ETV Bharat / bharat

ಬಿಜೆಪಿಯ ಒಡೆದು ಆಳುವ, ಕೋಮುವಾದಿ ರಾಜಕಾರಣವನ್ನ ತಮಿಳುನಾಡಿನ ಜನತೆ ತಿರಸ್ಕರಿಸುತ್ತಾರೆ: ಉದಯನಿಧಿ ಸ್ಟಾಲಿನ್ - BJPs Communal Politics

ಬಿಜೆಪಿ ಒಡೆದು ಆಳುವ, ಕೋಮುವಾದಿ ರಾಜಕಾರಣ ಮಾಡಲು ಯತ್ನಿಸುತ್ತಿದೆ. ಆದರೆ, ಇದನ್ನು ತಮಿಳುನಾಡಿನ ಜನತೆ ಸಾರಾಸಗಟಾಗಿ ತಿರಸ್ಕರಿಸುತ್ತಾರೆ ಎಂದು ಸಚಿವ ಉದಯನಿಧಿ ಸ್ಟಾಲಿನ್ ತಿಳಿಸಿದರು.

Udhayanidhi Stalin
ಉದಯನಿಧಿ ಸ್ಟಾಲಿನ್
author img

By ETV Bharat Karnataka Team

Published : Feb 18, 2024, 5:14 PM IST

ಚೆನ್ನೈ (ತಮಿಳುನಾಡು): ತಮಿಳುನಾಡಿನಲ್ಲಿ ದಿವಂಗತ ಜಯಲಲಿತಾ ಅವರು ಬದುಕಿರುವವರೆಗೂ ನೀಟ್‌ ಪರೀಕ್ಷೆಗೆ ಅವಕಾಶವನ್ನೇ ನೀಡಿರಲಿಲ್ಲ. ಜಯಲಲಿತಾ ಮರಣದ ನಂತರವೇ ಆಗಿನ ಎಐಎಡಿಎಂಕೆ ಸರ್ಕಾರ ಕೇಂದ್ರದ ಬಿಜೆಪಿ ಸರ್ಕಾರದ ಒತ್ತಡದ ಮೇರೆಗೆ ಈ ಪರೀಕ್ಷೆಗೆ ಗುಟ್ಟಾಗಿ ಅನುಮತಿ ನೀಡಿತ್ತು ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಪುತ್ರ, ಸಚಿವ ಉದಯನಿಧಿ ಸ್ಟಾಲಿನ್ ಹೇಳಿದರು.

ಮುಂಬರುವ ಲೋಕಸಭೆ ಚುನಾವಣೆಗೆ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಸಜ್ಜಾಗಿದೆ. ರಾಮನಾಥಪುರದಲ್ಲಿ ಶನಿವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಡಿಎಂಕೆ ಯುವ ಘಟಕದ ಕಾರ್ಯದರ್ಶಿಯೂ ಆಗಿರುವ ಉದಯನಿಧಿ ಸ್ಟಾಲಿನ್, ನೀಟ್‌ ವಿಷಯದಲ್ಲಿ ಅಂದಿನ ಮುಖ್ಯಮಂತ್ರಿ ಜಯಲಲಿತಾ ತಾಳಿದ್ದ ನಿಲುವಿನ ಬಗ್ಗೆ ಶ್ಲಾಘಿಸುವ ಮೂಲಕ ನೆರೆದಿದ್ದ ಜನರನ್ನು ಅಚ್ಚರಿಗೊಳಿಸಿದರು. ಇದೇ ವೇಳೆ, ನೀಟ್‌ನಿಂದ ರಾಜ್ಯವನ್ನು ಹೊರಗಿಡಬೇಕೆಂಬ ಡಿಎಂಕೆಯ ಬೇಡಿಕೆಗೆ ಬದ್ಧವಾಗಿದೆ. ಇದರ ವಿರುದ್ಧ ಹೋರಾಟ ಮುಂದುವರೆಯಲಿದೆ ಎಂದರು.

ಜೊತೆಗೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಉದಯನಿಧಿ ಸ್ಟಾಲಿನ್​, ಬಿಜೆಪಿ ಒಡೆದು ಆಳುವ, ಕೋಮುವಾದಿ ರಾಜಕಾರಣ ಮಾಡಲು ಯತ್ನಿಸುತ್ತಿದೆ. ಆದರೆ, ಇದನ್ನು ತಮಿಳುನಾಡಿನ ಜನತೆ ಸಾರಾಸಗಟಾಗಿ ತಿರಸ್ಕರಿಸುತ್ತಾರೆ. ಕೇಂದ್ರ ಸರ್ಕಾರದಿಂದ ತಮಿಳುನಾಡು ಜನರಿಗೆ ಒಂದು ಪೈಸೆ ಕೂಡ ಪ್ರಯೋಜನವಾಗಿಲ್ಲ. ಅನುದಾನ ನೀಡುವಲ್ಲೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.

