ETV Bharat / bharat

2ನೇ ಹಂತದ ಲೋಕಸಭೆ ಚುನಾವಣೆ: 13 ರಾಜ್ಯಗಳ 88 ಕ್ಷೇತ್ರಗಳಲ್ಲಿ ಶೇ.63ರಷ್ಟು ವೋಟಿಂಗ್​ - 2nd Phase Election - 2ND PHASE ELECTION

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ 13 ರಾಜ್ಯಗಳ 88 ಕ್ಷೇತ್ರಗಳಿಗೆ ಇಂದು ಎರಡನೇ ಹಂತದ ಮತದಾನ ನಡೆಯಿತು.

Etv Bharat
Etv Bharat
author img

By PTI

Published : Apr 26, 2024, 10:58 PM IST

ನವದೆಹಲಿ: ಲೋಕಸಭೆ ಚುನಾವಣೆಗೆ ಎರಡನೇ ಹಂತದ ಮತದಾನ ಮುಕ್ತಾಯವಾಗಿದೆ. 13 ರಾಜ್ಯಗಳ 88 ಕ್ಷೇತ್ರಗಳಿಗೆ ಒಟ್ಟಾರೆ ಶೇ.63ರಷ್ಟು ಮತದಾನವಾಗಿದೆ. ಕೆಲವು ರಾಜ್ಯಗಳಲ್ಲಿ ಇವಿಎಂ ದೋಷಗಳು ಮತ್ತು ನಕಲಿ ಮತದಾನದ ಘಟನೆಗಳು ವರದಿಯಾಗಿವೆ.

ಉತ್ತರ ಪ್ರದೇಶದ ಮಥುರಾ, ರಾಜಸ್ಥಾನದ ಬನ್ಸ್ವಾರಾ ಮತ್ತು ಮಹಾರಾಷ್ಟ್ರದ ಪರ್ಭಾನಿಯ, ಕರ್ನಾಟಕದ ಚಾಮರಾಜನಗರದ ಕೆಲವು ಗ್ರಾಮಗಳಲ್ಲಿ ಮತದಾರರು ವಿವಿಧ ಕಾರಣಗಳಿಂದ ಮತದಾನ ಬಹಿಷ್ಕರಿಸುತ್ತಿದ್ದರು. ಆದರೆ, ನಂತರ ತಮ್ಮ ಹಕ್ಕು ಚಲಾಯಿಸಲು ಅಧಿಕಾರಿಗಳು ಮನವೊಲಿಸಿದರು.

ಹಲವಾರು ರಾಜ್ಯಗಳಲ್ಲಿ ತೀವ್ರವಾದ ಬಿಸಿಲಿನ ನಡುವೆಯೂ ಜನತೆ ಮತದಾನ ಮಾಡಿದರು. ಆದರೆ, ಬಹುತೇಕ ಎಲ್ಲೆಡೆ ಮತದಾನ ಶಾಂತಿಯುತವಾಗಿ ನಡೆದಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ರಾತ್ರಿ 8 ಗಂಟೆಯ ಹೊತ್ತಿಗೆ ಮತದಾನದ ಪ್ರಮಾಣ ಶೇ.63.50ರಷ್ಟು ದಾಖಲಾಗಿದೆ. ಎಲ್ಲಾ ಮತಗಟ್ಟೆಗಳಿಂದ ನಿಖರವಾದ ಮಾಹಿತಿ ಸಿಕ್ಕರೆ, ಇದರ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಆಯೋಗ ಹೇಳಿದೆ.

ಕೇರಳದ ಎಲ್ಲ 20 ಕ್ಷೇತ್ರಗಳು, ಕರ್ನಾಟಕದ 28ರ ಪೈಕಿ 14 ಕ್ಷೇತ್ರಗಳು, ರಾಜಸ್ಥಾನದ 13 ಕ್ಷೇತ್ರಗಳು, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದ ತಲಾ 8 ಕ್ಷೇತ್ರಗಳು, ಮಧ್ಯಪ್ರದೇಶದಲ್ಲಿ 6 ಕ್ಷೇತ್ರಗಳು, ಅಸ್ಸಾಂ ಮತ್ತು ಬಿಹಾರದಲ್ಲಿ ತಲಾ 5 ಕ್ಷೇತ್ರಗಳು, ಛತ್ತೀಸ್‌ಗಢ ಮತ್ತು ಪಶ್ಚಿಮ ಬಂಗಾಳದ ತಲಾ 3 ಕ್ಷೇತ್ರಗಳು, ಮಣಿಪುರ, ತ್ರಿಪುರ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ತಲಾ 1 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಎಲ್ಲ 88 ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಗೆ ಆರಂಭವಾಗಿ ಮತದಾನ ಸಂಜೆ 6 ಗಂಟೆಗೆ ಮುಕ್ತಾಯವಾಯಿತು. ಮತಗಟ್ಟೆಗಳಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದ ಮತದಾರರಿಗೆ ಮತದಾನದ ಅವಧಿ ಬಳಿಕವೂ ಮತದಾನ ಮಾಡಲು ಅವಕಾಶ ನೀಡಲಾಯಿತು.

ಚುನಾವಣಾ ಆಯೋಗದ ಅಂಕಿ-ಅಂಶಗಳ ಪ್ರಕಾರ, ಇಂದಿನ ಚುನಾವಣೆಯಲ್ಲಿ ತ್ರಿಪುರಾದಲ್ಲಿ ಅತ್ಯಧಿಕ ಶೇ.79.46ರಷ್ಟು ಮತದಾನ ದಾಖಲಾಗಿದೆ. ನಂತರದಲ್ಲಿ ಮಣಿಪುರದಲ್ಲಿ 77.32ರಷ್ಟು ಮತದಾನವಾಗಿದೆ. ಉತ್ತರ ಪ್ರದೇಶದಲ್ಲಿ ಶೇ.54.85 ಮತ್ತು ಬಿಹಾರದಲ್ಲಿ ಶೇ.55.08ರಷ್ಟು, ಮಧ್ಯಪ್ರದೇಶದಲ್ಲಿ ಶೇ.57.88ರಷ್ಟು, ಕೇರಳದಲ್ಲಿ ಶೇ.65.91ರಷ್ಟು ಮತದಾನವಾಗಿದೆ. ಈ ಬಾರಿ ಲೋಕಸಭೆಗೆ ಏಳು ಹಂತದ ಚುನಾವಣೆ ನಿಗದಿಯಾಗಿದೆ. ಮೊದಲ ಹಂತದ ಮತದಾನವು ಏಪ್ರಿಲ್ 19ರಂದು 102 ಕ್ಷೇತ್ರಗಳಿಗೆ ನಡೆದಿತ್ತು.

ಇದನ್ನೂ ಓದಿ: 'NOTA'ಗೆ ಹೆಚ್ಚು ಮತಗಳು ಬಂದರೆ, ಹೊಸ ಅಭ್ಯರ್ಥಿಗಳೊಂದಿಗೆ ಮರು ಚುನಾವಣೆ ನಡೆಸಬೇಕೆ?: ಚು.ಆಯೋಗಕ್ಕೆ ಸುಪ್ರೀಂ​ ನೋಟಿಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.