿ ಅಮರ್ಕೇಶ್​​ ಡಿ ಮೇಲ್ವಿಚಾರಣೆಯಲ್ಲಿ ಬಿಗಿ ಬಂದೋಬಸ್ತ್​​ ಪರಿಶೀಲಿಸಲಾಗುತ್ತಿದೆ.

ಇದನ್ನೂ ಓದಿ: 9ನೇ ಬಾರಿಗೆ ಸಿಎಂ ಆಗಿ ನಿತೀಶ್​ಕುಮಾರ್ ಪ್ರಮಾಣ; ಬಿಜೆಪಿಯ ಇಬ್ಬರಿಗೆ ಡಿಸಿಎಂ ಸ್ಥಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.