ರಾಜ್ಯವು ಕೇಂದ್ರ ಸರ್ಕಾರಕ್ಕೆ ಸಾಕಷ್ಟು ತೆರಿಗೆ ಪಾವತಿಸುತ್ತದೆ. ತೆರಿಗೆಯಾಗಿ ಪಾವತಿಸುವ ಪ್ರತಿ ರೂಪಾಯಿಗೆ ಕೇಂದ್ರ ಸರ್ಕಾರ ಕೇವಲ 28 ಪೈಸೆಯನ್ನು ರಾಜ್ಯಕ್ಕೆ ನೀಡುತ್ತಿದೆ. ಅಲ್ಲದೇ, ಕೇಂದ್ರ ಸರ್ಕಾರವು ದುರಾಡಳಿತದಲ್ಲಿ ತೊಡಗಿದೆ. ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಪ್ರಕಾರ, ಈ ಸರ್ಕಾರದಿಂದ ಬೊಕ್ಕಸಕ್ಕೆ 7.5 ಲಕ್ಷ ಕೋಟಿ ರೂ. ನಷ್ಟ ಉಂಟಾಗಿದೆ. ದ್ವಾರಕಾ ಎಕ್ಸ್‌ಪ್ರೆಸ್ ವೇನಲ್ಲಿ ಒಂದು ಕಿಲೋ ಮೀಟರ್ ರಸ್ತೆಗೆ ಕೇಂದ್ರವು 125 ಕೋಟಿ ರೂ. ಖರ್ಚು ಮಾಡಿದೆ. 88 ಸಾವಿರ ಮೃತ ಜನರ ಹೆಸರಲ್ಲಿ ಆರೋಗ್ಯ ವಿಮೆ ನೀಡಿರುವ ಬಗ್ಗೆ ಸಿಎಜಿ ವರದಿ ಬಹಿರಂಗಪಡಿಸಿದೆ ಎಂದು ಉದಯನಿಧಿ ಸ್ಟಾಲಿನ್ ಹೇಳಿದರು.

ಇದೇ ವೇಳೆ, ರಾಜ್ಯದಲ್ಲಿ ತಮ್ಮ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡಿದ ಅವರು, ನಮ್ಮ ಮುಖ್ಯಮಂತ್ರಿಯವರು ಅಧಿಕಾರ ಸ್ವೀಕರಿಸಿದ ಬಳಿಕ ಮಹಿಳೆಯರಿಗೆ ನಗರ ಬಸ್​ಗಳಲ್ಲಿ ಉಚಿತ ಪ್ರಯಾಣದ ಯೋಜನೆಗೆ ತಮ್ಮ ಮೊದಲ ಸಹಿ ಮಾಡಿದ್ದರು. ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತ ಬೆಳಗಿನ ಉಪಹಾರದ ಕಾರ್ಯಕ್ರಮದಿಂದ 17 ಲಕ್ಷ ಮಕ್ಕಳು ಪ್ರಯೋಜನ ಪಡೆಯುತ್ತಿದ್ದಾರೆ. ಮಹಿಳೆಯರಿಗೆ ತಿಂಗಳಿಗೆ 1000 ರೂ. ಸಹಾಯಧನ ಒದಗಿಸಲಾಗುತ್ತಿದೆ. ನಮ್ಮ ಪಕ್ಷದ ಪ್ರಚಾರದ ಸಮಯದಲ್ಲಿ ಈ ಯೋಜನೆಗಳನ್ನು ನೆನಪಿನಲ್ಲಿಟ್ಟುಕೊಂಡು ಜನತೆಗೆ ಮಾಹಿತಿ ಮುಟ್ಟಿಸಬೇಕೆಂದು ಕಾರ್ಯಕರ್ತರಿಗೆ ಸಚಿವ ಸ್ಟಾಲಿನ್ ಕರೆ​ ನೀಡಿದರು.

ಲೋಕಸಭೆ ಕದನಕ್ಕೆ ಉದಯನಿಧಿ ಸಾರಥ್ಯ: ಮೂರು ವರ್ಷಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಗೆಲುವಿನಲ್ಲಿ ಉದಯನಿಧಿ ಸ್ಟಾಲಿನ್ ಪ್ರಮುಖ ಪಾತ್ರವಹಿಸಿದ್ದರು. ಪಕ್ಷದ ಸ್ಟಾರ್ ಪ್ರಚಾರಕರಾದ ಉದಯನಿಧಿ ಡಿಎಂಕೆ ಪರವಾಗಿ ಮತದಾರರನ್ನು ಸೆಳೆಯುವಲ್ಲಿ ನಿರ್ಣಾಯಕರಾಗಿದ್ದರು. ಇದೀಗ ಲೋಕಸಭೆ ಕದನಕ್ಕೂ ಪ್ರಚಾರದ ಸಾರಥ್ಯವನ್ನು ಅವರು ವಹಿಸಿಕೊಂಡಿದ್ದಾರೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಫೆಬ್ರವರಿ 16ರಿಂದ ಡಿಎಂಕೆಯು 'ನಮ್ಮ ಹಕ್ಕುಗಳನ್ನು ಮರುಪಡೆಯಲು ಸ್ಟಾಲಿನ್ ಧ್ವನಿ', 'ಫ್ಯಾಸಿಸಂ ಪತನವಾಗುತ್ತದೆ, ಇಂಡಿಯಾ ಗೆಲ್ಲುತ್ತದೆ' ಎಂಬ ಘೋಷಣೆಗಳೊಂದಿಗೆ ಪ್ರಚಾರಕ್ಕೆ ಇಳಿದಿದೆ. ಈ ಮೂರು ದಿನಗಳ ಪ್ರಚಾರ ಅಭಿಯಾನದ ಭಾಗವಾಗಿ ಶನಿವಾರ ರಾಜ್ಯದಾದ್ಯಂತ 11 ಸ್ಥಳಗಳಲ್ಲಿ ಸಾರ್ವಜನಿಕ ಸಭೆಗಳನ್ನು ಆಯೋಜಿಸಲಾಗಿತ್ತು. ರಾಮನಾಥಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದಯನಿಧಿ ಪಾಲ್ಗೊಂಡು ಮೊದಲ ಬಾರಿಗೆ ಲೋಕಸಭೆ ಚುನಾವಣೆಯ ಪ್ರಚಾರ ಕೈಗೊಂಡರು.

ಇದನ್ನೂ ಓದಿ: ಮೋದಿ ಅಥವಾ ಇಡಿ ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ: ಉದಯನಿಧಿ ಸ್ಟಾಲಿನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.