ಶ್ರೀನಗರ: 370ನೇ ವಿಧಿ ರದ್ದಾದ ಬಳಿಕ 2019ರಲ್ಲಿ ಕೇಂದ್ರಾಡಳಿತ ಪ್ರದೇಶವಾಗಿ ರೂಪುಗೊಂಡ ಜಮ್ಮು ಮತ್ತು ಕಾಶ್ಮೀರದ ಮೊದಲ ಮುಖ್ಯಮಂತ್ರಿಯಾಗಿ ನ್ಯಾಷನಲ್ ಕಾನ್ಫರೆನ್ಸ್ನ ನಾಯಕ ಒಮರ್ ಅಬ್ದುಲ್ಲಾ ಪ್ರಮಾಣ ವಚನ ಸ್ವೀಕರಿಸಿದರು. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಅಬ್ಧುಲ್ಲಾ ಕುಟುಂಬದ ಮೂರನೇ ಪೀಳಿಗೆ ಒಮರ್ ಎರಡನೇ ಬಾರಿ ಸಿಎಂ ಆಗಿ ಆಯ್ಕೆಗೊಂಡಿದ್ದಾರೆ. ಈ ಹಿಂದೆ ಒಮರ್ ಅವರ ಅಜ್ಜ ಶೇಖ್ ಅಬ್ಧುಲ್ಲಾ ಮತ್ತು ತಂದೆ ಫಾರೂಕ್ ಅಬ್ದುಲ್ಲಾ ಕೂಡ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.
#WATCH | Omar Abdullah took oath as the Chief Minister of Jammu and Kashmir, in Srinagar
— ANI (@ANI) October 16, 2024
The leaders from INDIA bloc including Lok Sabha LoP Rahul Gandhi, Congress leader Priyanka Gandhi Vadra, JKNC chief Farooq Abdullah, Samajwadi Party chief Akhilesh Yadav, PDP chief Mehbooba… pic.twitter.com/kasFd4sawM
ಒಮರ್ ಜೊತೆಗೆ ಐದು ಜನ ಶಾಸಕರು ಕೂಡ ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಶ್ರೀನಗರದ ಶೇರ್- ಎ- ಕಾಶ್ಮೀರ್ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂಡಿಯಾ ಒಕ್ಕೂಟದ ನಾಯಕರು ಉಪಸ್ಥಿತರಿದ್ದು, ಒಮರ್ ಅವರಿಗೆ ಶುಭಾಶಯ ತಿಳಿಸಿದರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಎಎಪಿ ರಾಜ್ಯ ಸಭಾ ಸಂಸದ ಸಂಜಯ್ ಸಿಂಗ್, ಡಿಎಂಕೆ ಕನ್ನಿಮೋಳಿ, ಎನ್ಸಿಪಿ ಸುಪ್ರಿಯಾ ಸುಳೆ ಹಾಗೂ ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಕೂಡ ಹಾಜರಿದ್ದರು.
#WATCH | J&K: JKNC chief Farooq Abdullah arrived at Sher-i-Kashmir International Conference Centre (SKICC) in Srinagar to attend the swearing-in ceremony of Omar Abdullah as the Chief Minister of Jammu and Kashmir.
— ANI (@ANI) October 16, 2024
(Earlier visuals) pic.twitter.com/aA1PRxPPpT
ಎನ್ಸಿ ಶಾಸಕಾಂಗ ಪಕ್ಷದಲ್ಲಿ ಅಬ್ದುಲ್ಲಾ ಅವರನ್ನು ಮುಖ್ಯಮಂತ್ರಿಯಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಈ ಮೊದಲು ಅಖಂಡ ಜಮ್ಮು ಮತ್ತು ಕಾಶ್ಮೀರದ ಸಿಎಂ ಆಗಿ 2009ರಿಂದ 2014ರವರೆಗೆ ಅವರು ಕಾರ್ಯ ನಿರ್ವಹಿಸಿದ್ದರು.
NC leaders Sakina Itoo, Javed Ahmed Rana, Javed Ahmad Dar and Independent MLA Satish Sharma took oath as cabinet ministers of Jammu and Kashmir pic.twitter.com/xGDQK73B8z
— ANI (@ANI) October 16, 2024
ಚುನಾವಣಾ ಪೂರ್ವ ಮೈತ್ರಿಯೊಂದಿಗೆ ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ಸ್ಪರ್ಧೆ ಮಾಡಿದ್ದ ಎನ್ಸಿ ಮತ್ತು ಕಾಂಗ್ರೆಸ್ 48 ಸ್ಥಾನಗಳನ್ನು ಗೆದ್ದು ಸರ್ಕಾರ ರಚನೆಗೆ ಬಹುಮತ ಪಡೆದುಕೊಂಡಿತ್ತು.
My congratulations to Shri. @OmarAbdullah on taking oath as the CM of J&K. I am sure he will bring peace and development to the region. Shri. Farooq Abdullah is a dear friend, my best wishes to him as well. May God bless J&K which has a very special place in my heart. pic.twitter.com/zsEIn62pfb
— H D Devegowda (@H_D_Devegowda) October 16, 2024
ಇದನ್ನೂ ಓದಿ: ಕೇಂದ್ರಾಡಳಿತ ಪ್ರದೇಶದ ಸಿಎಂ ಆಗಿ ಕಾರ್ಯ ನಿರ್ವಹಣೆ ಸವಾಲಿನಿಂದ ಕೂಡಿರಲಿದೆ; ಒಮರ್ ಅಬ್ಧುಲ್ಲಾ