ಎರ್ನಾಕುಲಂ (ಕೇರಳ): ಫ್ಲಾಟ್‌ನಿಂದ ಬಿದ್ದು ಸಾವನ್ನಪ್ಪಿದ ತನ್ನ ಸಲಿಂಗಕಾಮಿ ಸಂಗಾತಿಯ ಮೃತದೇಹವನ್ನು ನೀಡುವಂತೆ ಯುವಕನೊಬ್ಬ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಕೇರಳದ ಹೈಕೋರ್ಟ್ ಪೊಲೀಸರು ಮತ್ತು ಖಾಸಗಿ ಆಸ್ಪತ್ರೆಯಿಂದ ವಿವರಣೆ ಕೇಳಿದೆ. ಕಲಮಶ್ಶೇರಿ ಪೊಲೀಸರು ವಿವರಣೆ ನೀಡುವಂತೆ ಕೇಳಲಾಗಿದೆ. ಅರ್ಜಿ ಇತ್ಯರ್ಥವಾಗುವವರೆಗೆ ಮೃತದೇಹವನ್ನು ಸುರಕ್ಷಿತವಾಗಿಡುವಂತೆ ಆಸ್ಪತ್ರೆಯ ಅಧಿಕಾರಿಗಳಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಇಬ್ಬರೂ ಕಲಮಸ್ಸೆರಿಯಲ್ಲಿ ಆರು ವರ್ಷಗಳ ಕಾಲ ಲಿವಿಂಗ್ ಟು ಗೆದರ್( ಸಹಜೀವನ) ನಲ್ಲಿದ್ದರು. ಫೆಬ್ರವರಿ 3 ರಂದು, ಪಾಲುದಾರರಲ್ಲಿ ಒಬ್ಬರು ಫ್ಲಾಟ್‌ನಿಂದ ಬಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ನಂತರ ಅವರು ಫೆಬ್ರವರಿ 4 ರಂದು ನಿಧನರಾಗಿದ್ದರು. 1.3 ಲಕ್ಷ ಮೊತ್ತದ ಬಿಲ್ ಪಾವತಿಸದ ಕಾರಣ ಮೃತದೇಹವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿಲ್ಲ. ನಂತರ ಯುವಕ ನ್ಯಾಯಾಲಯದ ಮೆಟ್ಟಿಲೇರಿದ್ದಾನೆ.
ಪಾಲುದಾರ ಎಂದು ಹೇಳಿಕೊಳ್ಳುವ ಅರ್ಜಿದಾರರಿಗೆ ಮೃತದೇಹವನ್ನು ಸ್ವೀಕರಿಸಲು ಯಾವುದೇ ಕಾನೂನುಬದ್ಧತೆ ಇಲ್ಲ ಎಂದು ಸರ್ಕಾರಿ ವಕೀಲರು ಹೇಳಿದ್ದಾರೆ. ಹೈಕೋರ್ಟ್ ಇಂದು ಮತ್ತೆ ಅರ್ಜಿಯ ವಿಚಾರಣೆ ನಡೆಸಲಿದೆ.
ಇತ್ತೀಚಿನ ಪ್ರಕರಣ, ಲಿವಿಂಗ್ ಟು ಗೆದರ್ನಲ್ಲಿದ್ದ ಗೆಳತಿ ಹತ್ಯೆ: ಇಂದೋರ್(ಮಧ್ಯಪ್ರದೇಶ), ತನ್ನೊಂದಿಗೆ ದೈಹಿಕ ಸಂಬಂಧ ಹೊಂದಲು ನಿರಾಕರಿಸಿದ್ದ ಹಿನ್ನೆಲೆ 20 ವರ್ಷದ ಯುವತಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಇಂದೋರ್‌ನಲ್ಲಿ ಬಂಧಿಸಲಾಗಿತ್ತು ಎಂದು ಪೊಲೀಸರು ಇತ್ತೀಚೆಗೆ ತಿಳಿಸಿದ್ದರು. ಇವರಿಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಪರಿಚಯವಾಗಿದ್ದರು. ದಿನ ಕಳೆದಂತೆ ಈ ಜೋಡಿಯ ನಡುವೆ ಸ್ನೇಹ ಬೆಳೆದಿತ್ತು. ಬಳಿಕ, ನಗರದ ಬಾಡಿಗೆ ಮನೆ ಪಡೆದುಕೊಂಡು ಒಟ್ಟಿಗೆ ವಾಸಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ಕೊಟ್ಟಿದ್ದರು.
ಡಿಸೆಂಬರ್ 7ರಂದು ರಾವ್ಜಿ ಬಜಾರ್ ಪ್ರದೇಶದಲ್ಲಿರುವ ಬಾಡಿಗೆ ಮನೆಯಲ್ಲಿ ತನ್ನ ಗೆಳತಿಯನ್ನು ಗೆಳೆಯನೊಬ್ಬ ಕೊಲೆ ಮಾಡಿದ್ದನು. ಬಳಿಕ ಡಿಸೆಂಬರ್ 9ರಂದು ಪೊಲೀಸರು ಆಕೆಯ ಮೃತದೇಹವನ್ನು ವಶಕ್ಕೆ ಪಡಿಸಿಕೊಂಡಿದ್ದರು ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಅಭಿನಯ್ ವಿಶ್ವಕರ್ಮ ಹೇಳಿದ್ದರು.
ಇದನ್ನೂ ಓದಿ: ಅಪ್ರಾಪ್ತ ಮಗಳ ಮೇಲಿನ ಅತ್ಯಾಚಾರ ಪ್ರಕರಣ: ತಂದೆಗೆ 123 ವರ್ಷ ಶಿಕ್ಷೆ ವಿಧಿಸಿದ ಕೇರಳ ಕೋರ್ಟ್